Asianet Suvarna News Asianet Suvarna News

ದರ್ಶನ್ ನಟನೆಯ 'ಇಂದ್ರ' ಚಿತ್ರಕ್ಕೆ ರಾತ್ರೋ ರಾತ್ರಿ ಹೀರೋಯಿನ್ ಬದಲಾಗಿದ್ದು ಯಾಕೆ?

ಪ್ರತಿ ಶಾಟ್ಸ್ ಇಟ್ಟಾಗಲೂ ಇಪ್ಪತ್ತಕ್ಕಿಂತ ಹೆಚ್ಚು ಟೇಕ್ ಮಾಡುತ್ತ ಟೈಮ್ ವೇಸ್ಟ್ ಮಾಡುತ್ತಿರಲು ಎಲ್ಲರಿಗೂ ಅದೊಂದು ದೊಡ್ಡ ಸಮಸ್ಯೆ ಆಗಿತ್ತು ಎನ್ನಲಾಗಿದೆ. ಆದರೆ, ನಾಯಕ ನಟ ದರ್ಶನ್ ಸ್ವಲ್ಪವೂ ಬೇಸರಿಸಿಕೊಳ್ಳದೇ ಶೂಟಿಂಗ್‌ಗೆ ಕರೆದಾಗ ಕ್ಯಾಮೆರಾ ಮುಂದೆ ಬಂದು ನಿಂತು ಹೇಳಿದ್ದನ್ನು ಮಾಡಿ..

Actress namitha selected suddenly for darshan lead indra movie by replacing mumbai heroine srb
Author
First Published Jun 24, 2024, 2:36 PM IST

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಇಂದ್ರ ಚಿತ್ರದ ಶೂಟಿಂಗ್ ವೇಳೆ ನಡೆದ ಘಟನೆಯಿದು. ಇಂದ್ರ ಚಿತ್ರಕ್ಕೆ ಮೈಸೂರಿನಲ್ಲಿ ಶೂಟಿಂಗ್ ನಡೆಯುತ್ತಿತ್ತು. ಅಲ್ಲಿ ಅದಕ್ಕಾಗಿ ಅಗ್ರಹಾರದ ಸೆಟ್ ಹಾಕಲಾಗಿತ್ತು. ಮುಂಬೈನಿಂದ ಬಂದಿದ್ದ ಹಿರೋಯಿನ್ ನಾಯಕನಟ ದರ್ಶನ್ ಜೊತೆಗೆ ಚಿತ್ರೀಕರಣದಲ್ಲಿ ನಿರತರಾಗಿದ್ದರು. ಆದರೆ, ದರ್ಶನ್ ಹೈಟ್‌ಗೆ ಕಂಪೇರ್ ಮಾಡಿದರೆ ಆ ನಾಯಕಿ ನಟಿ ತುಂಬಾ ಕುಳ್ಳಗೆ ಇದ್ದರಂತೆ. ಹೀಗಾಗಿ ಯಾವುದೇ ರೀತಿಯಲ್ಲಿ ಶಾಟ್ಸ್ ಇಟ್ಟರೂ ಡೈರೆಕ್ಟರ್ ಸೇರಿದಂತೆ ಅಲ್ಲಿದ್ದ ತಂತ್ರಜ್ಞರಿಗೆ ಇಷ್ಟವಾಗದೇ ಸಮಸ್ಯೆ ಆಗುತ್ತಿತ್ತಂತೆ. 

ಪ್ರತಿ ಶಾಟ್ಸ್ ಇಟ್ಟಾಗಲೂ ಇಪ್ಪತ್ತಕ್ಕಿಂತ ಹೆಚ್ಚು ಟೇಕ್ ಮಾಡುತ್ತ ಟೈಮ್ ವೇಸ್ಟ್ ಮಾಡುತ್ತಿರಲು ಎಲ್ಲರಿಗೂ ಅದೊಂದು ದೊಡ್ಡ ಸಮಸ್ಯೆ ಆಗಿತ್ತು ಎನ್ನಲಾಗಿದೆ. ಆದರೆ, ನಾಯಕ ನಟ ದರ್ಶನ್ ಸ್ವಲ್ಪವೂ ಬೇಸರಿಸಿಕೊಳ್ಳದೇ ಶೂಟಿಂಗ್‌ಗೆ ಕರೆದಾಗ ಕ್ಯಾಮೆರಾ ಮುಂದೆ ಬಂದು ನಿಂತು ಹೇಳಿದ್ದನ್ನು ಮಾಡಿ ಹೋಗುತ್ತಿದ್ದರಂತೆ. ಆದರೆ, ಶಾಟ್ ಮಾತ್ರ ಓಕೆ ಆಗುತ್ತಿರಲಿಲ್ಲ ಎನ್ನಲಾಗಿದೆ. ಆಗ ಅಲ್ಲಿಯೇ ಇದ್ದ ಮೈಸೂರು ಮೂಲದ ನಾಗೇಂದ್ರ ಎನ್ನುವವರು ನಿರ್ದೇಶಕರಿಗೆ  'ನಿಮಗೆ ಈ ಹೀರೋಯಿನ್ ಓಕೆ ಆಗಿದ್ಯಾ?' ಎಂದು ಕೇಳಿದರು. 

ಸಡನ್ನಾಗಿ ಹಾಗೆ ಬರೋಕಾಗಲ್ಲ, ಅಲ್ಲಿ ಬಂದು ನಾನು ಏನ್ ಮಾಡೋದು ಅಂದೆ; ಅಶ್ವಿನಿ ಪುನೀತ್ ರಾಜ್‌ಕುಮಾರ್

ಅಷ್ಟೇ ಅಲ್ಲ, ಅವರು, ಸ್ವತಃ ನಾನೇ ನೋಡ್ತಾ ಇದೀನಲ್ಲ, ಮಾಡಿದ್ದನ್ನೇ ಪದೇ ಪದೇ ಮಾಡ್ತಾ ಇದೀರ. ಈ ಹೀರೋಗೆ ಆ ಹೀರೋಯಿನ್ ಸೂಟ್ ಆಗ್ತಾ ಇಲ್ಲ ಅಂದ್ಬಿಟ್ರಂತೆ. ಅದಕ್ಕೆ ಡೈರೆಕ್ಟರ್ 'ಬಟ್, ಇವ್ರು ಈಗಾಗ್ಲೇ ತೆಲುಗಿನಲ್ಲಿ ಪವನ್ ಕಲ್ಯಾಣ್‌ ಅವರಿಗೆ ನಾಯಕಿಯಾಗಿ ನಟಿಸಿದ್ದಾರೆ' ಎನ್ನಲು ನಾಗೇಂದ್ರ ಅವರು 'ಪವನ್ ಕಲ್ಯಾಣ್‌ಗೆ ಹೈಟ್‌ಗೆ ಇವ್ರು ಓಕೆ. ಆದ್ರೆ ಈ ನಟ ದರ್ಶನ್ ತುಂಬಾ ಹೈಟ್‌ ಇದಾರೆ, ಹೀಗಾಗಿ ಸೂಟ್ ಆಗಲ್ಲ' ಅಂದ್ಬಿಟ್ರಂತೆ. ತಕ್ಷಣ ನಿರ್ದೇಶಕರಾದ ಹೆಚ್ ವಾಸು ಅವರು ಪ್ಯಾಕಪ್ ಮಾಡಿ ಎಲ್ಲರನ್ನೂ ಮನೆಗೆ ಕಳಿಸಿಬಿಟ್ರಂತೆ. 

ಅದೇ ಫೇಕ್ ಐಡಿಯಿಂದ ನನಗೂ ಅಶ್ಲೀಲ ಮೆಸೇಜ್ ಬಂದಿತ್ತು; ಕಿರುತೆರೆ ನಟಿಯೊಬ್ಬರ ಆರೋಪ!

ಬಳಿಕ, ಅದೇ ದಿನ ನಿರ್ಮಾಪಕರಾದ ಕುಪ್ಪಸ್ವಾಮಿ ಹಾಗೂ ಕೃಷ್ಣಕುಮಾರ್ ಜತೆ ಚೆನ್ನೈಗೆ ಹೋಗಿ ಅಲ್ಲಿ ಹಲವರನ್ನು ಆಡಿಷನ್ ಮಾಡಿದ್ರಂತೆ. ಆದರೆ, ನಟಿ ನಮಿತಾ ಬಿಟ್ಟು ಬೇರೆ ಯಾರೂ ಒಕೆ ಆಗದ ಕಾರಣ, ಫೈನಲಿ ನಟಿ ನಮಿತಾ ಅವರನ್ನೇ ಇಂದ್ರ ಚಿತ್ರಕ್ಕೆ ನಾಯಕಿಯನ್ನಾಗಿ ಮಾಡಿಕೊಂಡು ಶೂಟಿಂಗ್ ಮುಂದುವರಿಸಿದ್ದಾರೆ ಎನ್ನಲಾಗಿದೆ. ಹೀಗೆ, ಇಂದ್ರ ಚಿತ್ರಕ್ಕೆ ಆಯ್ಕೆಯಾಗಿದ್ದ ಮುಂಬೈ ನಟಿ ಬದಲಿಗೆ ತಮಿಳು ಹಾಗು ತೆಲುಗಿನಲ್ಲಿ ಖ್ಯಾತಿ ಪಡೆದಿದ್ದ ನಮಿತಾ ಅವರು ಆಯ್ಕೆಯಾಗಿದ್ದು. 

ಅಪ್ಪು ಸಾವಿನ ಹಿಂದಿನ ರಾತ್ರಿ, ರಮೇಶ್ ಅರವಿಂದ್ ಜೊತೆಗಿನ ಚರ್ಚೆಯಲ್ಲಿ ಬುದ್ಧ ಬಂದಿದ್ದು ಯಾಕೆ?

Latest Videos
Follow Us:
Download App:
  • android
  • ios