ಬೆಂಗಳೂರು[ಸೆ.12] ಅತಿ ಹೆಚ್ಚಿನ ಟಿಆರ್ ಪಿ  ನೀಡುವ ಶೋ ಬಿಗ್ ಬಾಸ್ ಯಾವಾಗ ಶುರುವಾಗಲಿದೆ ಎಂದು ಕಿಚ್ಚ ಸುದೀಪ್ ಅವರೇ ಉತ್ತರ ಹೇಳಿದ್ದಾರೆ.  ಹಾಗಾದರೆ ಬಿಗ್ ಬಾಸ್ 7ನೇ ಸಿಸನ್ ಯಾವಾಗ ಶುರು? ಇಲ್ಲಿದೆ ಉತ್ತರ.

ಕಿಚ್ಚ ಸುದೀಪ್ ಅವರ ಪೈಲ್ವಾನ್ ಚಿತ್ರದದಲ್ಲಿ ಬ್ಯುಸಿಯಾಗಿದ್ದರು ಬಿಗ್ ಬಾಸ್ ಗೆ ಸಂಬಂಧಿಸಿದ ಸುದ್ದಿಯೊಂದನ್ನು ನೀಡಿದ್ದಾರೆ.  ಇತ್ತೀಚೆಗೆ ಮುಂಬಯಿನ ಟ್ವಿಟರ್ ಕಚೇರಿಯ ಬ್ಲೂ ರೂಮ್‌ನಲ್ಲಿ ಕುಳಿತು #AskPailwaan ಹ್ಯಾಶ್‌ಟ್ಯಾಗ್ ಮೂಲಕ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಈ ವೇಳೆ ಎದುರಾದ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಬಿಗ್ ಬಾಸ್ ಗುಟ್ಟು ತೆರೆದಿರಿಸಿದರು.

ಈ ವಾಹಿನಿಯಲ್ಲಿ ಕನ್ನಡದ ಬಿಗ್ ಬಾಸ್‌ ಬರಲ್ಲ, ಯಾವುದರಲ್ಲಿ ಪ್ರಸಾರ?

ಅಕ್ಟೋಬರ್ ಎರಡನೇ ವಾರದಲ್ಲಿ ಬಿಗ್ ಬಾಸ್ ಆರಂಭವಾಗಲಿದೆ ಸಾರ್ ಎಂದು ಪ್ರಶ್ನೆಗೆ ಉತ್ತರಿಸಿದ್ದಾರೆ. ಅಂದರೆ ಕನ್ನಡಿಗರ ಮುಂದೆ ಬಿಗ್ ಬಾಸ್ ಸೀಸನ್ 7 ಅಕ್ಟೋಬರ್ ಎರಡನೇ ವಾರದಿಂದ ತೆರೆದುಕೊಳ್ಳಲಿದೆ.