ಮುಂಬೈ[ಅ. 30]  ಕ್ಯಾನ್ಸರ್ ರೋಗಿಗಳಿಗೆ ಆರ್ಥಿಕ ಸಹಾಯ ಮಾಡುವ ಉದ್ದೇಶದಿಂದ ಸನ್ನಿಲಿಯೋನ್ ಬಣ್ಣಗಳಿಂದ ತುಂಬಿದ ಕಲಾಕೃತಿಯನ್ನು ಹರಾಜಿಗೆ  ಇಟ್ಟಿದ್ದರು. ಇದನ್ನು ಗಮನಿಸಿದ ಡಯೆಟ್ಸಬ್ಯಾ ಎಂಬ ಇನ್ಸ್ಟಾಗ್ರಾಮ್ ಖಾತೆದಾರರು, ಇದು ಫ್ರಾನ್ಸ್ ಚಿತ್ರಕಾರ ಮಲಿಕಾ ಫಾವ್ರೆ ಅವರ ಕೃತಿಚೌರ್ಯ ಎಂಬ ಆಕ್ಷೇಪ ಎತ್ತಿದ್ದಾರೆ. ಕೃತಿ ಚೌರ್ಯ ಮಾಡಲಾಗಿದೆ ಎನ್ನಲಾದ ಮೂಲ ಕಲಾಕೃತಿಯ ಫೋಟೋವನ್ನು ಸನ್ನಿಲಿಯೋನ್ ತಯಾರಿಸಿದ್ದ ಕಲಾಕೃತಿ ಪಕ್ಕದಲ್ಲೇ ಪೋಸ್ಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದ್ದರು.

ನಾವೆಲ್ಲರೂ ಆರ್ಥಿಕ ಸಹಾಯ ಮಾಡುವ ಉದ್ದೇಶದ ಜೊತೆಗಿದ್ದೇವೆ. ಆದರೆ ಅದಕ್ಕಾಗಿ ಇನ್ನೊಬ್ಬರ ಕೃತಿಯನ್ನು ನಕಲು ಮಾಡಿ ಅವರ ಹೆಸರನ್ನೂ ಉಲ್ಲೇಖ ಮಾಡದೇ ಇರುವುದು ಕೆಟ್ಟದ್ದು ಎಂದು ಸನ್ನಿಗೆ ತಿಳಿವಳಿಕೆ ನೀಡುವ ಕೆಲಸವನ್ನು ಮಾಡಿದ್ದಾರೆ.

ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಸನ್ನಿ 2 ಕೋಟಿ ನೀಡಿದ್ರಾ?

ಸನ್ನಿ ಲಿಯೋನ್ ಪ್ರತಿಕ್ರಿಯೆ ಬಂದ ಬಳಿಕ ಡಯೆಟ್ಸಬ್ಯಾ ಎಂಬ ಇನ್ಸ್ಟಾಗ್ರಾಮ್ ಖಾತೆದಾರರು ಮಲಿಕಾ ಫಾವ್ರೆ ಅವರ ಪ್ರತಿಕ್ರಿಯೆಯನ್ನೂ ಉಲ್ಲೇಖಿಸಿದ್ದಾರೆ.  ಸನ್ನಿ ಲಿಯೋನ್ ಕನಿಷ್ಠ ಹೆಸರನ್ನಾದರೂ ಉಲ್ಲೇಖಿಸಬೇಕಿತ್ತು. ಬೌದ್ಧಿಕ ಆಸ್ತಿಯ ಬಗ್ಗೆ ಉಲ್ಲೇಖಿಸಿವುದು ನಿಮಗೆ ತಿಳಿದಿಲ್ಲವೇ?  ಎಂದು ಪ್ರಶ್ನೆ ಮಾಡಿದ್ದಾರೆ.

ದೀಪಾವಳಿ ಹಬ್ಬಕ್ಕೆ ಸನ್ನಿ ಲಿಯೋನ್ ಅಭಿಮಾನಿಗಳಿಗೆ ಆಫರ್ ಸಹ ನೀಡಿದ್ದರು. ತಮ್ಮ Suncitystore ಎನ್ನುವ ಆನ್ ಲೈನ್ ಶಾಪಿಂಗ್ ವೆಬ್ ಸೈಟ್ ನಡೆಸುತ್ತಿದ್ದಾಳೆ. ಇಲ್ಲಿ ಕಾಸ್ಮೆಟಿಕ್ಸ್, ಲಿಪ್ ಸ್ಟಿಕ್, ಕ್ರೀಮ್, ಬ್ಯೂಟಿ ಪ್ರಾಡಕ್ಟ್ ಎಲ್ಲವೂ ಸಿಗುತ್ತದೆ. ಈ ಸೈಟ್ ನಲ್ಲಿ ದೀಪಾವಳಿ ಹಬ್ಬಕ್ಕೆ flat 50 ಪರರ್ಸೆಂಟ್ ಆಫರ್  ನೀಡಿ ಸುದ್ದಿಮಾಡಿದ್ದರು.

 

ಅಕ್ಟೋಬರ್ 31ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: