ಪ್ರೀತಿ ಎನ್ನುವುದು ಯಾರಿಗೆ, ಹೇಗೆ, ಎಲ್ಲಿ, ಯಾವ ಸಂದರ್ಭದಲ್ಲಿ ಹುಟ್ಟುತ್ತದೆ ಎಂದು ಹೇಳುವುದು ಕಷ್ಟ. ನಟಿ ಅಮೃತಾ ರಾಮಮೂರ್ತಿ ಈ ಬಗ್ಗೆ ಹೇಳಿದ್ದೇನು ಕೇಳಿ... 

ಪ್ರೀತಿ ಎನ್ನುವುದು ಯಾರಿಗೆ, ಹೇಗೆ, ಎಲ್ಲಿ, ಯಾವ ಸಂದರ್ಭದಲ್ಲಿ ಹುಟ್ಟುತ್ತದೆ ಎಂದು ಹೇಳುವುದು ಕಷ್ಟ. ದುಡ್ಡು, ಅಧಿಕಾರ, ಅಂತಸ್ತು, ಸೌಂದರ್ಯ ನೋಡಿ ಪ್ರೀತಿ ಮಾಡುವವರ ದೊಡ್ಡ ಸಂಖ್ಯೆಯೇ ಇದ್ದರೂ ಅದಕ್ಕೆ ಪ್ರೀತಿ ಎನ್ನುವುದಿಲ್ಲ. ಅದು ಆಸೆ ಅಷ್ಟೇ. ಆದರೆ ಪ್ರೀತಿ ಹುಟ್ಟಲು ಇಂಥದ್ದೇ ಕಾರಣ ಎಂದೇನೂ ಇಲ್ಲ. ಪ್ರೀತಿಯ ಬಗ್ಗೆ ನಟಿ ಅಮೃತಾ ರಾಮಮೂರ್ತಿ ಅವರು ಏನು ಹೇಳಿದ್ದಾರೆ ನೋಡಿ. ಪ್ರೀತಿ ಎನ್ನೋದು ಭೌತಿಕವಾಗಿದ್ದಲ್ಲ. ಅದನ್ನು ದುಡ್ಡಿನಿಂದ ಅಳೆಯಲು ಆಗುವುದಿಲ್ಲ. ಯಾವುದೇ ವಸ್ತುಗಳಿಂದಲೂ ಪ್ರೀತಿ ಹುಟ್ಟುವುದಿಲ್ಲ. ಅದು ಮನಸ್ಸಿನಿಂದ ಬರಬೇಕು. ಆ ಹುಡುಗನಲ್ಲಿ ಇರುವ ಕ್ವಾಲಿಟಿ ಇಷ್ಟಪಟ್ಟು ಪ್ರೀತಿ ಮಾಡಿದರೆ ಮಾತ್ರ ಅದು ಜೀವನ ಪರ್ಯಂತ ಇರಲು ಸಾಧ್ಯ ಎಂದಿದ್ದಾರೆ ನಟಿ.

ನಾವು ದುಡ್ಡಿಗೆ ಇಷ್ಟಪಟ್ಟು ಹೋದರೆ, ನಾಳೆ ಏನಾದರೂ ಹೆಚ್ಚೂ ಕಡಿಮೆ ಆಗಿ ದುಡ್ಡೇ ಇಲ್ಲದಿದ್ದರೆ ಪ್ರೀತಿ ಹೊರಟು ಹೋಗಿಬಿಡತ್ತಾ ಎಂದು ಕೇಳಿರೋ ನಟಿ ಅಮೃತಾ, ಪ್ರೀತಿ ಎನ್ನೋದು ದುಡ್ಡಿನಿಂದ ಬರುವ ವಿಷಯ ಅಲ್ಲವೇ ಅಲ್ಲ, ದುಡ್ಡು ತಾನಾಗಿಯೇ ಬರುತ್ತದೆ. ಅದು ಸಿಗಬಹುದು ಆದರೆ ನಿಜವಾದ ಪ್ರೀತಿ ಎನ್ನುವುದು ಎಲ್ಲರಿಗೂ ಸಿಗುವುದಿಲ್ಲ ಎಂದಿದ್ದಾರೆ. ಯಾವುದೇ ಕಾರಣಕ್ಕೆ ಪ್ರೀತಿ ಹುಟ್ಟಬಹುದು. ಅದು ಹೀಗೆಯೇ ಎನ್ನುವುದು ಕಷ್ಟ. ಯಾವುದೋ ಒಂದು ಚಿಕ್ಕದೊಂದು ಕಾರಣದಿಂದ ಪ್ರೀತಿ ಹುಟ್ಟಿ ಅದು ಜೀವನ ಪರ್ಯಂತ ನಡೆಸಿಕೊಂಡು ಹೋಗಬಹುದು ಎಂದಿದ್ದಾರೆ.

ಇನ್ನು ನಟಿಯ ಕುರಿತು ಹೇಳುವುದಾದರೆ, ಕುಲವಧು ಮೂಲಕ ಖ್ಯಾತಿ ಪಡೆದಿದ್ದ ನಟಿ ಅಮೃತಾ ರಾಮಮೂರ್ತಿ, ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ತಮ್ಮ ಅದ್ಭುತ ನಟನೆ ಮೂಲಕ ಜನರಿಗೆ ಇಷ್ಟವಾಗಿದ್ದಾರೆ. 'ಮಿಸ್ಟರ್ & ಮಿಸ್‌ಸ್ ರಂಗೇಗೌಡ' ಧಾರಾವಾಹಿಯಲ್ಲಿ ನಟಿಸ್ತಿದ್ದ ಅಮೃತಾ ರಾಮಮೂರ್ತಿ (Amrutha Ramamurthy) ಮತ್ತು ಇದೇ ಧಾರಾವಾಹಿಯ ನಾಯಕ ರಾಘವೇಂದ್ರ ಅವರ ನಡುವೆ ಪ್ರೀತಿ ಚಿಗುರಿ ಇಬ್ಬರೂ ಹಸೆಮಣೆ ಏರಿ ವರ್ಷಗಳು ಕಳೆದಿವೆ. ಇದೀಗ ಅವರಿಬ್ಬರೂ ಧ್ರುತಿ ಎನ್ನುವ ಪುಟಾಣಿಯ ಪಾಲಕರೂ ಆಗಿದ್ದಾರೆ.

ಇವರು ಧಾರಾವಾಹಿಗಳ ಜೊತೆಯಲ್ಲಿ ಸೋಷಿಯಲ್​ ಮೀಡಿಯಾದಲ್ಲಿಯೂ ಆ್ಯಕ್ಟೀವ್​ ಆಗಿದ್ದಾರೆ. ಆಗಾಗ್ಗೆ ಕೆಲವೊಂದು ಅಪ್​ಡೇಟ್ಸ್​ಗಳನ್ನು ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ಉಡುಪಿ ಸಮೀಪದ ಮಟ್ಟು ಗ್ರಾಮದಲ್ಲಿರುವ ಅಜ್ಜನ ಮನೆಯನ್ನು ಇತ್ತೀಚೆಗಷ್ಟೇ ಪರಿಚಯಿಸಿದ್ದರು ಅಮೃತಾ. ಹಿಂದಿನ ಕಾಲದಲ್ಲಿ ಹೆಚ್ಚಾಗಿ ಮನೆಗಳ ಒಳಗೆ ಪ್ರವೇಶಿಸುವಾಗ ಬಗ್ಗಿಯೇ ಪ್ರವೇಶಿಸಬೇಕಿತ್ತು. ಅದೇ ರೀತಿ ಅಮೃತಾ ಅವರ ಅಜ್ಜನ ಮನೆ ಕೂಡ ಇದೆ. ಅಲ್ಲೇ ಇರುವ ತಮ್ಮ ವಕೀಲ ಅಜ್ಜ ಸೇರಿದಂತೆ ಇತರ ಅಜ್ಜಂದಿರ ಫೋಟೋಗಳನ್ನು ಪರಿಚಯಿಸಿರುವ ನಟಿ, ಅನಂತಯ್ಯ ಅಜ್ಜ, ಹರಿದಾಸ ಅಜ್ಜ, ರಾಮಕೃಷ್ಣ, ಜ್ಯೋತಿರಾವ್ ಮುಂತಾದವರ ಪರಿಚಯ ಮಾಡಿಸಿದ್ದಾರೆ. ಇದಾದ ಬಳಿಕ ಚಾವಡಿ, ದೇವರ ಮನೆ, ಅಡುಗೆ ಮನೆಗಳನ್ನು ಪರಿಚಯ ಮಾಡಿದ್ದರು. ಹಿಂದಿನ ಕಾಲದಲ್ಲಿನ ಒಲೆಯ ಮೇಲಿನ ಅಡುಗೆಯ ಸವಿ ತಿಂದವರಷ್ಟೇ ಬಲ್ಲರು. ಈಗಲೂ ಕೆಲವು ಹಳ್ಳಿಗಳಲ್ಲಿ ಸೌದೆಯ ಮೇಲೆಯೇ ಅಡುಗೆ ಮಾಡಲಾಗುತ್ತದೆ. ಗ್ಯಾಸ್​ ಬಳಸಿ ಮಾಡುವ ಅಡುಗೆಗಿಂತ ಸೌದೆಯ ಮೇಲೆ ಮಾಡಿದ ಅಡುಗೆಯ ರುಚಿಯೇ ಹೆಚ್ಚು. ಇದೇ ಕಾರಣಕ್ಕೆ ಇದೀಗ ಮಹಾನಗರಗಳಲ್ಲಿಯೂ ಸೌದೆ ಒಲೆಗೆ ಡಿಮ್ಯಾಂಡ್​​ ಬರಲು ಶುರುವಾಗಿದೆ. ಅದನ್ನೆಲ್ಲಾ ನಟಿ ಪರಿಚಯ ಮಾಡಿಸಿದ್ದರು.

View post on Instagram