ಟ್ರೋಲ್ ಮಾಡುವವರಿಗೆ ಬಾಲಿವುಡ್ ನ ಸದಾ ಚೆಲುವೆ ಮಲೈಕಾ ಅರೋರಾ ಸರಿಯಾದ ತಿರುಗೇಟು ನೀಡಿದ್ದಾರೆ. ನಾನು ನನ್ನಂತೆ ಬೆದುಕುತ್ತೇನೆ,, ನಿಮ್ಮ ನಕಾರಾತ್ಮಕ ವಿಚಾರಗಳನ್ನು ನೀವೇ ಇಟ್ಟುಕೊಳ್ಳಿ ಎಂದು ಟ್ರೋಲಿಗರಿಗೆ ಬಿಸಿ ಮುಟ್ಟಿಸಿದ್ದಾರೆ.

ಒಂದೆಡೆ ಮಲೈಕಾ ಮತ್ತು ಅರ್ಜನ್ ಕಪೂರ್ ಮದುವೆ ಡೇಟ್ ಫಿಕ್ಸ್ ಆಗಿದೆ ಎಂಬ ಸುದ್ದಿ ಹರಿದಾಡುತ್ತಿದ್ದರೆ ಇದೆಲ್ಲದಕ್ಕೂ ಕ್ಯಾರೆ ಎನ್ನದೆ ಮಲೈಕಾ ಬೇಸಿಗೆಯನ್ನು ತಮ್ಮದೆ ಶೈಲಿಯಲ್ಲಿ ಎಂಜಾಯ್ ಮಾಡುತ್ತಿದ್ದಾರೆ.

Add Asianetnews Kannada as a Preferred SourcegooglePreferred

ಬಾತ್ ರೂಂ ನಲ್ಲಿ ಪೂನಂ, ಎಷ್ಟು ಚೆಂದ ಸೀರೆ ಉಟ್ಟಿದ್ದಳು! ವಿಡಿಯೋ ವೈರಲ್

ಮಲೈಕಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬೇಸಿಗೆಗೆ ತಂಪು ಮಾಡಿಕೊಳ್ಳುವ ಉಪಾಯ ತಿಳಿಸಿ ನೀರಿನಲ್ಲಿ ಈಜಾಡುತ್ತಿರುವ ಫೋಟೋ ಶೇರ್ ಮಾಡಿದ್ದು ಅಭಿಮಾನಿಗಳಿಂದ ಮೆಚ್ಚುಗೆ ಗಳಿಸಿಕೊಂಡಿತ್ತು. ಆದರೆ ಕೆಲವರು ಇದನ್ನೇ ಇಟ್ಟುಕೊಂಡು ಟ್ರೋಲ್ ಮಾಡಿದ್ದರು.

ಸದಾ ಖುಷಿಯಿಂದ ಇರುವುದು ನನ್ನ ಆಯ್ಕೆ, ಸಾಧ್ಯವಾದರೆ ಒಳ್ಳೆಯ ಅಭಿಪ್ರಾಯ ಹಂಚಿಕೊಳ್ಳಿ.. ನಿಮ್ಮ ನೆಗೆಟೀವ್ ಸಂಗತಿಗಳನ್ನು ಹರಿಯಬಿಟ್ಟು ಸಮಯ ವ್ಯರ್ಥ ಮಾಡಿಕೊಳ್ಳಬೇಡಿ ಎಂದು ಬಿಸಿ ಮುಟ್ಟಿಸಿದ್ದಾರೆ.

View post on Instagram