Asianet Suvarna News Asianet Suvarna News

ನಟ ಉಪೇಂದ್ರನನ್ನು ಕನ್ನಡ ಚಿತ್ರರಂಗದಿಂದ 5 ವರ್ಷ ಬ್ಯಾನ್‌ ಮಾಡಿ: ಪಿಲ್ಮ್‌ ಚೇಂಬರ್‌ಗೆ ಪತ್ರ

ಜಾತಿನಿಂದನೆ ಮೂಲಕ ಗಲಭೆ, ಅಶಾಂತಿ ಸೃಷ್ಟಿಸಲು ಮುಂದಾಗಿರುವ ನಟ ಉಪೇಂದ್ರ ಅವರನ್ನು ಕನ್ನಡ ಚಿತ್ರರಂಗದಿಂದ 5 ವರ್ಷ ನಿಷೇಧಿಸುವಂತೆ ಫಿಲಂ ಚೇಂಬರ್‌ಗೆ ಪತ್ರ ಬರೆಯಲಾಗಿದೆ.

Ban for Actor Upendra from sandalwood film industry for 5 years request letter to Film Chamber sat
Author
First Published Aug 14, 2023, 4:21 PM IST | Last Updated Aug 14, 2023, 4:37 PM IST

ಬೆಂಗಳೂರು (ಆ.14):  ಕನ್ನಡ ಚಿತ್ರರಂಗದ ಖ್ಯಾತ ನಟ ರಿಯಲ್‌ ಸ್ಟಾರ್‌ ಉಪೇಂದ್ರ ಅವರು ಜಾತಿನಿಂದನೆ ಮಾಡುವ ಮೂಲಕ ರಾಜ್ಯದಲ್ಲಿ ಗಲಭೆ, ಅಶಾಂತಿ ಸೃಷ್ಟಿಸಲು ಮುಂದಾಗಿದ್ದಾರೆ. ಜಾತಿ-ಜಾತಿಗಳನ್ನು ಎತ್ತಿ ಕಟ್ಟುವ ಹೊರಟಿರುವ ಉಪೇಂದ್ರ ಅವರನ್ನು ಕನ್ನಡ ಚಿತರರಂಗದಿಂದ 5 ವರ್ಷಗಳ ಕಾಲ ನಿಷೇಧ ಮಾಡಬೇಕು ಎಂದು ಕರ್ನಾಟಕ ಚಲನಚಿತ್ರ ಮಂಡಳಿಗೆ ಪತ್ರವನ್ನು ಬರೆದಿದ್ದಾರೆ.

ಇನ್ನು ಪತ್ರವನ್ನು ಬರೆದಿರುವ ವ್ಯಕ್ತಿ ಸಾಮಾಜಿಕ ಕಾರ್ಯಕರ್ತ ನವೀನ್ ಎನ್ನುವವರಿಂದ ಕರ್ನಾಟಕ ಚಲನಚಿತ್ರಮಂಡಳಿಗೆ ಮನವಿ ಸಲ್ಲಿಸಲಾಗಿದೆ. ಚಿತ್ರರಂಗದಿಂದ 5 ವರ್ಷ ಬ್ಯಾನ್ ಮಾಡಲು ಪತ್ರದಲ್ಲಿ ಮನವಿ ಮಾಡಿ ಉಲ್ಲೇಖ ಮಾಡಿದ್ದಾರೆ. ಉಪೇಂದ್ರ ಅವರು ಗಲಭೆ, ಅಶಾಂತಿ ಸೃಷ್ಟಿಸಲು ಉಪೇಂದ್ರ ಹೊರಟಿದ್ದಾರೆ. ಅವರು ಜಾತಿ ಜಾತಿಗಳನ್ನ ಎತ್ತಿಕಟ್ಟೊ ಕೆಲಸ ಮಾಡಿದ್ದಾರೆ. ಈ ಪ್ರಕರಣವನ್ನು ಫಿಲ್ಮ್ ಚೇಂಬರ್ ಗಂಭೀರವಾಗಿ ಪರಿಗಣಿಸಬೇಕು. ನಾಡಿನ ಗೌರವವನ್ನು ಎತ್ತಿಹಿಡಿದು ಶೋಷಿತರ ಪರ ನಿಲ್ಲಬೇಕು. ಆದ್ದರಿಂದ ಉಪೇಂದ್ರ ಅವರನ್ನು ಈ ಕೂಡಲೆ ಕನಿಷ್ಠ 5 ವರ್ಷ ಚಿತ್ರರಂಗದಿಂದ ನಿಷೇಧ ಹೇರಬೇಕು ಎಂದು ಮನವಿ ಸಲ್ಲಿಸಲಿದ್ದಾರೆ. 

ನಟ ಉಪೇಂದ್ರನಿಗೆ ಬಿಗ್‌ ರಿಲೀಫ್‌ ಕೊಟ್ಟ ಹೈಕೋರ್ಟ್‌: ಎಫ್‌ಐಆರ್‌ಗೆ ತಡೆ

ಪತ್ರದ ವಿವರ ಇಲ್ಲಿದೆ ನೋಡಿ...

ಮಾನ್ಯರೇ,

ವಿಷಯ : ದಲಿತ ಸಮುದಾಯವನ್ನು ನಿಂದಿಸುವ ಮತ್ತು ಸಮುದಾಯಗಳನ್ನು ಜಾತಿಗಳನ್ನು ಎತ್ತಿಕಟ್ಟಿ, ಅಶಾಂತಿ, ಗಲಭೆ ಹುಟ್ಟಿಸುವ ಉದ್ದೇಶದಿಂದ ದಲಿತ ನಿಂದನೆ ಮಾಡಿರುವ ನಟ ಉಪೇಂದ್ರ ಅಲಿಯಾಸ್ ಉಪೇಂದ್ರ ರಾವ್ ರನ್ನು ಚಲನಚಿತ್ರ ವಾಣಿಜ್ಯ ಮಂಡಳಿ ಕನಿಷ್ಠ 5ವರ್ಷ ನಿಷೇದ ಹರಬೇಕೆಂದು ಮನವಿ

ಕನ್ನಡದ ನಟಿ ಎಂದು ಹೇಳಿಕೊಳ್ಳು ತ್ತಿರುವ ಉಪೇಂದ್ರ ಅಲಿಯಾಸ್ ಉಪೇಂದ್ರರಾವ್ ಅಲಿಯಾಸ್ ಉಪ್ಪಿ ಎಂಬಾತ ಮೂನ್ನ ಅಂದರೆ 12.08.2023 ರಂದು ತನ್ನದೇ upendra face book account ನಲ್ಲಿ ತನ್ನದೇ ಮಾತುಗಳ ವಿಡಿಯೋವನ್ನು ಪ್ರಸಾರ ಮಾಡಿರುತ್ತಾರೆ. ಆತ ತನ್ನ ವಿಡಿಯೋದಲ್ಲಿ ಕಟ್ಟಿ ಜನಗಳು ಎಂಬುದಕ್ಕೆ ಉದಾಹರಣೆಯಾಗಿ "ಊರು ಅಂದಲೆ ಹೊಲಗೇರಿ ಇರುತ್ತದೆ” ಎಂದು ಹೇಳಿದ್ದಾನೆ.

ಉಪೇಂದ್ರ ಅಲಿಯಾಸ್ ಉಪೇಂದ್ರ ರಾವ್ ಅಲಿಯಾಸ್ ಉಪ್ಪಿ ಎಂಬಾತ ಬ್ರಾಹ್ಮಣ ಸಮುದಾಯಕ ಸೇರಿದು ಸಾಮಾನ್ಯವಾಗಿ ದಲಿತರು ವಾಸ ಮಾಡುವ ಪ್ರದೇಶವನ್ನು ಹೊಲಗೇರಿ ಎಂದು ಹೇಳಿದ್ದಾನ. ಅಂದರೆ ಈ ರೀತಿ ದಲಿತರು ವಾಸ ಮಾಡುವ ಪ್ರದೇಶಗಳು ಕಟ್ಟ ಪ್ರದೇಶಗಳಾಗಿದ್ದು, ಊರು ಅಂದರೆ ಕಟ್ಟಿ ಪ್ರದೇಶಗಳೂ, ಕೆಟ್ಟ ಜನರೂ ಇರುತ್ತಾರೆ ಎಂಬ ಅರ್ಥದಲ್ಲಿ ಹೇಳಿರುತ್ತಾರೆ. ಜನ ಕೆಟ್ಟದರ ವಿರುದ್ಧ ಇರಬೇಕು ಎಂದರೆ ಹೊಲಗೇರಿ ವಿರುದ್ಧ ಇರಬೇಕು ಎಂದು ಸಮುದಾಯಗಳನ್ನು ಹೊಲೆಯರ ವಿರುದ ಎತ್ತಿಕಟ್ಟಿದ್ದಾರೆ. ಇದು ಸಾರ್ವಜನಿಕರಿಗೆ ಭಯ ಅಥವಾ ಎಚ್ಚರಿಕೆಯನ್ನು ಉಂಟುಮಾಡುವ ಉದ್ದೇಶದಿಂದ, ಅಥವಾ ಯಾವುದೇ ವ್ಯಕ್ತಿಯನ್ನು ಸಾರ್ವಜನಿಕ ನೆಮ್ಮದಿಯ ವಿರುದ್ಧ ಅಪರಾಧ ಮಾಡಲು ಪ್ರೇರೇಪಿಸಬಹುದಾಗಿದೆ. ಯಾವುದೇ ವರ್ಗ ಅಥವಾ ಸಮುದಾಯದ ವಿರುದ್ಧ ಯಾವುದೇ ಅಪರಾಧವನ್ನು ಮಾಡಲು ಯಾವುದೇ ವರ್ಗ ಅಥವಾ ವ್ಯಕ್ತಿಗಳ ಸಮುದಾಯವನ್ನು ಪ್ರಚೋದಿಸುವ ಉದ್ದೇಶದಿಂದ IPC 505(1)(B) (C) ಯನ್ನು ಉಲ್ಲಂಘನೆ ಮಾಡಲಾಗಿದೆ, ಜೊತೆಗೆ ಇದೆ ಪ್ರಕರಣದ ಅಡಿಯಲ್ಲಿ ಈಗಾಗಲೇ ಹಲಸೂರು ಗೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಎಫ್ ಐ ಆರ್ ನೋಂದಾಣಿಯಾಗಿದೆ.

ಪೊಲೀಸರ ಕೈಗೂ ಸಿಗದೇ ಹೈಕೋರ್ಟ್‌ ಮೊರೆ ಹೋದ 'ಬುದ್ಧಿವಂತ': FIR ರದ್ದತಿಗೆ ಅರ್ಜಿ ಸಲ್ಲಿಸಿದ ಉಪೇಂದ್ರ

ಇದನ್ನು ವಾಣಿಜ್ಯ ಮಂಡಳಿ ಗಂಭೀರವಾಗಿ ಪರಿಗಣಿಸಿ ಇತಿಹಾಸವುಳ್ಳ ಕನ್ನಡ ಚಲನಚಿತ್ರ ವಾಣಿಜ ಮಂಡಳಿ ಗೌರವವನ್ನು ಎತ್ತಿ ಹಿಡಿದು ಶೋಷಿತರ ಜೊತೆಗೆ ವಾಣಿಜ್ಯ ಮಂಡಳಿ ನಿಲ್ಲುತ್ತದೆ ಎಂಬ ಸಂದೇಶ ಕೊಡಲು ನಟ ಎಂದು ಹೇಳಿಕೊಳ್ಳುವ ಈತನನ್ನು ಈ ಕೂಡಲೇ ಕನಿಷ್ಟ 5 ವರ್ಷ ನಿಷೇಧ ಹರಬೇಕೆಂದು ಕೇಳಿಕೊಳ್ಳುತ್ತಿದ್ದೇನೆ' ಎಂದು ಸಾಮಾಜಿಕ ಕಾರ್ಯಕರ್ತ ನವೀನ್ ಪತ್ರವನ್ನು ಬರದಿದ್ದಾರೆ.

Latest Videos
Follow Us:
Download App:
  • android
  • ios