ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರು ಇಸ್ಲಾಂಗೆ ಮತಾಂತರವಾಗಲು ಕಲಬುರ್ಗಿಯ ಫಕೀರರು ನೆರವಾದರು ಎಂದು ರಾಜೀವ್ ಮೆನನ್ ಹೇಳಿದ್ದಾರೆ. ರೆಹಮಾನ್ ಅವರ ಕುಟುಂಬ ಆರ್ಥಿಕ ಒತ್ತಡದಲ್ಲಿದ್ದ ಕಾರಣ ಮತ್ತು ಸೂಫಿ ಸಂತರ ಭೇಟಿಯ ನಂತರ ಅವರು ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು.

ನವದೆಹಲಿ (ಮಾ.19): ‘ದಿಲೀಪ್ ಕುಮಾರ್‌ ಆಗಿ ಹುಟ್ಟಿದ್ದ ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್ ಅವರು ಇಸ್ಲಾಂಗೆ ಮತಾಂತರ ಆಗಲು ನೆರವಾಗಿದ್ದು ಕಲುಬುರ್ಗಿಯ ಫಕೀರರು‘ ಎಂದು ರೆಹಮಾನ್‌ರ ಆಪ್ತ ರಾಜೀವ್‌ ಮೆನನ್‌ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ತಮ್ಮ ಮತ್ತು ರೆಹಮಾನ್ ಅವರ ಸ್ನೇಹದ ಬಗ್ಗೆ ಸುದೀರ್ಘವಾಗಿ ಮಾತನಾಡಿರುವ ರಾಜೀವ್‌ ಮೆನೆನ್‌, ‘ದಿಲೀಪ್ ಕುಮಾರ್‌ ಆಗಿ ಜನಿಸಿದ್ದ ಎ.ಆರ್‌.ರೆಹಮಾನ್ ಅವರು ಮುಸ್ಲಿಂ ಧರ್ಮದ ಕಡೆಗೆ ಆಕರ್ಷಿತರಾಗಿದ್ದರು. ಕಲಬುರ್ಗಿಯ ಫಕೀರರೊಬ್ಬರು ರೆಹಮಾನ್‌ ಅವರ ಮನೆಗೆ ಭೇಟಿ ನೀಡಿ ರೆಹಮಾನ್‌ ಮತ್ತು ಅವರ ಕುಟುಂಬದ ಸದಸ್ಯರಿಗೆ ಇಸ್ಲಾಂ ಧರ್ಮ ಸ್ವೀಕಾರದ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಆಗ ರೆಹಮಾನ್‌ ಕುಟುಂಬಕ್ಕೆ ಹಿಂದಿ ಬಾರದ ಕಾರಣ, ನಾನು ಅವರಿಗೆ ಅನುವಾದ ಮಾಡಿಕೊಡುತ್ತಿದೆ’ ಎಂದು ಹೇಳಿದ್ದಾರೆ.

ಜೊತೆಗೆ ರೆಹಮಾನ್‌, ಕೌಟುಂಬಿಕವಾಗಿ ಸಾಕಷ್ಟು ಒತ್ತಡಕ್ಕೆ ಒಳಗಾಗಿದ್ದರು. ಅದರಲ್ಲಿಯೂ ಹೆಚ್ಚಾಗಿ ಸಹೋದರಿಯರ ಮದುವೆ ವಿಚಾರವಾಗಿ ಒತ್ತಡದಲ್ಲಿದ್ದರು’ ಎಂದು ರಾಜೀವ್ ಮೆನನ್ ಹೇಳಿದ್ದಾರೆ. ಈ ಹಿಂದೆ ರೆಹಮಾನ್ ಸಂದರ್ಶನವೊಂದರಲ್ಲಿ ತಮ್ಮ ಮತಾಂತರದ ಬಗ್ಗೆ ಮಾತನಾಡಿದ್ದರು. 

ಎ.ಆರ್. ರೆಹಮಾನ್ ವಿಚ್ಛೇದನ ವದಂತಿಗೆಸಾಯಿರಾ ಭಾನು ಸ್ಪಷ್ಟನೆ, ಹೇಳಿದ್ದೇನು?

‘ತಂದೆಯ ಮರಣದ ನಂತರ ಕುಟುಂಬ ಆರ್ಥಿಕ ಒತ್ತಡಕ್ಕೆ ಸಿಲುಕಿತ್ತು. ದೇವರ ಮೇಲೆ ನಂಬಿಕೆಯುಳ್ಳ ನನ್ನ ತಾಯಿ ಕರಿಮುಲ್ಲಾ ಶಾ ಖಾದ್ರಿ ಎನ್ನುವ ಸೂಫಿ ಸಂತರನ್ನು ಭೇಟಿಯಾಗಿದ್ದರು. ಇಸ್ಲಾಂ ಧರ್ಮವನ್ನು ಆರಿಸಿಕೊಳ್ಳಲು ನನಗೆ ಯಾರೂ ಬಲವಂತ ಮಾಡಿ ಇರಲಿಲ್ಲ. ಖಾದ್ರಿ ಭೇಟಿಯಾದ ಬಳಿಕ ಅವರ ಮಾತುಗಳಿಂದ ಪ್ರೇರಿತನಾಗಿ ಸೂಫಿ ಅತ್ಯುತ್ತಮ ಆಯ್ಕೆ ಎಂದು ಇಸ್ಲಾಂ ಆಯ್ಕೆ ಮಾಡಿಕೊಂಡೆ’ ಎಂದಿದ್ದರು.

ಮಾಜಿ ಪತ್ನಿಗೆ ಸರ್ಜರಿಯಾಗುತ್ತಿದ್ದಂತೆ ಬೆಳ್ಳಂಬೆಳಗ್ಗೆ ಆಸ್ಪತ್ರೆಗೆ ದಾಖಲಾದ ಎ ಆರ್‌ ರೆಹಮಾನ್!‌