ಮುಂಬೈ[ಮಾ. 28] ಕರಣ್ ಜೋಹರ್ ಅವರ ಶೋ ನಲ್ಲಿ ಮಾತನಾಡಿದ್ದ ಆಲಿಯಾ ಬಟ್ ಮತ್ತು ರಣಬೀರ್ ಕಪೂರ್ ಮೇಲೆ ಕಂಗನಾ ರಣಾವತ್ ಮುನಿಸು ತೋರಿಸಿದ್ದಾರೆ.

ತಮ್ಮ ಸೆಕ್ಸ್ ಜೀವನದ ಬಗ್ಗೆ ಇಬ್ಬರು ಚೆಲ್ಲು ಚೆಲ್ಲಾಗಿ ಮಾತನಾಡುತ್ತಾರೆ. ಆದರೆ ದೇಶದ ಬಗ್ಗೆ ಮಾತನಾಡುವುದಿಲ್ಲ ಎಂದಿದ್ದಾರೆ.

ಮಾತನಾಡುವುದು ವೈಯಕ್ತಿಕ ವಿಷಯ, ಇದೇ ದೇಶದ ವಿಚಾರಕ್ಕೆ ಬಂದರೆ? ಎಂದು ಪ್ರಶ್ನೆ ಮಾಡಿದ್ದಾರೆ. ಬೇಕಾದಷ್ಟು ಮಾತನಾಡುವ ಇವರು ಸೋಶಿಯಲ್ ಮೀಡಿಯಾದಲ್ಲಿ ವಿವಿಧ ಪೋಟೋ ಹಂಚಿಕೊಳ್ಳುತ್ತಾರೆ ಎನ್ನುತ್ತಾ ಕರಣ್ ಜೋಹರ್ ಶೋಗೆ  ಬೊಟ್ಟು ಮಾಡಿರುವ ಕಂಗನಾ ದೇಶದ ವಿಚಾರದ ಬಗ್ಗೆ ಒಂದು ಸೊಲ್ಲು ಎತ್ತಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.