ಮುಂಬೈ[ಸೆ. 15]  ದೊಡ್ಡ ಬ್ರೇಕ್ ನಂತರ ಚೆಲುವೆ ಪ್ರಿಯಾಂಕಾ ಚೋಪ್ರಾ ಹಿಂದಿಯಲ್ಲಿ ನಟಿಸಿರುವ ಸಿನಿಮಾ 'ದಿ ಸ್ಕೈ ಈಸ್ ಪಿಂಕ್' ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಫರ್ಹಾನ್ ಅಖ್ತರ್, ಜೈರಾ ವಾಸಿಂ  ಜತೆ ಪ್ರಿಯಾಂಕಾ ಅಭಿನಯ ಮಾಡಿದ್ದಾರೆ.

ಪ್ರಿಯಾಂಕಾ ಕಣ್ಣೀರಿನ ಕಾರಣವನ್ನು ನಿಮಗೆ ಹೇಳಲೇಬೇಕು. ಟೊರೊಂಟೋದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ  ಪ್ರಿಯಾಂಕಾ ಕಣ್ಣೀರಿಟ್ಟಿದ್ದಾರೆ.  ನಿರ್ದೇಶಕಿ ಸೋನಾಲಿ ಬೋಸ್‌ರನ್ನು ಅಪ್ಪಿಕೊಂಡು ಭಾವನೆಗಳನ್ನು ಹೊರ ಹಾಕಿದ್ದಾರೆ.

ಪೊಲೀಸರ ಕೈಗೆ ಸಿಕ್ಕಿಬಿದ್ದ ಪ್ರಿಯಾಂಕಾಗೆ 7 ವರ್ಷ ಶಿಕ್ಷೆ

ಸೋನಾಲಿ ಬೋಸ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಚಿಕ್ಕಂದಿನಲ್ಲೇ ಅಪರೂಪದ ಕಾಯಿಲೆಗೆ ತುತ್ತಾದರೂ, 15 ವರ್ಷಕ್ಕೆ ವಾಗ್ಮಿಯಾಗಿ, ಸಾಹಿತಿಯಾಗಿ ಗುರುತಿಸಿಕೊಂಡಿರುವ ಆಯಿಷಾ ಚೌಧರಿ ಜೀವನ ಆಧಾರಿತ ಈ ಸಿನಿಮಾ ಅಕ್ಟೋಬರ್ ನಲ್ಲಿ ತೆರೆಗೆ ಬರಲಿದೆ. ಯು ಟ್ಯುಬ್ ನಲ್ಲಿ ಟ್ರೇಲರ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಪ್ರಿಯಾಂಕಾ ಚೋಪ್ರಾ ಮತ್ತು ಚಿತ್ರತಂಡ ಜನರ ಪ್ರೀತಿಯನ್ನು ಕಂಡು ಭಾವೋದ್ವೇಗಕ್ಕೆ ಒಳಗಾಯಿತು ಎನ್ನಲಾಗಿದ್ದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.