ಅನುಷ್ಕಾ ಶೆಟ್ಟಿ ಅವರು ಸದ್ಯ ಸಿನಿಮಾದಲ್ಲಿ ಅಷ್ಟೊಂದು ಸಕ್ರಿಯವಾಗಿಲ್ಲ. ಬಾಹುಬಲಿ ಸಿನಿಮಾ ಬಳಿಕ ನಟಿ ಅನುಷ್ಕಾ ಶೆಟ್ಟಿಯವರು ಅಷ್ಟಾಗಿ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಅದು ಅವಕಾಶಗಳ ಕೊರತೆ ಇನ್ನಲಾಗದು, ಬದಲಿಗೆ ಬಹಳಷ್ಟು ಸಿನಿಮಾಗಳನ್ನು..

ಮಂಗಳೂರು ಮೂಲದ ನಟಿ ಅನುಷ್ಕಾ ಶೆಟ್ಟಿ (Anushka Shetty) ಅವರು ಇದೀಗ ಮತ್ತೊಮ್ಮೆ ಸುದ್ದಿ ಆಗಿದ್ದಾರೆ. ನಟಿ ಅನುಷ್ಕಾ ಶೆಟ್ಟಿ ಅವರು 128 ತೆಂಗಿನಕಾಯಿ ಅಷ್ಟ ದ್ರವ್ಯ ಮಹಾಗಣಪತಿ ಯಾಗವನ್ನು ಮಾಡಿಸಿದ್ದಾರೆ. ಮಧೂರು ಮದನಂತೇಶ್ವರ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಸೇವೆ ಮಾಡಿಸಿದ್ದಾರೆ ನಟಿ ಅನುಷ್ಕಾ ಶೆಟ್ಟಿ. 14 ವರ್ಷಗಳ ಬಳಿಕ ಅಷ್ಟಬಂಧ ಬ್ರಹ್ಮಕಳಶೋತ್ಸವ, 33 ವರ್ಷಗಳ ಬಳಿಕ ಸಿದ್ದಿವಿನಾಯಕನಿಗೆ ಮೂಡಪ್ಪ ಸೇವೆ ಅಲ್ಲಿ ನಡೆಯುತ್ತಿದೆ. ಈ ಪ್ರಯುಕ್ತ ನಟಿ ಅನುಷ್ಕಾರಿಂದ ಸೇವೆ ನಡೆದಿದೆ. 

ಮಧೂರು ಮದನಂತೇಶ್ವರ ಶ್ರೀ ಸಿದ್ದಿವಿನಾಯಕ ದೇವಸ್ಥಾನ ಕ್ಷೇತ್ರಕ್ಕೆ ಬರಲಾಗದ ಕಾರಣ, ನಟಿ ಅನುಷ್ಕಾ ಶೆಟ್ಟಿ ತನ್ನ ಹೆಸರಿನಲ್ಲಿ ಯಾಗ ಮಾಡಿಸಿದ್ದಾರೆ. ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಧೂರಿನಲ್ಲಿ ಈ ದೇವಸ್ಥಾನ ಇದೆ. ತಮಗೆ ಸ್ವತಃ ಬರಲಾಗದಿದ್ದರೂ ತಮ್ಮ ಹೆಸರಿನಲ್ಲಿ ಪೂಜೆ ಮಾಡಿಸಿ ತಮ್ಮ ಇಷ್ಟದೈವಕ್ಕೆ ಭಕ್ತಿಪೂರ್ವಕ ಪ್ರಣಾಮ ಸಲ್ಲಿಸಿದ್ದಾರೆ ನಟಿ ಅನುಷ್ಕಾ ಶೆಟ್ಟಿ. ಸಾಮಾನ್ಯವಾಗಿ ನಟಿ ಅನುಷ್ಕಾ ಶೆಟ್ಟಿಯವರು ತಮ್ಮ ಮೂಲವನ್ನು ಮರೆಯದೇ, ಅಲ್ಲಿನ ಪೂಜಾ ಕೈಂಕರ್ಯದಲ್ಲಿ ಭಾಗಿಯಾಗುತ್ತಾರೆ. 

ಯಾಕೆ ರಾಷ್ಟ್ರಪತಿಯನ್ನೂ ತಲುಪಲಿದೆ 'ಯುದ್ಧ ಕಾಂಡ'..?ಈ ಬಗ್ಗೆ ಅಜೇಯ್ ರಾವ್ ಹೇಳಿದ್ದೇನು..?

ನಟಿ ಅನುಷ್ಕಾ ಶೆಟ್ಟಿ ಅವರು ಸದ್ಯ ಸಿನಿಮಾದಲ್ಲಿ ಅಷ್ಟೊಂದು ಸಕ್ರಿಯವಾಗಿಲ್ಲ. ಬಾಹುಬಲಿ ಸಿನಿಮಾ ಬಳಿಕ ನಟಿ ಅನುಷ್ಕಾ ಶೆಟ್ಟಿಯವರು ಅಷ್ಟಾಗಿ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಅದು ಅವಕಾಶಗಳ ಕೊರತೆ ಇನ್ನಲಾಗದು, ಬದಲಿಗೆ ಬಹಳಷ್ಟು ಸಿನಿಮಾಗಳನ್ನು ಮಾಡಿದ ಮೇಲೆ ಅವರು ಸ್ವಲ್ಪ ಹೆಚ್ಚು ಚೂಸಿ ಆಗಿದ್ದಾರೆ ಎನ್ನಬಹುದು. 'ನಿಶ್ಯಬ್ಧಂ' ಸಿನಿಮಾ ಅಮೆಜಾನ್‌ ಫ್ರೈಂ ನಲ್ಲಿ ಬಿಡುಗಡೆಯಾದ ಬಳಿಕ ನಟಿ ಅನುಷ್ಕಾ ಶೆಟ್ಟಿಯವರ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಆದರೆ, ಇದೀಗ ಅವರ ನಟನೆಯ 'ಘಾಟಿ (Gahaati)' ಸಿನಿಮಾ ತೆರೆಗೆ ಬರುತ್ತಿದೆ. 

ಅನುಷ್ಕಾ ಶೆಟ್ಟಿಯವರು ತೆಲುಗಿನ 'ಅರುಂಧತಿ' ಸಿನಿಮಾ ಮೂಲಕ ಭಾರತದಾದ್ಯಂತ ಸುದ್ದಿಯಾದವರು. ಆ ಬಳಿಕ ನಟಿ ಅನುಷ್ಕಾ ಬಹಳಷ್ಟು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಆದರೆ, ಅರುಂಧತಿ ಸಿನಿಮಾ ಕೊಟ್ಟಷ್ಟು ಖ್ಯಾತಿಯನ್ನು ಅವರಿಗೆ ಬೇರಾವುದೇ ಸಿನಿಮಾ ಕೊಟ್ಟಿಲ್ಲ. ಬಾಹುಬಲಿ ಚಿತ್ರದಲ್ಲಿ ನಟಿ ಅನುಷ್ಕಾ ಶೆಟ್ಟಿಯವರು ಭಾರೀ ಎಂಬಷ್ಟು ಮಿಂಚಿದ್ದರೂ ಕೂಡ ಅದರ ಖ್ಯಾತಿ ನಿರ್ದೇಶಕರಾದ ಎಸ್‌ಎಸ್‌ ರಾಜಮೌಳಿ ಸೇರಿದಂತೆ ಎಲ್ಲರ ಕಲಾವಿದರು ಹಾಗೂ ತಂತ್ರಜ್ಞರಿಗೆ ದಕ್ಕಿದೆ.

ಶ್ರೀಲೀಲಾರನ್ನು ಅಲ್ಲೊಬ್ಬ ಎಳೆದರೂ ಕಾರ್ತಿಕ್ ಆರ್ಯನ್‌ಗೆ ಗೊತ್ತಾಗ್ಲಿಲ್ಲ; ಫ್ಯಾನ್ಸ್ ಕೆಂಡಾಮಂಡಲ!