ತಮಿಳು ಚಿತ್ರರಂಗದ ಮೇರು ನಟ ಕಮಲ್ ಹಾಸನ್ ಪುತ್ರಿ ಪೇಮೆಂಟ್ ಎಷ್ಟು ಗೊತ್ತಾ..? ಕೆಲವು ವರ್ಷಗಳ ಹಿಂದೆ ಸಿನಿ ಲೋಕಕ್ಕೆ ಕಾಲಿರಿಸಿದ ನಟಿ ಧನುಷ್ ಅಭಿನಯದ ತ್ರೀ ಮೂಲಕ ಚಿಪರಿಚಿತರಾಗಿದ್ದಾರೆ. ಶ್ರುತಿ ಹಾಸನ್ ಅವರು ವಕೀಲ್ ಸಾಬ್‌ ಸಿನಿಮಾದಲ್ಲಿ ನಟಿಸಲಿದ್ದಾರೆ ಅನ್ನೋ ಸುದ್ದಿ ಕೇಳಿ ಬರ್ತಿದೆ.

ಆದರೆ ಸಿನಿಮಾದ ನಾಯಕಿಯ ಆಯ್ಕೆ ಇನ್ನೂ ಅಂತಿಮವಾಗಿಲ್ಲ. ವೇಣು ಶ್ರೀರಾಮ್ ಅವರ ನಿರ್ದೇಶನದ ವಕೀಲ್ ಸಾಬ್ ಸಿನಿಮಾದಲ್ಲಿ ಪವರ್‌ ಸ್ಟಾರ್ ಪವನ್ ಕಲ್ಯಾಣ್ ಹಿರೋ ಆಗಿ ಕಾಣಿಸಿಕೊಳ್ಳಲಿದ್ದಾರೆ. ವೇಣು ಅವರು ಇದೇ ಮೊದಲ ಬಾರಿ ಪವನ್ ಜೊತೆ ಕೆಲಸ ಮಾಡಿದ್ದಾರೆ. ಸಿನಿಮಾ ಮೇ ತಿಂಗಳಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಕೊರೋನಾದಿಂದಾಗಿ ಬಾಕಿಯಾಯಿತು.

ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಕಮಲಾಕರ್ ಇನ್ನಿಲ್ಲ

ಇದು ಬಾಲಿವುಡ್‌ನ ಪಿಂಕ್ ಸಿನಿಮಾದ ರಿಮೇಕ್ ಆಗಿದ್ದು, ಸಿನಿಪ್ರಿಯರಲ್ಲಿ ಇನ್ನಷ್ಟು ಕುತೂಹಲ ಸೃಷ್ಟಿಸಿದೆ, ಚಿತ್ರದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಅಧಿಕೃತವಾಗಿ ತಿಳಿಸದಿದ್ದರೂ ಶ್ರುತಿ ಹಾಸನ್ ನಾಯಕಿ ನಟಿಯಾಗಿರಲಿದ್ದಾರೆ ಎಂಬ ಸುದ್ದಿ ಇದೆ.  ಆದರೆ ನಟಿ 7 ದಿನದ ಶೂಟಿಂಗ್‌ಗೆ 70 ಲಕ್ಷ ಸಂಭಾವನೆ ಕೇಳುತ್ತಿದ್ದಾರೆ ಎಂಬ ಸುದ್ದಿಯೂ ಇದೆ.

'ಮನೆ ಮಗನಿಗೆ ಮನವಿ': ಅಳಿಯ ಚಿರು ಸರ್ಜಾಗೆ ಮಾವನ ಭಾವುಕ ಪತ್ರ..!

ದಿನದ 10 ಗಂಟೆ ಶ್ರುತಿ ಸೆಟ್‌ನಲ್ಲಿ ಕೆಲಸ ಮಾಡಲಿದ್ದು ಈ ಮೂಲಕ ವಾರದಲ್ಲಿ 70 ಲಕ್ಷ ಎಂದು ಸಂಭಾವನೆ ಹೇಳುತ್ತಿದ್ದಾರೆ ನಟಿ. ಇದೇ ಸಂಭಾವನೆಗೆ ಶ್ರತಿ ಹಿರೋಯಿನ್ ಆಗಿ ಫಿಕ್ಸ್ ಆಗ್ತಾರಾ..? ಅಥವಾ ಬೇರೆ ನಟಿಯರು ಇವರನ್ನು ರಿಪ್ಲೇಸ್ ಮಾಡ್ತಾರಾ ಅಂತ ಕಾದು ನೋಡಬೇಕು.