ದಶಕದ ಬಳಿಕ ಭಾರತ ತಂಡಕ್ಕೆ ಐಸಿಸಿ ಟಿ20 ವಿಶ್ವಕಪ್ ಒಲಿದು ಬಂದಿದೆ. ನಾಯಕ ರೋಹಿತ್ ಶರ್ಮಾ ನೇತೃತ್ವದಲ್ಲಿ ಭಾರತ ಐಸಿಸಿ ಟ್ರೋಫಿ ಬರ ನೀಗಿಸಿಕೊಂಡಿದೆ. ಇದೀಗ ಬಾಲಿವುಡ್ ನಟ ವರುಣ್ ಧವನ್, ರೋಹಿತ್‌ಗೆ ಹೊಸ ಹೆಸರಿಟ್ಟಿದ್ದಾರೆ.

ಮುಂಬೈ: ಜಗತ್ತಿನ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಮದುವೆ ಕಾರ್ಯಕ್ರಮಗಳು ಭರ್ಜರಿಯಾಗಿ ಸಾಗುತ್ತಿದೆ. ಇದೀಗ ಅನಂತ್-ರಾಧಿಕಾ ಸಂಗೀತ್ ಕಾರ್ಯಕ್ರಮದ ವೇಳೆಯಲ್ಲಿ ಇತ್ತೀಚೆಗಷ್ಟೇ ದೇಶಕ್ಕೆ ಎರಡನೇ ಐಸಿಸಿ ಟಿ20 ಟ್ರೋಫಿ ಗೆದ್ದುಕೊಟ್ಟ ರೋಹಿತ್ ಶರ್ಮಾ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಬಾಲಿವುಡ್ ನಟ ವರುಣ್ ಧವನ್, ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಅವರನ್ನು ಅಪ್ಪಿಕೊಂಡು ಆತ್ಮೀಯವಾಗಿ ಮಾತುಕತೆ ನಡೆಸಿದ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಈ ಸಂದರ್ಭದಲ್ಲಿ ವರುಣ್ ಧವನ್‌ಗೆ ಪತ್ನಿ ನತಾಶಾ ದಲಾಲ್ ಕೂಡಾ ಸಾಥ್ ನೀಡಿದ್ದರು.

ರೋಹಿತ್ ಶರ್ಮಾ ಅವರನ್ನು ಭೇಟಿ ಮಾಡಿದ ಬಳಿಕ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವರುಣ್, ರೋಹಿತ್ ಶರ್ಮಾ ಅವರನ್ನು ಮುಂಬೈನ ರಾಜ ಎಂದು ಬಣ್ಣಿಸಿದ್ದಾರೆ. "ರೋಹಿತ್ ಶರ್ಮಾ ಒಬ್ಬ ಸರಳ, ತಮಾಷೆಯ, ನಗುಮುಖದೊಂದಿಗೆ ಕೋಟ್ಯಾಂತರ ಭಾರತೀಯರ ಕನಸನ್ನು ಸಾಕಾರಗೊಳಿಸಿದಾತ. ನಿನ್ನೆ ರಾತ್ರೆ ಟೀಂ ಇಂಡಿಯಾ ನಾಯಕನನ್ನು ಬೇಟಿ ಮಾಡಿ ಕೆಲವು ಅಮೂಲ್ಯ ಕ್ಷಣಗಳನ್ನು ಕಳೆದದ್ದು ಖುಷಿಯನ್ನುಂಟು ಮಾಡಿತು" ಎಂದು ವರುಣ್ ಧವನ್ ಬರೆದುಕೊಂಡಿದ್ದಾರೆ.

View post on Instagram

ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಸಂಗೀತ್ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್, ಆಲಿಯಾ ಭಟ್, ರಣ್ಬೀರ್ ಕಪೂರ್‌, ವಿಕ್ಕಿ ಕೌಶಲ್, ಮೌನಿ ರಾಯ್, ದಿಶಾ ಪಟಾಣಿ, ಸಿದ್ದಾರ್ಥ್ ಮಲ್ಹೋತ್ರಾ, ಕಿಯಾರಾ ಅಡ್ವಾಣಿ, ಶೆಹನಾಜ್ ಗಿಲ್ ಸೇರಿದಂತೆ ಹಲವಾರು ಬಾಲಿವುಡ್ ತಾರೆಯರು ಪಾಲ್ಗೊಂಡಿದ್ದರು.

ಕೊಹ್ಲಿ, ರೋಹಿತ್, ಜಡ್ಡು ಟಿ20 ಗುಡ್‌ಬೈ: ತ್ರಿಮೂರ್ತಿಗಳ ಸ್ಥಾನ ತುಂಬಲು ಹಲವರ ನಡುವೆ ಪೈಪೋಟಿ..!

ಬಹುನಿರೀಕ್ಷಿತ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹ ಕಾರ್ಯಕ್ರಮವು ಜುಲೈ 13ರಂದು ಮುಂಬೈನ ಜಿಯೋ ವರ್ಲ್ಡ್‌ ಕನ್ವೆಷನ್‌ ಸೆಂಟರ್‌ನಲ್ಲಿ ನಡೆಯಲಿದೆ. ಒಟ್ಟು ಮೂರು ದಿನಗಳ ಕಾಲ ನಡೆಯುವ ಮದುವೆ ಕಾರ್ಯಕ್ರಮವು ಜುಲೈ 12ರಂದು ಆರಂಭವಾಗಿ ಜುಲೈ 14ರ ವರೆಗೆ ನಡೆಯಲಿದೆ.