Rap ಸಾಂಗೊಂದನ್ನು ನೆನೆಸಿಕೊಂಡ ಜಗ್ಗೇಶ್ | ಇಂದಿನ ಯಾವ Rap ಸಾಂಗ್ ಗೂ ಕಮ್ಮಿಯಿಲ್ಲದಂತೆ ಸ್ಟೆಪ್ ಹಾಕಿದ್ದಾರೆ ಜಗ್ಗೇಶ್ | ಹೇಗಿದೆ ನೀವೇ ನೋಡಿ.
Rap ಸಾಂಗ್ ಗಳೆಂದರೆ ಈಗಿನ ಯುವಕರಿಗೆ ಅಚ್ಚುಮೆಚ್ಚು. ಎಲ್ಲರೂ ಇಷ್ಟಪಡುತ್ತಾರೆ. ಪಬ್ ಪಾರ್ಟಿಗಳಲ್ಲಿ Rap ಸಾಂಗ್ ಗಳ ಹವಾ ಜೋರಾಗಿರುತ್ತದೆ.
ನಟ ಜಗ್ಗೇಶ್ ಕೂಡಾ Rap ಸಾಂಗ್ ವೊಂದನ್ನು 26 ವರ್ಷಗಳ ಹಿಂದೆಯೇ ಮಾಡಿರುವ ವಿಚಾರ ಬಹಿರಂಗವಾಗಿದೆ. ಈ ವಿಚಾರವನ್ನು ಸ್ವತಃ ಜಗ್ಗೇಶ್ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
‘ 1993 ರಲ್ಲಿ ನಾನು ನನ್ನ ಚಿತ್ರದಲ್ಲಿ ಹಡಿ ನಟಿಸಿದ #Rapsong ಅಂದು ನನಗೆ Rap ಎಂದು ಗೊತ್ತಿರಲಿಲ್ಲ. ಬದಲಾಗಿ ವಿಭಿನ್ನ ಶೈಲಿ ಯತ್ನಿಸಬೇಕು ಎಂದುಕೊಂಡೆ. 26 ವರ್ಷದ ನಂತರ ಅಂದರೆ ಇಂದು Youtube ನಲ್ಲಿ Rap ಮಾಡಿದವರೆಲ್ಲಾ ಸಾಮಾಜಿಕ ಜಾಲತಾಣದಲ್ಲಿ #Superstars 26 ವರ್ಷದ ಹಿಂದೆ ನನ್ನ ಯತ್ನ ಇಂದು ಮೆಲುಕು ಹಾಕಿದಾಗ ನನ್ನ ಬಗ್ಗೆ ನನಗೆ ಪಶ್ಚಾತ್ತಾಪವಾಯಿತು. ಕಾರಣ ನನ್ನ ಕಾಲದಲ್ಲಿ ಅದೆ ಗಿಡಮರ ಸುತ್ತಿ ಕಬ್ಬನ್ ಪಾರ್ಕ್ ಲಾಲ್ ಬಾಗ್ ನಂದಿಬೆಟ್ಟ ಅದೆ ಕಣ್ಣೀರು ಕಥೆ 6ಫೈಟು 5ಹಾಡು ಜಮಾನ... ಆಗ ಬಂದ ನಾನು ಎಲ್ಲಾ ಹೊಸ ನಿರ್ದೇಶಕರ ಸಂಗಡ ನನ್ನ ಸ್ವಂತ ಸಂಸ್ಥೆ ಅಡಿ 29ಚಿತ್ರ ನಟಿಸಿ ನಿರ್ಮಿಸಿ ತಲೆ ಎತ್ತಿ ರಾಯರು ಕನ್ನಡಿಗರ ಆಶೀರ್ವಾದದಿಂದ ನಿಂತು ಬಿಟ್ಟೆ..ಇದಕ್ಕೆ ನನ್ನ ಧನ್ಯವಾದ ನನ್ನ ಹಿರಿಯ ಭಾವ ಶ್ರೀನಿವಾಸಗೆ ಅರ್ಪಣೆ.. ‘ ಎಂದು ಭಾವ ಪೂರ್ಣವಾಗಿ ಬರೆದುಕೊಂಡಿದ್ದಾರೆ.
