ಬಾಲಿವುಡ್ ನಟ ಅನಿಲ್ ಕಪೂರ್ ಅವರು ಬೆಂಗಳೂರಿನೊಂದಿಗಿನ ತಮ್ಮ ಆರಂಭಿಕ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಪ್ರೊಡಕ್ಷನ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಅವರನ್ನು ಬೆಂಗಳೂರು ಹೇಗೆ ನಟನನ್ನಾಗಿ ಮಾಡಿತು ಎಂಬುದನ್ನು ಅವರು ವಿವರಿಸಿದ್ದಾರೆ.

ಬ್ಬ ಸಾಮಾನ್ಯ ಪ್ರೊಡಕ್ಷನ್‌ ಬಾಯ್‌ ಆಗಿ ಹೀರೋಗಳನ್ನು ಏರ್‌ಪೋರ್ಟ್‌ನಿಂದ ಪಿಕ್‌ ಮಾಡುವ ಕೆಲಸ ಮಾಡುತ್ತಿದ್ದ ನನ್ನನ್ನು ಹೀರೋ ಮಾಡಿದ್ದು ಇದೇ ಬೆಂಗಳೂರು ಎಂದು ಬಾಲಿವುಡ್‌ ಪ್ರಖ್ಯಾತ ನಟ ಹೇಳಿದ್ದಾರೆ. ಟೈಮ್ಸ್‌ ಆಫ್‌ ಇಂಡಿಯಾಗೆ ನೀಡಿದ ಸಂದರ್ಶನವೊಂದರಲ್ಲಿ ಬಾಲಿವುಡ್‌ ನಟ ಅನಿಲ್‌ ಕಪೂರ್‌ ಬೆಂಗಳೂರಿನ ಜೊತೆಗಿನ ತಮ್ಮ ಸುಮಧುರ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಖಾಸಗಿ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಬಂದಿದ್ದ ಅನಿಲ್‌ ಕಪೂರ್‌, ತಮ್ಮ ಸಿನಿ ಬದುಕಿನ ಆರಂಭದ ನೆನಪುಗಳಿಗೆ ಜಾರಿದರು. ಅಲ್ಲಿ ಬೆಂಗಳೂರು ಹೊರತಾಗಿ ಬೇರೆ ಯಾವ ನಗರಕ್ಕೂ ಸ್ಥಳವಿಲ್ಲ ಎಂದಿದ್ದಾರೆ.

ಬಹುಶಃ ಅದು 1977 ಅಥವಾ 78ನೇ ಇಸವಿ ಇರಬಹುದು. ನಾನು ಮೊದಲ ಬಾರಿಗೆ ಬೆಂಗಳೂರಿಗೆ ಬಂದಿದ್ದೆ. ಆಗ ನಾನು ಪ್ರೊಡಕ್ಷನ್‌ ಬಾಯ್‌ ಆಗಿದ್ದೆ. ಅಂದು ನನ್ನ ಕೆಲಸ ಬೆಂಗಳೂರು ಏರ್‌ಪೋರ್ಟ್‌ನಿಂದ ನಟರನ್ನು ಕರೆತರುವುದು. ಬಳಿಕ ಅವರನ್ನು ಮೈಸೂರು ಹಾಗೂ ಮೇಲುಕೋಟೆಗೆ ಕರೆದುಕೊಂಡು ಹೋಗುತ್ತಿದ್ದೆ. ಅಲ್ಲಿ ಫಿಲ್ಮ್‌ ಶೂಟಿಂಗ್‌ ನಡೆಯುತ್ತಿತ್ತು. ಕನ್ನಡದಲ್ಲಿ ಸೂಪರ್‌ಹಿಟ್‌ ಆಗಿದ್ದ ಪುಟ್ಟಣ್ಣ ಕಣಗಾಲ್‌ ನಿರ್ದೇಶನದ ಪಡುವಾರಹಳ್ಳಿ ಪಾಂಡವರು ಸಿನಿಮಾವನ್ನು ಹಿಂದಿಗೆ'ಹಮ್‌ ಪಾಂಚ್‌' ಅನ್ನೋ ಹೆಸರಲ್ಲಿ ರಿಮೇಕ್‌ ಮಾಡಲಾಗುತ್ತಿತ್ತು. ಇದು ಹಿಂದಿಯಲ್ಲಿ ದೊಡ್ಡ ಸಕ್ಸಸ್‌ ಕೂಡ ಆಗಿತ್ತು.

ಈ ಸಿನಿಮಾ ಹಿಂದಿಯಲ್ಲಿ ಪ್ರಮುಖ ನಟರಾದ ಮಿಥುನ್‌ ಚಕ್ರವರ್ತಿ, ಅಮರೀಶ್‌ ಪೂರಿ, ನಾಸಿರುದ್ದೀನ್‌ ಶಾ, ಶಬಾನಾ ಅಜ್ಮಿ, ದೀಪ್ತಿ ನಾವಲ್‌ ಹಾಗೂ ಗುಲ್ಶನ್‌ ಗ್ರೋವರ್‌ ಅವರ ಸಿನಿ ಜೀವನದ ಟರ್ನಿಂಗ್‌ ಪಾಯಿಂಟ್‌ ಆಯಿತು. ಹಮ್‌ ಪಾಂಚ್‌ ಸಿನಿಮಾವನ್ನು ದಿವಂಗತ ಬಾಪು ನಿರ್ದೇಶನ ಮಾಡಿದ್ದರು. ಇಡೀ ಸಿನಿಮಾದ ಶೂಟಿಂಗ್‌ ಮೇಲುಕೋಟೆಯಲ್ಲಿ ನಡೆದಿತ್ತು. ಅಂದು ಇದೇ ಕರ್ನಾಟಕದ ಮಣ್ಣಿನಲ್ಲಿ ಬಾಪು ಸಾಬ್‌ ನನ್ನ ಗಮನಿಸಿದ್ದರು.

ಆಗ ನಾನು ಕೆಲವೊಂದು ಕೆಲಸಗಳನ್ನು ಇಂಟರ್ನಿಯಾಗಿದ್ದೆ. ನನ್ನಲ್ಲಿನ ಪ್ರತಿಭೆ ಗಮನಿಸಿದ್ದ ಅವರು, ನಾನು ನಟನೆ ಮಾಡಬಹುದು ಎಂದು ತೀರ್ಮಾನ ಮಾಡಿದ್ದರು. ನಟನಾಗಬೇಕು ಎಂದು ಬಯಸಿದ್ದೆ. ಆದರೆ, ಮುಂಬೈನಲ್ಲಿ ನನಗೆ ಕೆಲಸ ಸಿಗಲಿಲ್ಲ. ಅದಕ್ಕಾಗಿ ನಾನು ಪ್ರೊಡಕ್ಷನ್‌ಗೆ ಇಳಿದೆ ಎಂದು ತಿಳಿಸಿದೆ.

ನಗುವ ನಯನ... ಹಾಡುವ ಮೂಲಕ ಕನ್ನಡಿಗರ ಮನಗೆದ್ದ ಬಾಲಿವುಡ್​ ನಟ ಅನಿಲ್​ ಕಪೂರ್​: ವಿಡಿಯೋ ವೈರಲ್​

ಆ ಬಳಿಕ ಅವರು ನನಗೆ ತೆಲುಗು ಸಿನಿಮಾ ವಂಶ ವೃಕ್ಷಂನಲ್ಲಿ ಅವಕಾಶ ನೀಡಿದರು. ಹೀರೋ ಆಗಿ ನನ್ನ ಮೊದಲ ಸಿನಿಮಾ ಇದು. ವಂಶ ವೃಕ್ಷಂ ರಿಲೀಸ್‌ ಆದಾಗ ಮಣಿರತ್ನಂ ಈ ಸಿನಿಮಾವನ್ನು ಮದ್ರಾಸ್‌ನಲ್ಲಿ ನೋಡಿದ್ದರು. ನಾನು ಸ್ಥಳೀಯ ಹುಡುಗ ಎಂದು ಅವರು ಅಂದುಕೊಂಡಿದ್ದರು. ಬಳಿಕ ನಾನು ಮುಂಬೈ ಹುಡುಗ ಎಂದು ಗೊತ್ತಾದ ಬಳಿಕ ನನ್ನ ಕನ್ನಡದಲ್ಲಿ ಪಲ್ಲವಿ ಅನುಪಲ್ಲವಿ ಸಿನಿಮಾದಲ್ಲಿ ಅವಕಾಶ ನೀಡಿದರು. ಇಲ್ಲಿಂದ ನನ್ನ ಸಿನಿಮಾ ಪ್ರಯಾಣ ಆರಂಭವಾಯಿತು ಎಂದು ಅನಿಲ್‌ ಕಪೂರ್‌ ನೆನಪಿಸಿಕೊಂಡಿದ್ದಾರೆ.
ಸಾಮಾನ್ಯ ಹುಡುಗನಾಗಿ, ಇಂಟರ್ನಿಯಾಗಿ, ಪ್ರೊಡಕ್ಷನ್‌ ಹುಡುಗನಾಗಿ, ಲೊಕೇಷನ್‌ ಮ್ಯಾನೇಜರ್‌ ಆಗಿ, ಪಿಕಪ್‌ ಬಾಯ್‌ ಆಗಿದ್ದವನನ್ನು ಹೀರೋ ಮಾಡಿದ್ದು ಇದೇ ಬೆಂಗಳೂರು ಎಂದು ಅವರು ನೆನಪಿಸಿಕೊಂಡಿದ್ದಾರೆ.

32 ವರ್ಷಗಳ ಹಿಂದೆ ಆಂಧ್ರಕ್ಕೆ ಬಂದಿಳಿದ ಬಾಲಿವುಡ್ ನಟ ಅನಿಲ್ ಕಪೂರ್, ಈ ತೆಲುಗು ನಟನ ಕ್ರೇಜ್ ನೋಡಿ ಶಾಕ್ ಅಗಿದ್ದರು!