Viral Video: ರೇಸಿಂಗ್ ಅಭ್ಯಾಸ ವೇಳೆ ನಟ ಥಲಾ ಅಜಿತ್ ಕುಮಾರ್ ಕಾರು ಭೀಕರ ಅಪಘಾತ
ದುಬೈನಲ್ಲಿ ನಡೆಯಲಿರುವ '24H Dubai 2025' ಕಾರ್ ರೇಸ್‌ನ ಅಭ್ಯಾಸದ ವೇಳೆ ನಟ ಥಲಾ ಅಜಿತ್ ಕುಮಾರ್ ಅವರ ಕಾರು ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್, ಅವರಿಗೆ ಯಾವುದೇ ಗಾಯಗಳಾಗಿಲ್ಲ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದುಬೈ (ಜ.7): ತಮಿಳು ನಟ ಥಲಾ ಅಜಿತ್ ಕುಮಾರ್ ಅವರ ಕಾರು ಭಾರೀ ಪ್ರಮಾಣದಲ್ಲಿ ಅಪಘಾತಕ್ಕೆ ಈಡಾಗಿದೆ. ದುಬೈನಲ್ಲಿ ನಡೆಯಲಿರುವ '24H Dubai 2025' ಕಾರ್ ರೇಸ್‌ನಲ್ಲಿ ಪಾಲ್ಗೊಳ್ಳುವ ಸಲುವಾಗಿ ಅಭ್ಯಾಸ ನಡೆಸುತ್ತಿದ್ದ ವೇಳೆ ಅವರು ಕಾರು ತಡೆಗೋಡೆಗೆ ಬಡಿದಿದೆ. ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಂಗಳವಾರ ದುಬೈನಲ್ಲಿ ಘಟನೆ ನಡೆದಿದೆ. ಅಪಘಾತವಾಗುವ ವೇಳೆ ಸ್ವತಃ ಅಜಿತ್ ಕುಮಾರ್ ಅವರೇ ಕಾರ್ ಡ್ರೈವ್ ಮಾಡುತ್ತಿದ್ದರು ಎನ್ನಲಾಗಿದೆ. ದುಬೈನಲ್ಲಿ ಕಾರ್ ರೇಸ್ ಅಭ್ಯಾಸದ ವೇಳೆ ಅಜಿತ್ ಕುಮಾರ್ ಅವರ ಕಾರು ಅಪಘಾತಕ್ಕೀಡಾಗಿದೆ. ಅಪಘಾತದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಅದೃಷ್ಟವಶಾತ್ ನಟ ಅಜಿತ್ ಗೆ ಯಾವುದೇ ಗಾಯವಾಗಿಲ್ಲ ಎನ್ನಲಾಗಿದೆ.ಅಜಿತ್ ಕುಮಾರ್ ರೇಸಿಂಗ್ ಟ್ವಿಟರ್ ಹ್ಯಾಂಡಲ್ ಈ ವಿಡಿಯೋವನ್ನು ಪೋಸ್ಟ್ ಮಾಡಿದೆ. 15 ಸೆಕೆಂಡ್‌ನ ವಿಡಿಯೋ ಇದಾಗಿದೆ.ಶರವೇಗದಲ್ಲಿ ಬರುವ ಕಾರ್, ತಡೆಗೋಡೆಗೆ ಢಿಕ್ಕಿ ಹೊಡೆದು ಐದು ಬಾರಿ ತಿರುಗಿ ನಿಂತುಕೊಂಡಿದೆ. ಕಾರು ಢಿಕ್ಕಿ ಹೊಡೆದ ರಭಸಕ್ಕೆ ಬಾನೆಟ್ ಪೂರ್ತಿ ನುಜ್ಜುಗುಜ್ಜಾಗಿದೆ. ಅದಾದ ಕೆಲ ಹೊತ್ತಿನಲ್ಲಿ ಅಲ್ಲಿಗೆ ಬರುವ ರಕ್ಷಣಾ ಸಿಬ್ಬಂದಿ ಕಾರ್‌ನ ಒಳಗಿನಿಂದ ಅಜಿತ್ ಕುಮಾರ್ ಅವರನ್ನು ಹೊರಗೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
1997ರ ಹಾಲಿವುಡ್ ನ ಹಿಟ್ ಚಿತ್ರದ ರಿಮೇಕ್ ನಲ್ಲಿ ಅಜಿತ್-ತ್ರಿಶಾ ಜೋಡಿ, ರೋಮಾಂಚನಗೊಳಿಸಿದ ಟೀಸರ್!
ಅಜಿತ್ ಕುಮಾರ್‌ಗೆ ರೇಸಿಂಗ್ ಬಗ್ಗೆ ಇರುವ ಆಸಕ್ತಿ ಎಲ್ಲರಿಗೂ ಗೊತ್ತಿರುವಂಥದ್ದೆ. ಮುಂಬರುವ ದುಬೈ 24 ಅವರ್ಸ್ ರೇಸ್‌ನಲ್ಲಿ ಅಜಿತ್ ಕೂಡ ಭಾಗಿಯಾಗಲಿದ್ದಾರೆ. ಮಂಗಳವಾರ 6 ಗಂಟೆಗಳ ದೀರ್ಘ ಎಂಡುರೆನ್ಸ್ ಟೆಸ್ಟ್‌ನಲ್ಲಿ ಭಾಗಿಯಾಗಿರುವಾಗ ಅಜಿತ್ ಅವರ ಪೋರ್ಶೆ ಕಾರು ಅಪಘಾತಕ್ಕೆ ಈಡಾಗಿದೆ. ಅಭ್ಯಾಸ ಅವಧಿ ಇನ್ನೇನು ಮುಗಿಯಬೇಕು ಎನ್ನುವ ಹಂತದಲ್ಲಿ ಅವರು ಕಾರು ತಡೆಗೋಡೆಗೆ ಬಡಿದಿದೆ.
ಪಿ.ವಿ. ಸಿಂಧು ಮದುವೆಯಲ್ಲಿ ಪಾಲ್ಗೊಂಡ ಅಜಿತ್ ಫ್ಯಾಮಿಲಿ! ಫೋಟೋ ವೈರಲ್
ಅಜಿತ್ ಕುಮಾರ್ ರೇಸಿಂಗ್ ಹೆಸರಿನ ಟೀಮ್‌ನ ಮಾಲೀಕತ್ವವನ್ನು ಅವರು ಹೊಂದಿದ್ದು, ಅತ್ಯಂತ ಸ್ಪರ್ಧಾತ್ಮಕವಾಗಿರುವ ರೇಸ್‌ನಲ್ಲಿ ಅವರು ಭಾಗಿಯಾಗಲಿದ್ದಾರೆ. ಅವರೊಂದಿಗೆ ಇನ್ನೂ ಕೆಲವು ಡ್ರೈವರ್‌ಗಳು ಇದಾರೆ. ಮ್ಯಾಥ್ಯೂ ಡೆಟ್ರಿ, ಫ್ಯಾಬಿಯನ್ ಡಫಿಯಕ್ಸ್ ಮತ್ತು ಕ್ಯಾಮೆರಾನ್ ಮ್ಯಾಕ್ಲಿಯೋಡ್ ಅಜಿತ್ ಕುಮಾರ್ ರೇಸಿಂಗ್ ಟೀಮ್‌ನಲ್ಲಿದ್ದಾರೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಅಜಿತ್ ಕುಮಾರ್ ರೇಸಿಂಗ್‌ಗೆ ಟೀಮ್ ಮ್ಯಾನೇಜರ್ ಆಗಿ ಫ್ಯಾಬಿಯನ್ ಡಫಿಯಕ್ಸ್ ಅಧಿಕಾರ ವಹಿಸಿಕೊಂಡಿದ್ದರು.
ನಟ ಅಜಿತ್ ಕುಮಾರ್ ಅಭಿನಯದ ಪೊಂಗಲ್ ಹಬ್ಬಕ್ಕೆ ಬಿಡುಗಡೆಯಾಗಬೇಕಿದ್ದ 'ವಿದಾಯಮುರ್ಚಿ' ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಇದರ ಬೆನ್ನಲ್ಲೇ ಅವರೂ ನಟಿಸಿರುವ 'ಗುಡ್ ಬ್ಯಾಡ್ ಆಗ್ಲಿ' ಚಿತ್ರ ಏಪ್ರಿಲ್ 10 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ.