Asianet Suvarna News Asianet Suvarna News

ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರಶಸ್ತಿ ಬಾಚಿದ ಕನ್ನಡದ 'ಕೋಳಿ ಎಸ್ರು'

ಕನ್ನಡದ ‘ಕೋಳಿ ಎಸ್ರು’ ಸಿನಿಮಾ ಅಂತಾರಾಷ್ಟ್ರೀಯ ಪ್ರಶಸ್ತಿ ಗೆದ್ದುಕೊಂಡಿದೆ.  ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವೆಲ್‌ಗಳಲ್ಲಿ ಪ್ರದರ್ಶನಗೊಂಡಿದ್ದು  ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಇದರ ಕಥೆ ಏನು?
 

Akshatha  Pandavapura and Champa Shettys Koli Esru  wons international award taken
Author
First Published Jan 20, 2023, 5:03 PM IST

ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಬರಹಗಾರ್ತಿ ವೈದೇಹಿಯವರ  ಕಥೆಯಾಧಾರಿತ 'ಅಮ್ಮಚ್ಚಿಯೆಂಬ ನೆನಪು' ನೆನಪಿದೆಯಾ? ಚಂಪಾ ಪಿ. ಶೆಟ್ಟಿ ನಿರ್ದೇಶಿಸಿದ ಈ ಚಿತ್ರವು ವೈದೇಹಿಯವರ ಮೂರು ಸಣ್ಣಕಥೆಗಳ ಮೇಲೆ ಆಧಾರಿತವಾಗಿದೆ. ಚಿತ್ರದ ಸಂಗೀತವನ್ನು ಕಾಶೀನಾಥ್ ಪತ್ತಾರ್ ಸಂಯೋಜಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಈ ಚಿತ್ರವು ರಾಷ್ಟ್ರೀಯ ಮತ್ತು  ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಹಲವಾರು ಪ್ರಶಸ್ತಿಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತ್ತು. ಇದರಲ್ಲಿ ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ ನಟಿಸಿದ್ದರು. ‘ಪಿಂಕಿ ಎಲ್ಲಿ’ ಸೇರಿದಂತೆ ಇವರು ಬೆರಳೆಣಿಕೆ ಸಿನಿಮಾ ಮಾಡಿದರೂ, ಅವರು ಮಾಡಿರುವ ಚಿತ್ರಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಮೆಚ್ಚುಗೆ ಸಿಕ್ಕಿರುವುದು ವಿಶೇಷ.

ಇದೀಗ ಅಕ್ಷತಾ ಪಾಂಡವಪುರ ಅವರು  ನಟಿಸಿರುವ ‘ಕೋಳಿ ಎಸ್ರು’ ಸಿನಿಮಾಕ್ಕೆ ಕೂಡ ಅಂತಾರಾಷ್ಟ್ರೀಯ ಪ್ರಶಸ್ತಿ ಬಂದಿದೆ. ಈಗಾಗಲೇ ರಾಷ್ಟ್ರೀಯ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವೆಲ್‌ಗಳಲ್ಲಿ ಪ್ರದರ್ಶನಗೊಂಡಿದ್ದು ಸದ್ದಿಲ್ಲದೇ ‘ಕೋಳಿ ಎಸ್ರು’ (Koli Esru) ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದೆ.  ಈ ಚಿತ್ರ ‘ನ್ಯೂಯಾರ್ಕ್ ಇಂಡಿಯನ್ ಫಿಲ್ಮ ಫೆಸ್ಟಿವಲ್’ಗೆ ಆಯ್ಕೆಯಾಗಿ ಯಶಸ್ವಿ ಪ್ರದರ್ಶನ ಕಂಡಿದೆ. ಕೆಲ ದಿನಗಳ ಹಿಂದೆ ಔರಂಗಾಬಾದ್‌ನಲ್ಲಿ ನಡೆದ ಪ್ರತಿಷ್ಠಿತ ‘ಅಜಂತಾ ಎಲ್ಲೋರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ದಲ್ಲಿ ಆಯ್ಕೆಯಾಗಿ ಪ್ರದರ್ಶನಗೊಂಡಿದೆ.  ಇಂಡಿಯನ್ ಕಾಂಪಿಟೆಷನ್ ಸ್ಪರ್ಧೆಯಲ್ಲಿ ಇನ್ನುಳಿದ ಎಂಟು ಚಿತ್ರಗಳೊಂದಿಗೆ ಸ್ಪರ್ಧಿಸಿ ಎರಡು ಪ್ರಶಸ್ತಿಗಳನ್ನು ‘ಕೋಳಿ ಎಸ್ರು’ ಬಾಚಿಕೊಂಡಿರುವುದು ಇದರ ಹೆಮ್ಮೆ. 

ವೇಶ್ಯೆಯರಿಗಾಗಿ ಬಣ್ಣ ಹಚ್ಚಿದ ಖ್ಯಾತ ಬಾಲಿವುಡ್​ ನಟಿಮಣಿಗಳಿವರು...

ಔರಂಗಾಬಾದ್ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಚಿತ್ರದ ನಾಯಕಿ ಅಕ್ಷತಾ ಪಾಂಡವಪುರ ಮತ್ತು ತೀರ್ಪುಗಾರರ ವಿಶೇಷ ಪ್ರಶಸ್ತಿಯನ್ನು ಬಾಲ ನಟಿ ಅಪೇಕ್ಷಾ ಚೋರನಹಳ್ಳಿ ಪಡೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಸೇರಿದಂತೆ ಸಾಕಷ್ಟು ಚಿತ್ರೋತ್ಸಗಳಿಗೆ ಸಿನಿಮಾವನ್ನು ಕಳಿಸುವ ಜೊತೆಗೆ ಥಿಯೇಟರ್‌ನಲ್ಲಿ ಸಿನಿಮಾ ಬಿಡುಗಡೆ ಮಾಡುವುದಕ್ಕೆ ತಂಡ ತಯಾರಿ ನಡೆಸಿದೆ. 

ಈ ವಿಷಯವನ್ನು ಖುದ್ದು ಚಿತ್ರತಂಡ ತೆರೆದಿಟ್ಟಿದೆ. ಈ ಯಶಸ್ಸಿನ ಹಿಂದಿನ ರೋಚಕ ಕಥೆಗಳನ್ನು ಚಿತ್ರದ ನಿರ್ದೇಶಕಿ ಚಂಪಾ ಶೆಟ್ಟಿ (Champa Shetty) ತೆರೆದಿಟ್ಟಿದ್ದಾರೆ. ‘ನಮ್ಮ ಮೊದಲ ಪ್ರಯತ್ನದ ಅಮ್ಮಚ್ಚಿಯಂಬ ನೆನಪು ಯಶಸ್ಸಿನ ಬೆನ್ನಲ್ಲೇ ಮತ್ತೊಂದು ಚಿತ್ರ ಮಾಡಲು ಕಾಯುತ್ತಿದ್ದೆ. ಅಮ್ಮಚ್ಚಿಯ ನೆನಪಿನಂತೆಯೇ ಜನಮಾನಸದಲ್ಲಿ ಉಳಿಯುವ ಆದರೆ ಎಲ್ಲವುಗಳಿಗಿಂತಲೂ ವಿಭಿನ್ನವಾಗಿರುವ ಚಿತ್ರಗಳನ್ನು ಮಾಡಲು ಬಯಸುತ್ತಿದ್ದೆ. ಆಗ ನನಗೆ ನೆನಪಾಗಿದ್ದು ನಾನು ನಟಿಸಿದ್ದ ‘ಹುಚ್ಚೇರಿಯ ಎಸರಿನ ಪ್ರಸಂಗ’ ನಾಟಕ. 80ರ ದಶಕದಲ್ಲಿ  ಕಾ.ತಾ ಚಿಕ್ಕಣ್ಣ ಅವರು ಬರೆದ ‘ಹುಚ್ಚೇರಿಯ ಎಸರಿನ ಪ್ರಸಂಗ’ ಕಥೆಯನ್ನು ಆಧರಿಸಿದ್ದ ಈ ಕಥೆಯನ್ನು ಆಯ್ಕೆ  ಮಾಡಿಕೊಂಡು  ಸಿನಿಮಾ ಮಾಡಲು ಮುಂದಾದೆ' ಎಂದು ಚಂಪಾಶೆಟ್ಟಿ ಕೋಳಿ ಎಸ್ರು ಇದರ ಹಿನ್ನೆಲೆಯನ್ನು ತೆರೆದಿಟ್ಟಿದ್ದಾರೆ.

Critics Choice Awards 2023: ಗೋಲ್ಡನ್​ ಅವಾರ್ಡ್​ ಬೆನ್ನಲ್ಲೇ 'RRR' ಚಿತ್ರಕ್ಕೆ ಇನ್ನೊಂದು ಗರಿ

 ಹೆಣ್ಣೊಬ್ಬಳು ಅನುಭವಿಸುವ ಕಷ್ಟಗಳನ್ನು ತೆರೆದಿಡುವ ಅಂಶ ಈ ಚಿತ್ರದಲ್ಲಿದೆ. ಇಂದಿನ ಸಮಾಜಕ್ಕೆ ಒಗ್ಗುವಂತೆ ಮೂಲ ಕತೆಗೆ ಧಕ್ಕೆ ಆಗದಂತೆ ಸಿನಿಮಾ ಮಾಡಲಾಗಿದೆ. ಸಂಪೂರ್ಣವಾಗಿ ಹಳ್ಳಿಯ ಹಿನ್ನೆಲೆ ಚಿತ್ರದಲ್ಲಿದೆ.  ಆದರೆ ಈ ಚಿತ್ರ ಇಷ್ಟೊಂದು ಯಶಸ್ಸು ಕಾಣುತ್ತದೆ ಎಂದು ತಿಳಿದಿರಲಿಲ್ಲ ಎಂದು ಚಂಪಾ ಹೇಳಿದ್ದಾರೆ. ಈ ಚಿತ್ರ ನಿರ್ಮಾಣಕ್ಕೆ ಮುನಿವೆಕಟಪ್ಪನವರು ಸೇರಿದಂತೆ ಸಾಕಷ್ಟು ಜನ ಕೈ ಜೋಡಿಸಿದ್ದಾರೆ’ ಎಂದರು. ಅಷ್ಟಕ್ಕೂ ಈ ಚಿತ್ರದ ಕಥೆ ಏನೆಂದರೆ, ಬಡತನದ ಬೇಗೆಯಲ್ಲಿ ಬೇಯುತ್ತಿರುವ ಹಳ್ಳಿಯ ಹೆಣ್ಣು ಮಗಳೊಬ್ಬಳು  ಊರಲ್ಲಿ ಯಾರ ಮನೆಯಲ್ಲಿ ಕೋಳಿ ಸಾರ್ ಮಾಡಿದರೆ, ಎಸರಿಗಾಗಿ ಕಾಯ್ದು ತೆಗೆದುಕೊಂಡು ಬರುತ್ತಾಳೆ. ಈಕೆಯ ಮಗಳು ಕೂಡ ಅಮ್ಮ ಮಾಡಿದಂತೆಯೇ ಮಾಡಲು ಶುರು ಮಾಡಿದಾಗ ಆ ಹೆಣ್ಣುಮಗಳು ಹೇಗೆ ಬದಲಾದಳು' ಎಂಬ ಕತೆ ಇದರಲ್ಲಿ ಇದೆ. 
 

Follow Us:
Download App:
  • android
  • ios