ಬೆಂಗಳೂರು(ಸೆ. 30)  ಈ ಹಾಡಿನ  ಸಾಲುಗಳೆ ಅಂಥದ್ದು .. ಇಂಜಿನಿಯರಿಂಗ್ ವಿದ್ಯಾರ್ಥಿಗಳ ಜೀವನದ ಅನುಭವದ ಹಾಡು.. ಇಲ್ಲಿ ಕಾಟವಿದೆ, ಆಟವಿದೆ.. ತುಂಟಾಟವಿದೆ. 

ಒಂದೊಂದು ಸಾಲುಗಳು ವಿಶಿಷ್ಟವಾಗಿ ಮೂಡಿಬಂದಿದ್ದು ಪ್ರೇಮ-ಕಾಮ, ತುಂಟಾಟ, ಹಾರ್ಮೋನ್, ಎಕ್ಸಾಂ, ಫ್ಯಾಷನ್ ಶೋ, ಲೇಡಿ ಲೆಕ್ಚರರ್ಸ್ ಹೀಗೆ ಹಲವಾರು ಸಂಗತಿಗಳನ್ನು ಕಟ್ಟಿಕೊಡುತ್ತದೆ. ಇಲ್ಲಿ ತುಂಟತದ ಜತೆಗೆ ಒಂದು ಸಂದೇಶವೂ ಇದೆ. ಫೇಲ್ ಆದರೆ ಏನಾಯಿತು? ಇನ್ನೊಂದು ಜೀವನ ಇದೆ.. ಎನ್ನುವುದನ್ನು ರಸವತ್ತಾಗಿ ಹಾಡು ಹೇಳುತ್ತದೆ.

ಇಂಜಿನಿಯರಿಂಗ್ ಪದವಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಟ್ರೋಲ್ ಆಗುತ್ತಿರುವುದನ್ನು ನೋಡುತ್ತಿರುತ್ತೇವೆ.  ಇಂಟರ್ನಲ್ಸ್​​, ಲ್ಯಾಬ್​​, ಮಾರ್ಕ್​ ಅನ್ನೋ ವರ್ತುಲದಲ್ಲೇ ಸುತ್ತುವ ಇಂಜಿನಿಯರಿಂಗ್​ ವಿದ್ಯಾರ್ಥಿಗಳಿಗೆ ಕೆಲವೊಮ್ಮೆ ಫೇಲ್​ ಎನ್ನುವುದು ಮರಣಶಾಸನದಂತೆ ಭಾಸವಾಗುತ್ತದೆ.

ಇದು ‘ಕನ್ನಡಿಗ’ನ Rap ಸಾಂಗ್: ಜಬರ್‌ದಸ್ತ್‌ ಇದೆ ಮೇಕಿಂಗ್!

ಆದ್ರೆ ಇದೆಲ್ಲವನ್ನು ಹೊರತುಪಡಿಸಿ ಒಂದು ಜೀವನವಿದೆ ಎಂದು ತೋರಿಸುವ ಒಂದು ಪ್ರಯತ್ನ ಏನಿವಾಗ ಎಂಬ ರ‍್ಯಾಪ್ ಸಾಂಗ್​​. ಇಂಜಿನಿಯರ್​ಗಳೇ ಹೆಚ್ಚಾಗಿರುವ ಒಂದು ಹವ್ಯಾಸಿ ಕಲಾತಂಡ ಕಡಿಮೆ ಅಂಕ ಪಡೆಯುವ ವಿದ್ಯಾರ್ಥಿಗಳಿಗೆ Take it easy ಎಂದು ಬೆನ್ನು ತಟ್ಟುವಂಥ ವಿಡಿಯೋ ಸಾಂಗನ್ನು ಹೊರತಂದಿದೆ.

ವೀಕೆಂಡ್​ಗಳಲ್ಲೇ ಸಾಂಗ್​​ ರೆಕಾರ್ಡಿಂಗ್​​, ಶೂಟಿಂಗ್​​, ಎಡಿಟಿಂಗ್ ಕೆಲಸ ಮಾಡಬೇಕಾದ ಅನಿವಾರ್ಯತೆಯಲ್ಲಿರುವ ಈ ತಂಡಕ್ಕೆ ಸಂತೋಷ್​ ಗಣಾಚಾರಿ ಕ್ಯಾಪ್ಟನ್​​​. ಕಾಲೇಜು ವಿದ್ಯಾರ್ಥಿಗಳಿಗೆ ಇಷ್ಟವಾಗುವಂಥ ರ‍್ಯಾಪ್ ​​ ಸಾಂಗ್​ ಆದ್ರೂ ಪದೇಪದೇ ಕೇಳಬೇಕೆನಿಸುವಂತೆ ಹಿತವೆನಿಸುವ ಸಂಗೀತ ಸಂದೇಶ್​​. ಎಸ್​​ ಅವರದ್ದು. ಒಮ್ಮೆ ಕೇಳಿದರೂ ಹಾಡಲ್ಲಿ ಪದೇಪದೇ ಬರುವ ಏನಿವಾಗ ಎಂಬ ಸಾಲು ಗುನುಗುವಂತೆ ಮಾಡುತ್ತದೆ.

26 ವರ್ಷದ ಹಿಂದೆ ಜಗ್ಗೇಶ್ ಮಾಡಿದ Rap ಸಾಂಗ್ ಈಗ ರಿಲೀಸ್!

ಸಂತೋಷ್ ಗಣಾಚಾರಿ ಸಾಹಿತ್ಯ, ಗಾಯನ ಮತ್ತು ನಿರ್ದೇಶನ ಮಾಡಿದ್ದಾರೆ. ಗಾಯಕರಾಗಿ ಅಶ್ವಿಕ್ ಪ್ರಭು, ರಾಣಿ ಹುಲಿ, ಅಭಿಜಿತ್ ಸಹ ಇದ್ದಾರೆ. ಎಡಿಟಿಂಗ್ ಜವಾಭ್ದಾರಿಯನ್ನು ವಸಂತ್ ರಾಥೋಡ್ ಕಂಪೋಸಿಶನ್ ವಹಿಸಿಕೊಂಡಿದ್ದಾರೆ. ಗಾರ್ಡಿಂಗ್ ಮತ್ತು ಎಫೆಕ್ಟ್ ಸುನೀಲ್ ಕುಮಾರ್ ಕೆಎಂ , ಪ್ರವೀಣ್ ರಾವ್, ಅಭಿನಂದನ್ ವೈಎಸ್, ಸ್ಮೃತಿ ಪಾಂಡೆ, ನಿತಿಕಾ ದವೆ, ಮಧುಶ್ರೀ, ಪಿ ವಿಠ್ಠಲ್ ವಾಲ್ಗೆ, ಸಾದ್ವಿಕಾ ಚಂದ್ರ, ಆರ್ . ಹರ್ಷವರ್ಧನ್, ಎಜನಿ, ಪ್ರಿಯಾಂಕಾ, ದೀಪ್ಕ, ನಿತಿನ್ ರಾಜ್ ಸೇರಿದಂತೆ ಅನೇಕರು ಸಹಕಾರ ನೀಡಿದ್ದಾರೆ.'