ಬೆಂಗಳೂರು(ಅ.02)  ಮಗಳು ಐರಾಗಾಗಿ ರಾಕಿ ಬಾಯ್  ಮತ್ತು ರಾಧಿಕಾ ಪಂಡಿತ್ ಶಾಪಿಂಗ್ ಮಾಡಿದ್ದ ಪೋಟೋಗಳು ಸಖತ್ ವೈರಲ್ ಆಗಿದ್ದವು. ಈಗ ರಾಧಿಕಾ ಪಂಡಿತ್ ತಮ್ಮ ಇಸ್ಟಾ ಗ್ರ್ಯಾಮ್ ಖಾತೆಯಲ್ಲಿ ಮಗಳ ಮುದ್ದು ವಿಡಿಯೋ ಹಂಚಿಕೊಂಡಿದ್ದು ಕೆಲವೇ ಗಂಟೆಗಳಲ್ಲಿ ಲಕ್ಷಂತರ ವೀವ್ ಕಂಡಿದೆ.

ವಿಡಿಯೋದಲ್ಲಿ ಮಗಳು ಐರಾ ಅಪ್ಪ-ಅಮ್ಮನ ಜೋಡಿ ಪೋಟೋದ ಎದುರು ಕುಳಿತಿದ್ದಾಳೆ. ವಿಡಿಯೋದಲ್ಲಿ ಧ್ವನಿಯೊಂದು ಅಪ್ಪ ಎಲ್ಲಿ? ಅಮ್ಮ ಎಲ್ಲಿ ಎಂದು ಪ್ರಶ್ನೆ ಮಾಡುತ್ತದೆ. ಅದಕ್ಕೆ ಕ್ಯೂಟಾಗಿಯೇ ಅಪ್ಪ ಯಶ್ ಅಮ್ಮ ರಾಧಿಕಾರ ಪೋಟೋದ ಮೇಲೆ ಮಗಳು ಬೆರಳಿಟ್ಟು ಗುರುತು ಮಾಡುತ್ತಾಳೆ. ವಿಡಿಯೋ ಕ್ಯೂಟ್ ಇದಾಗಿದೆ.

ಆದರೆ ಕತೆ ಇಲ್ಲಿಗೆ ಮುಗಿಯುವುದಿಲ್ಲ. ವಿಡಿಯೋದಲ್ಲಿ ಮಾತನಮಾಡುವ ಧ್ವನಿ ಕೊಂಕಣಿಯಲ್ಲಿ ಪ್ರಶ್ನೆ ಕೇಳಿದೆ. ಇದು ಮೇಲ್ನೋಟಕ್ಕೆ ರಾಧಿಕಾ ಪಂಡಿತ್ ಅವರ ಧ್ನನಿಯಂತೇ ಇದೆ.  ವಿಡಿಯೋವನ್ನು ನೋಡಿದ ಹಲವಾರು ಜನ ಮಗುವಿನ ಮಾತೃಭಾಷೆಯ ಪ್ರಶ್ನೆ ಎತ್ತಿದ್ದಾರೆ?

ಐರಾಗೆ ಅಜ್ಜ ಹಾಡಿದ ಜೋಗುಳ: ಮೂಕರಾದರು ಫ್ಯಾನ್ಸ್

ಇದಕ್ಕೆ ಒಂದು ಚೂರು ಖಾರವಾಗಿಯೇ ಉತ್ತರಿಸಿರುವ ರಾಧಿಕಾ ಪಂಡಿತ್ ಯಾರಿಗೂ ಅನುಮಾನ ಬೇಡ ಐರಾ ಅಪ್ಪನ ಮಾತೃಭಾಷೆ ಕನ್ನಡ ಮತ್ತು ಅಮ್ಮನ ಮಾತೃಭಾಷೆ ಕೊಂಕಣೀ ಎರಡರಲ್ಲಿಯೂ ರೆಸ್ಪಾಂಡ್ ಮಾಡುತ್ತಾಳೆ ಎಂದು ಕಮೆಂಟ್ ಮಾಡಿದ್ದಾರೆ.

ಐರಾಗೆ ಈಗ ಹತ್ತು ತಿಂಗಳು. ಆದರೆ ಇದು ಆಕೆಗೆ ಎಂಟು ತಿಂಗಳು ಇದ್ದಾಗ ತೆಗೆದ ವಿಡಿಯೋ ಎಂಬುದನ್ನು ರಾಧಿಕಾ ಪಂಡಿತ್ ತಿಳಿಸಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ತಮ್ಮ ಮಗಳ ಜೊತೆ ಆಟವಾಡುತ್ತಿದ್ದ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಐರಾ ಜತೆ ಅಜ್ಜ ಹಾಡು ಗುನುಗುತ್ತಿದ್ದ ವಿಡಿಯೋಕ್ಕೂ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು.