ದೇಶಾದ್ಯಂತ ಕಾತರ ಮೂಡಿಸಿರೋ ಸಲ್ಮಾನ್ ಖಾನ್ ಹಾಗೂ ಸುದೀಪ್ ಅಭಿನಯದ ಬಹುನಿರೀಕ್ಷಿತ ದಬಾಂಗ್-3 ಸಿನಿಮಾ ಇದೇ ಡಿಸೆಂಬರ್ 20ಕ್ಕೆ ತೆರೆಗೆ ಅಪ್ಪಳಿಸಲಿದೆ.

ಇದ್ರಿಂದ ಸಿನಿಮಾ ಪ್ರಚಾರದ ಅಬ್ಬರವೂ ಸಹ ಜೋರಾಗಿದೆ.  ಬಾಲಿವುಡ್‍ನ ಸೂಪರ್ ಸ್ಟಾರ್ ಸಲ್ಲು  ದಬಾಂಗ್ 3 ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.

'ದಬಾಂಗ್ -3' ಬಿಟ್ಟು ಕ್ರಿಕೆಟ್‌ ಸ್ಟಾರ್‌ಗಳ ಕಾಣಿಸಿಕೊಂಡ ಸುದೀಪ್-ಸಲ್ಲುಭಾಯ್!

ಅದ್ರಂತೆ ಇಂದು [ಮಂಗಳವಾರ] ಬೆಂಗಳೂರಿನಲ್ಲೂ ಸಹ ಸಲ್ಲು ಭಾಯ್ ದಬಾಂಗ್-3 ಸಿನಿಮಾ ಪ್ರಚಾರ ಮಾಡಿದ್ರು. ಈ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ ವಿಜಯೇಂದ್ರ ಹಾಗೂ ಸಲ್ಮಾನ್ ಖಾನ್ ಭೇಟಿಯಾದರು. 

ಈ ಬಗ್ಗೆ ಬಿಜೆಪಿಯ ಯುವ ನಾಯಕ ಬಿ.ವೈ. ವಿಜಯೇಂದ್ರ ತಮ್ಮ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನು ದಬಾಂಗ್ 3ನಲ್ಲಿ ಕಿಚ್ಚ ಸುದೀಪ್​ ಖಡಕ್​ ವಿಲನ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಲ್ಲು ಕರ್ನಾಟಕದಲ್ಲೂ ಸಹ ಸಿನಿಮಾ ಪ್ರಚಾರ ಮಾಡಿದ್ರು. ಈ ಸಿನಿಮಾ ಕನ್ನಡಕ್ಕೂ ಡಬ್ ಆಗಿದ್ದು, ಸಲ್ಮಾನ್ ಖಾನ್ ಕನ್ನಡದಲ್ಲೇ ಹೇಗೆಲ್ಲಾ ಡೈಲಾಗ್ ಹೊಡೆದಿದ್ದಾರೆ ಎನ್ನುವುದು ಕನ್ನಡಿಗರಲ್ಲಿ ಭಾರೀ ಕುತೂಹಲ  ಮೂಡಿಸಿದೆ.