8 ವರ್ಷಗಳ ನಂತರ ದಂಪತಿಗಳು ವಿಚ್ಛೇದನವನ್ನು ಅಂತಿಮಗೊಳಿಸಿರುವ ಬಗ್ಗೆ ಏಂಜಲೀನಾ ಜೋಲೀ ಅವರ ವಕೀಲರು ತಮ್ಮ ಸಮಾಧಾನವನ್ನು ವ್ಯಕ್ತಪಡಿಸಿದರು.

ಮ್ಮ ವಿಚ್ಛೇದನದ ಬಗ್ಗೆ ಕಳೆದ ಎಂಟು ವರ್ಷಗಳಿಂದ ಕಾನೂನು ಹೋರಾಟದಲ್ಲಿ ತೊಡಗಿದ್ದ ಏಂಜಲೀನಾ ಜೋಲಿ ಹಾಗೂ ಬ್ರಾಡ್‌ ಪಿಟ್‌ ಕೊನೆಗೂ ಅಧಿಕೃತವಾಗಿ ಸಂಸಾರಕ್ಕೆ ವಿದಾಯ ಘೋಷಿಸಿದ್ದಾರೆ. ಏಂಜಲೀನಾ ಜೋಲಿ ಅವರ ವಕೀಲರು ಇಬ್ಬರ ನಡುವೆ ವಿಚ್ಛೇದನ ಆಗಿರೋದನ್ನ ಖಚಿತಪಡಿಸಿದ್ದಾರೆ. ಡೈಲಿ ಮೇಲ್ ಜೊತೆ ಮಾತನಾಡಿರುವ ವಕೀಲರು ನಟಿ ದೀರ್ಘ ಕಾನೂನು ಹೋರಾಟದಿಂದ ತುಂಬಾ ದಣಿದಿದ್ದು, ಈಗ ಎಲ್ಲವೂ ಪರಿಹಾರವಾಗಿದೆ ಎಂದಿದ್ದಾರೆ. ಎಂಟು ವರ್ಷಗಳ ಹಿಂದೆ, ಏಂಜಲೀನಾ ಅವರು ಬ್ರಾಡ್‌ ಪಿಟ್‌ ಅವರಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆಕೆ ಮತ್ತು ಆಕೆಯ ಮಕ್ಕಳು ಬ್ರಾಡ್‌ ಪಿಟ್‌ ಅವರೊಂದಿಗೆ ಹಂಚಿಕೊಂಡಿದ್ದ ಎಲ್ಲಾ ಆಸ್ತಿಗಳನ್ನು ತೊರೆದಿದ್ದಾರೆ. ಅಂದಿನಿಂದಲೂ ಆಕೆ ಶಾಂತಿಯನ್ನು ಕಂಡುಕೊಳ್ಳಲು ಹಾಗೂ ಕುಟುಂಬದೊಂದಿಗೆ ಈ ನೋವಿನಿಂದ ಹೊರಬರಲು ಪ್ರಯತ್ನಪಟ್ಟಿದ್ದಳು ಎಂದು ವಕೀಲರು ತಿಳಿಸಿದ್ದಾರೆ. ಇಬ್ಬರ ನಡುಇನ ಎಲ್ಲಾ ವಿಚಾರಗಳು ಇತ್ಯರ್ಥವಾಗಿದ್ದರೂ, ಫ್ರಾನ್ಸ್‌ನಲ್ಲಿರುವ ಚಟೌ ಮಿರಾವಲ್ ವೈನ್‌ಯಾರ್ಡ್‌ನ ವಿವಾದ ಇನ್ನೂ ಮುಂದುವರಿದಿರುವ ಹಾಕೆ ಕಾಣುತ್ತಿದ್ದು, ಇದು ಇಬ್ಬರ ನಡುವೆ ಮತ್ತೊಂದು ಸುತ್ತಿನ ಕಾನೂನು ಸಮರಕ್ಕೆ ಕಾರಣವಾಗಬಹುದು.

ಈ ಹಿಂದಿನ ವರದಿಗಳ ಪ್ರಕಾರ, ನನ್ನ ಒಪ್ಪಿಗೆಯಿಲ್ಲದೆ ವೈನ್‌ಯಾರ್ಡ್‌ನಲ್ಲಿದ್ದ ನನ್ನ ಪಾಲನ್ನು ಮಾರಾಟ ಮಾಡಿದ್ದಾಳೆ ಎಂದು ಬ್ರಾಡ್‌ ಪಿಟ್‌, ಏಂಜೆಲೀನಾ ಜೋಲಿ ವಿರುದ್ಧ ದೂರಿದ್ದರು.ದಂಪತಿಗಳು ಮಧ್ಯಸ್ಥಿಕೆಯಿಂದ ಅಥವಾ ತೀರ್ಪುಗಾರರ ವಿಚಾರಣೆಯ ಮೂಲಕ ಪ್ರಕರಣವನ್ನು ಹೇಗೆ ಇತ್ಯರ್ಥಪಡಿಸಲು ಬಯಸುತ್ತಾರೆ ಅನ್ನೋದನ್ನೂ ತಿಳಿಸಿದ್ದರು.
ಆಕೆ ಎಂದೂ ಬ್ರಾಡ್‌ ಪಿಟ್‌ ವಿರುದ್ಧ ಕೆಟ್ಟದಾಗಿ ಸಾರ್ವಜನಿಕವಾಗಿಯಾಗಲಿ, ಖಾಸಗಿಯಾಗಲಿ ಮಾತನಾಡಿರಲಿಲ್ಲ. ಆಕೆಯ ಮಕ್ಕಳು ಈಗಾಗಲೇ ದೊಡ್ಡದಾಗಿದ್ದಾರೆ. ಶಕ್ತಿ ಹಾಗೂ ಶ್ರೀಮಂತಿಕೆ ಹೊಂದಿರುವವರ ಎದುರು ನಮ್ಮ ದನಿಗೆ ಬೆಲೆ ಇರೋದಿಲ್ಲ ಎಂದು ಅವರಿಗೂ ಗೊತ್ತಾಗಿದೆ. ಈ ನೋವು ಲೆಕ್ಕಕ್ಕೆ ಬರೋದಿಲ್ಲ ಎಂದು ವಕೀಲರ ಎದುರು ಜೋಲಿ ಹೇಳಿದ್ದಾರೆ ಎನ್ನಲಾಗಿದೆ.

ಏಂಜಲೀನಾ ಮತ್ತು ಬ್ರಾಡ್‌ಗೆ ಆರು ಮಕ್ಕಳಿದ್ದಾರೆ - ಮ್ಯಾಡಾಕ್ಸ್, ಪ್ಯಾಕ್ಸ್, ಜಹರಾ, ಶಿಲೋ, ವಿವಿಯೆನ್ ಮತ್ತು ನಾಕ್ಸ್. ಅವರು ತಮ್ಮ ಪರವಾಗಿ ಮಾತನಾಡಲು ಪ್ರೋತ್ಸಾಹಿಸಿದ್ದಾರೆ, ಆದರೆ ನಟಿ ಕಾನೂನನ್ನು ಬದಲಾಯಿಸಲು ಮತ್ತು ಸಾರ್ವಜನಿಕ ಕಥೆಗಳನ್ನು ಮಾರಾಟ ಮಾಡದಂತೆ ಬಲವಾಗಿ ಒತ್ತಿಹೇಳಿದ್ದಾರೆ.

ಏಂಜಲೀನಾ ಜೋಲಿ ತನ್ನನ್ನೇ ಕೊಲ್ಲೋಕೆ ಸುಪಾರಿ ಕೊಟ್ಟಿದ್ದಳಂತೆ!

2016ರ ಸೆಪ್ಟೆಂಬರ್‌ನಲ್ಲಿ ವಿಚ್ಛೇದನ ಕೋರಿ ಅರ್ಜಿಯನ್ನು ದಾಖಲು ಮಾಡಲಾಗಿತ್ತು. ಎರಡು ವರ್ಷದ ಮದುವೆ ಹಾಗೂ ದಶಕಗಳ ಕಾಲದ ರಿಲೇಷನ್‌ಷಿಪ್‌ ಬಳಿಕ ಈ ನಿರ್ಧಾರ ಮಾಡಲಾಗಿತ್ತು. 2019ರಲ್ಲಿ ತಾವಿಬ್ಬರೂ ಸಿಂಗಲ್‌ ಆಗಿರುವುದಾಗಿ ಕಾನೂನಾತ್ಮಕವಾಗಿ ತಿಳಿಸಿದ್ದರು.

ವಿಚ್ಛೇದನದ ನಂತರವೂ ಮುಂದುವರಿದ ಅಪ್ಪ ಅಮ್ಮನ ಕಿತ್ತಾಟ: ತನ್ನ ಹೆಸರಲ್ಲಿದ್ದ ಅಪ್ಪನ ಹೆಸರು ಕೈಬಿಟ್ಟ ನಟನ ಪುತ್ರಿ

ಇದು ಬ್ರಾಡ್ ಪಿಟ್ ಅವರ ಎರಡನೇ ಮದುವೆ ಮತ್ತು ಏಂಜಲೀನಾ ಜೋಲೀ ಅವರ ಮೂರನೇ ವಿವಾಹವಾಗಿತ್ತು. ಹಾಲಿವುಡ್ ನಟಿ ಜೆನ್ನಿಫರ್ ಅನಿಸ್ಟನ್ ಅವರೊಂದಿಗಿನ ಸಂಬಂಧದ ನಂತರ ಬ್ರಾಡ್ ಏಂಜಲೀನಾಗೆ ಹತ್ತಿರವಾದರು. ನಟರಾದ ಬಿಲ್ಲಿ ಬಾಬ್ ಥಾರ್ನ್ಟನ್ ಮತ್ತು ಜಾನಿ ಲೀ ಮಿಲ್ಲರ್ ಅವರೊಂದಿಗೆ ಏಂಜಲೀನಾ ಮೊದಲು ಸಂಬಂಧ ಹೊಂದಿದ್ದರು.