ಮುಂಬೈ[ಡಿ.07]: ಬಾಲಿವುಡ್ ನಾಯಕ ಅಕ್ಷಯ್ ಕುಮಾರ್ ತಮ್ಮ ನಾಗರೀಕತೆ ವಿಚಾರವಾಗಿ ವಿವಾದಕ್ಕೀಡಾಗುತ್ತಾರೆ. ಹಲವಾರು ಬಾರಿ ಕೆನಡಾ ನಾಗರೀಕತೆ ಹೊಂದಿರುವ ಅಕ್ಷಯ್ ಕುಮಾರ್ ವಿಮರ್ಶಕರನ್ನೆದುರಿಸಬೇಕಾಗುತ್ತದೆ. ಸದ್ಯ ಅಕ್ಷಯ್ ಕುಮಾರ್ ತಮ್ಮ ನಾಗರೀಕತೆ ವಿಚಾರವಾಗಿ ಪೋಸ್ಟ್ ಒಂದನ್ನು ಮಾಡಿದ್ದು, ಭಾರತೀಯನೆಂದು ಸಾಬೀತುಪಡಿಸಲು ತನಗೆ ದಾಖಲೆಗಳ ಅಗತ್ಯ ಬೀಳಬಹುದೆಂದು ತಾನು ಭಾವಿಸಿರಲಿಲ್ಲ ಎಂದಿದ್ದಾರೆ.

ಅಕ್ಷಯ್‌ ಜೊತೆ ಸಿನಿಮಾ ಮಾಡಲು ಯಾವ ನಿರ್ದೇಶಕರೂ ಮುಂದೆ ಬರ್ತಿಲ್ಲ?

ಈ ಕುರಿತಾಗಿ ಪ್ರತಿಕ್ರಿಯಿಸಿರುವ ಅಕ್ಷಯ್ ಕುಮಾರ್ ತಾನೊಬ್ಬ ಭಾರತೀಯ. ಆದರೆ ಜನರು ಈ ಕುರಿತು ಅನುಮಾನ ವ್ಯಕ್ತಪಡಿಸಿದಾಗ ಬೇಜಾರಾಗುತ್ತದೆ. ತಾನು ಭಾರತೀಯ ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. 

ಕೆನಡಾದ ನಾಗರೀಕತೆ ಹೊಂದಿರುವ ಅಕ್ಷಯ್ ಕುಮಾರ್ ಈ ಹಿಂದೆರಯೂ ಹಲವಾರು ಬಾರಿ ತಾನೊಬ್ಬ ಭಾರತೀಯ ಎಂಬ ಹೇಳಿಕೆ ನೀಡುತ್ತಲೇ ಇದ್ದಾರೆ. ಆದರೆ ಜನರು ಮಾತ್ರ, ದೇಶಭಕ್ತಿಯನ್ನಾಧರಿಸಿ ಬರುವ ಸಿನಿಮಾದಲ್ಲಷ್ಟೇ ಅಕ್ಷಯ್ ನಟರಾಗುತ್ತಾರೆ. ಆದರೆ ಅವರೊಬ್ಬ ದೇಶಭಕ್ತರಲ್ಲ ಹೀಗಾಗೇ ಭಾರತೀಯ ನಾಗರೀಕತೆ ಪಡೆಯದೆ, ಕೆನಡಾ ನಾಗರೀಕತೆ ಹೊಂದಿದ್ದಾರೆ ಎಂದು ಟೀಕಿಸುತ್ತಿದ್ದರು.