ಕನ್ನಡ ಕಿರುತೆರೆಯಲ್ಲಿ ಮತ್ತೆ ಬಿಗ್ ಬಾಸ್ ಅಬ್ಬರ ಶುರುವಾಗಲಿದೆ. ಬಿಗ್ ಬಾಸ್ ಮನೆ ತೆರೆಯಲಿದೆ. ಪ್ರೇಕ್ಷಕರಿಗೆ ಭರಪೂರ ಮನರಂಜನೆ ಶುರುವಾಗಲಿದೆ. ಹೊಸ ಹೊಸ ಗೇಮ್, ಮಲ್ಟಿ ಟಾಸ್ಕ್, ಮನೆಯೊಳಗೆ ನಡೆಯುವ ಆಟ ನೋಡುವುದೇ ಒಂದು ಗಮ್ಮತ್ತು. ವೀಕೆಂಡ್ ಬಂತೆಂದರೆ ಸಾಕು ಕಿಚ್ಚನ ನಿರೂಪಣೆ ಕೇಳುವುದೇ ಚೆಂದ. 

ಬಿಗ್‌ಬಾಸ್ ಪ್ರೋಮೋ ಮೇಕಿಂಗ್: ಕಿಚ್ಚನಿಗ್ಯಾಕೆ ಹೆಲ್ತ್ ಚೆಕ್‌ ಅಪ್?  

ಬಿಗ್ ಬಾಸ್ ಸೀಸನ್ 6 ನ್ನು ಯಶಸ್ವಿಯಾಗಿ ಪೂರೈಸಿ, ಸೀಸನ್ 7 ಕ್ಕೆ ಕಾಲಿಟ್ಟಿದೆ. ಈ ಬಾರಿ ಬಿಗ್ ಬಾಸ್ ವಿಶೇಷ ಎಂದರೆ ಸಾಮಾನ್ಯರಿಗೆ ಅವಕಾಶವಿರುವುದಿಲ್ಲ. ಸೆಲೆಬ್ರಿಟಿಗಳಿಗೆ ಮಾತ್ರ ಅವಕಾಶ ನೀಡಿದ್ದಾರೆ. ಸದ್ಯದಲ್ಲೇ ಶುರುವಾಗಲಿದೆ. ಕಲರ್ಸ್ ಕನ್ನಡದಲ್ಲಿ ಪ್ರೋಮೋವನ್ನು ಬಿಟ್ಟಿದ್ದಾರೆ. ಕಿಚ್ಚ ಸುದೀಪ್ ನಿರೂಪಣೆ ಅದ್ಭುತವಾಗಿದೆ.