Asianet Suvarna News Asianet Suvarna News
breaking news image

ಕೊಹ್ಲಿ, ರೋಹಿತ್, ಜಡ್ಡು ಟಿ20 ಗುಡ್‌ಬೈ: ತ್ರಿಮೂರ್ತಿಗಳ ಸ್ಥಾನ ತುಂಬಲು ಹಲವರ ನಡುವೆ ಪೈಪೋಟಿ..!

ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಮುಗಿದ ಬೆನ್ನಲ್ಲೇ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದು, ಅವರ ಸ್ಥಾನ ತುಂಬಲು ಹಲವು ಯುವ ಆಟಗಾರರ ನಡುವೆ ಪೈಪೋಟಿ ಏರ್ಪಟ್ಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

Rohit Sharma Virat Kohli Ravindra Jadeja Who will replace these 3 players in T20I kvn
Author
First Published Jul 6, 2024, 2:27 PM IST

ಬೆಂಗಳೂರು: ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಟಿ20 ಕ್ರಿಕೆಟ್‌ಗೆ ಗುಡ್‌ಬೈ  ಹೇಳಿದ್ದಾರೆ. ಇದ್ರಿಂದ ಈ ಮೂವರು ಸೀನಿಯರ್‌ಗಳ ಸ್ಥಾನ ತುಂಬಬಲ್ಲ ಯುವ ಆಟಗಾರರು ಯಾರು ಪ್ರಶ್ನೆ ಮೂಡಿದೆ. ಬನ್ನಿ ಹಾಗಾದ್ರೆ,  ತ್ರಿಮೂರ್ತಿಗಳ ಸ್ಥಾನದಲ್ಲಿ ಮಿಂಚಬಲ್ಲ ಸಾಮರ್ಥ್ಯ ಯಾರಿಗೆ ಅನ್ನೋದನ್ನ ನೋಡೋಣ..!

ಯಾರಾಗ್ತಾರೆ ಫ್ಯೂಚರ್ ಕೊಹ್ಲಿ, ರೋಹಿತ್..? 

ಭಾರತೀಯ ಕ್ರಿಕೆಟ್ ಫ್ಯಾನ್ಸ್‌ಗೆ ಒಂದು ಕಡೆ ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆದ್ದ ಖುಷಿಯಾದ್ರೆ, ಮತ್ತೊಂದು ಕಡೆ ಕೊಹ್ಲಿ, ರೋಹಿತ್,  T20 ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದು ಬೇಸರಕ್ಕೆ ಕಾರಣವಾಗಿದೆ. ಇದರ ನಡುವೆ ಈ ಇಬ್ಬರು ಲೆಜೆಂಡ್‌ಗಳ ಸ್ಥಾನ ತುಂಬಲು ಪೈಪೋಟಿ ಶುರುವಾಗಿದೆ. ಮುಂದಿನ ರೋಹಿತ್, ವಿರಾಟ್ ಯಾರು ಅನ್ನೋ ಚರ್ಚೆ ಜೋರಾಗಿದೆ. 

ರೋಹಿತ್ ಸ್ಥಾನದ ಮೇಲೆ ಯಶಸ್ವಿ, ಅಭಿಷೇಕ್ ಕಣ್ಣು..!

ಆರಂಭಿಕರಾಗಿ ರೋಹಿತ್ ಶರ್ಮಾ ಸ್ಥಾನ ತುಂಬಲು, ಹಲವು ಆಟಗಾರರು ಕಾಯುತ್ತಿದ್ದಾರೆ. ಎಡಗೈ ಬ್ಯಾಟರ್‌ಗಳಾದ ಯಶಸ್ವಿ ಜೈಸ್ವಾಲ್, ಅಭಿಷೇಕ್  ಶರ್ಮಾ ತುದಿಗಾಲಲ್ಲಿ ನಿಂತಿದ್ದಾರೆ. ಪಂಜಾಬ್ ಪುತ್ತರ್ ಅಭಿಷೇಕ್ ಶರ್ಮಾ ಈ ಬಾರಿಯ IPLನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆರಂಭಿಕರಾಗಿ ಆರ್ಭಟಿಸಿದ್ರು. ಇನ್ನು ಯಶಸ್ವಿ ಜೈಸ್ವಾಲ್, ಐಪಿಎಲ್‌ನಲ್ಲಿ ಮಿಂಚುವುದರ ಜೊತೆಗೆ, ಟೀಂ ಇಂಡಿಯಾ ಪರ ಅಬ್ಬರಿಸಿದ್ದಾರೆ. ಈ ಇಬ್ಬರು ರೋಹಿತ್ ಶರ್ಮಾರಂತೆ ಆಕ್ರಮಣಕಾರಿ ಆಟಗಾರರಾಗಿದ್ದು, ಮೊದಲ ಬಾಲ್‌ನಿಂದಲೇ ಅಟ್ಯಾಕ್ ಮಾಡ್ತಾರೆ. 

ವಿರಾಟ್ ಕೊಹ್ಲಿ ಸ್ಥಾನಕ್ಕೆ ಶುರುವಾಗಿದ ಪೈಪೋಟಿ..!

ರೋಹಿತ್ ಶರ್ಮಾರಂತೆ ವಿರಾಟ್ ಕೊಹ್ಲಿ ಸ್ಥಾನಕ್ಕೂ ಕಾಂಪಿಟೇಷನ್ ಆರಂಭವಾಗಿದೆ. ತಂಡ ಆರಂಭಿಕ ಸಂಕಷ್ಟಕ್ಕೆ ಸಿಲುಕಿದಾಗ, ನಿಧಾನವಾಗಿ ಇನ್ನಿಂಗ್ಸ್ ಕಟ್ಟುತ್ತಿದ್ದ ವಿರಾಟ್ ಕೊಹ್ಲಿ, ಸೆಟ್ ಆದ ನಂತರ ವಿರಾಟರೂಪ ತಾಳುತ್ತಿದ್ರು. ಇದ್ರಿಂದ ಕೊಹ್ಲಿಯ ಈ ಸ್ಥಾನ ಫಿಲ್ ಮಾಡೋದು ಅಷ್ಟು ಸುಲಭವಲ್ಲ. ಆದ್ರೆ, ಶುಭ್‌ಮನ್ ಗಿಲ್ ಮತ್ತು ಋತುರಾಜ್ ಗಾಯಕ್ವಾಡ್, ಕೊಹ್ಲಿಯಂತೆ ನಂಬಿಕಸ್ಥ ಬ್ಯಾಟರ್‌ ಆಗೋ ಸಾಮರ್ಥ್ಯ ಹೊಂದಿದ್ದಾರೆ. 

ಐಪಿಎಲ್‌ನಲ್ಲಿ ಇವರಿಬ್ಬರು ತಮ್ಮ ತಾಕತ್ತನ್ನ ಪ್ರೂವ್ ಮಾಡಿದ್ದಾರೆ. ಗಿಲ್ ಗುಜರಾತ್ ಟೈಟನ್ಸ್ ಪರ ಮತ್ತು ಋತುರಾಜ್ ಚೆನ್ನೈ ಸೂಪರ್ ಕಿಂಗ್ಸ್ ಪರ  ಮ್ಯಾಚ್ ವಿನ್ನಿಂಗ್ಸ್‌ಗಳನ್ನ ಆಡಿದ್ದಾರೆ. ಕೊಹ್ಲಿಯಂತೆ ಸಂದರ್ಭಕ್ಕೆ ತಕ್ಕಂತೆ ಅಡೋದ್ರಲ್ಲೂ ಈ ಯಂಗ್‌ಸ್ಟರ್ಸ್  ಪಂಟರ್ ಆಗಿದ್ದಾರೆ. 

ಜಡೇಜಾ ಸ್ಥಾನ ಆಕ್ರಮಿಸಿಕೊಳ್ತಾರಾ ಅಕ್ಷರ್ ಪಟೇಲ್..!

ರವೀಂದ್ರ ಜಡೇಜಾ ಸ್ಥಾನದ ಮೇಲೂ ಯಂಗ್‌ಸ್ಟರ್‌ಗಳು ಕಣ್ಣಿಟ್ಟಿದ್ದಾರೆ. ಅದರಲ್ಲಿ ಟಿ20 ವಿಶ್ವಕಪ್ನಲ್ಲಿ ಮಿಂಚಿದ ಅಕ್ಷರ್ ಪಟೇಲ್ ಮುಂಚೂಣಿ ಯಲ್ಲಿದ್ದಾರೆ. ಜಡ್ಡುರಂತೆ ಅಕ್ಷರ್  ಎಡಗೈ ಆಲ್ರೌಂಡರ್ ಅಗಿದ್ದು, ಬೌಲಿಂಗ್ ಆ್ಯಂಡ್ ಬ್ಯಾಟಿಂಗ್ ಎರಡರಲ್ಲೂ ಮಿಂಚಬಲ್ಲರು. ಅಕ್ಷರ್ ಜೊತೆಗೆ,  ಶಿವಂ ದುಬೆ ಮತ್ತು ವಾಷಿಂಗ್ಟರ್ ಸುಂದರ್ ಕೂಡ ಜಡೇಜಾ ರಿಪ್ಲೇಸ್ನಲ್ಲಿದ್ದಾರೆ. 

ಒಟ್ಟಿನಲ್ಲಿ ಒಂದೊಂದು ಸ್ಥಾನಕ್ಕೂ ಒಬ್ಬೊಬ್ಬರ ಹೆಸರುಗಳು ಕೇಳಿಬರ್ತಿವೆ. ಆದ್ರೆ, ಯಾರು ಯಾರ ಸ್ಥಾನದಲ್ಲಿ ಫಿಕ್ಸ್ ಆಗ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ. 

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್ 
 

Latest Videos
Follow Us:
Download App:
  • android
  • ios