ವೃತ್ತಿಯಲ್ಲಿ ಡಯಲೆಕ್ಟ್‌ ಕೋಚ್‌ ಆಗಿದ್ದ ಆ್ಯಂಡ್ರ್ಯು  ಸುಮಾರು 200ಕ್ಕೂ ಹೆಚ್ಚು ನಟರಿಗೆ ಅಗತ್ಯ ತರಬೇತು ನೀಡಿ, ಚಿತ್ರರಂಗಕ್ಕೆ ಕೊಡುಗೆಯಾಗಿ  ನೀಡಿದ್ದರು. ಹಾಲಿವುಡ್‌ನಿಂದ ಯಾರೇ ಸಿನಿ ಜರ್ನಿ ಆರಂಭಿಸಿದರೂ, ಅವರು ಮೊದಲು ಹೋಗುತ್ತಿದ್ದದ್ದೇ ಆ್ಯಂಡ್ರ್ಯು ಬಳಿ ನಟನಾ ತರಬೇತಿ ಪಡೆಯುವುದಕ್ಕೆ.

2001ರಲ್ಲಿ 'Kate & Lepord' ಚಿತ್ರದ ಮೂಲಕ ತಾನೇ ಬಣ್ಣದ ಲೋಕಕ್ಕೆ ಕಾಲಿಟ್ಟ ಆ್ಯಂಡ್ರ್ಯು ಇನ್ನಿಲ್ಲ ಎಂಬ ಸುದ್ದಿ ಅಭಿಮಾನಿಗಳಿಗೆ ಆತಂಕ ತಂದಿದೆ. ಈ ಸುದ್ದಿಯನ್ನು ನಟನ ಮ್ಯಾನೇಜರ್‌ ಮಾಧ್ಯಮಗಳಿಗೆ  ತಿಳಿಸಿದ್ದಾರೆ. ಆ ನಂತರ ಈ ಬಗ್ಗೆ ಪತ್ನಿಯೂ ಟ್ಟೀಟ್‌ ಮಾಡಿದ್ದಾರೆ.

ಖ್ಯಾತ ಗಾಯಕ ಹಾಗೂ ನಟನೂ ಆಗಿದ್ದ ಮಾರ್ಕ್‌ ಬಲಿ ಪಡೆದ ಕೊರೋನಾ ವೈರಸ್!

ಆ್ಯಂಡ್ರ್ಯುಗೆ ಎರಡು ದಿನಗಳ ಹಿಂದೆ ಕೊರೋನಾ ವೈರಸ್‌ ಸೋಂಕು ತಾಗಿತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ವಿಧಿ ಅವರನ್ನು ಇಹಲೋಕಕ್ಕೆ ಕರೆದೊಯ್ಯಿತು. ಆ್ಯಂಡ್ರ್ಯು ಪತ್ನಿ ಗೇಬ್ರಿಯೆಲ್ ರೋಜರ್ಸ್ ಅವರಿಗೂ ಕೊರೋನಾ ವೈರಸ್‌ ತಾಗಿದ್ದು, ಆಸ್ಟ್ರೇಲಿಯಾದಲ್ಲಿ ಕ್ವಾರಂಟೈನ್‌ ಆಗಿದ್ದಾರೆ. 

 'ಆ್ಯಂಡ್ರ್ಯು ಅವರಿಗೆ ಎರಡು ದಿನಗಳ ಹಿಂದೇಯಷ್ಟೇ ಕೊರೋನಾ ವೈರಸ್‌ ತಾಗಿರುವುದು ದೃಢಪಟ್ಟಿತ್ತು. ಆದರೆ, ಹೆಚ್ಚು ಅನುಭವಿಸಲಿಲ್ಲ. ಯಾವ ಹಿಂಸೆಯನ್ನೂ ಅನುಭಸದೇ ಇಹಲೋಕ ತ್ಯಜಿಸಿದ್ದಾರೆ,' ಎಂದು ಪತ್ನಿ ಟ್ಟೀಟ್‌ ಮಾಡಿದ್ದಾರೆ. 

 

2015 ಹಾಗೂ 2017ರಲ್ಲಿ ತೆರೆ ಕಂಡ  'ಸ್ಟಾರ್‌ ವಾರ್‌' ಸೀರಿಸ್‌ನಲ್ಲಿ Caluan Emmat ಪಾತ್ರದಲ್ಲಿ ಮಿಂಚಿದ  ಆ್ಯಂಡ್ರ್ಯು  2018ರಲ್ಲಿ 'ಸೋಲೋ' ಚಿತ್ರದಲ್ಲಿ  Moloch ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹಾಲಿವುಡ್‌ ಚಿತ್ರರಂಗದಲ್ಲೇ ಇತಿಹಾಸ ಸೃಷ್ಟಿಸಿದ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಆ್ಯಂಡ್ರ್ಯು ಆತ್ಮಕ್ಕೆ ಶಾಂತಿ ಸಿಗಲಿ. RIP.