ಹೈದರಾಬಾದ್[ಜು. 14]  ಸೆಕ್ಸ್ ನಡೆಸದೇ ಬಿಗ್ ​ಬಾಸ್ ಮನೆಯಲ್ಲಿ 100 ದಿನ ಕಳೆಯಲು ಸಾಧ್ಯವೇ..! ಹೀಗೆಂದು ನಟಿಯೊಬ್ಬರು ನೀಡಿದ ಹೇಳಿಕೆ ಚರ್ಚೆ ಹುಟ್ಟುಹಾಕಿದೆ.

14 ಸ್ಪರ್ಧಿಗಳೊಂದಿಗೆ ತೆಲುಗು ಬಿಗ್​ಬಾಸ್ ರಿಯಾಲಿಟಿ ಶೋ ಆರಂಭವಾಗಲಿದ್ದು, ಈ ಬಾರಿ ನಟ ನಾನಿ ಬದಲಾಗಿ ಅಕ್ಕಿನೇನಿ ನಾಗಾರ್ಜುನ ಕಾರ್ಯಕ್ರಮವನ್ನು ನಿರೂಪಿಸುತ್ತಿದ್ದಾರೆ. ನಟಿ ಗಾಯತ್ರಿ ಗುಪ್ತಾ ಈ ಬಗೆಯ ಶಾಕಿಂಗ್ ಹೇಳಿಕೆ ನೀಡಿ ಸಂಚಲನ ಹುಟ್ಟಿಸಿದ್ದಾರೆ.

ಬಾಲಿವುಡ್ ನಟನೊಂದಿಗೆ ಖುಲ್ಲಂ ಖುಲ್ಲಾ ರಾಧಿಕಾ ಆಪ್ಟೆ ವಿಡಿಯೋ ಲೀಕ್!

ಬಿಗ್ ಬಾಸ್​ನಲ್ಲಿ ಭಾಗವಹಿಸಬೇಕಿದ್ದರೆ ಮಂಚ ಹಂಚಿಕೊಳ್ಳಬೇಕು ಎಂದು ಖಾಸಗಿ ಚಾನೆಲ್​ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಟಿ ಹೇಳಿದ್ದಾರೆ. 3ನೇ ಆವೃತ್ತಿಯ ಬಿಗ್​ ಬಾಸ್​ನಲ್ಲಿ ಭಾಗವಹಿಸುತ್ತೀರಾ ಎಂಬ ಪ್ರಶ್ನಗೆ ನಟಿ ನೀಡಿದ ಉತ್ತರ ಕೇಳಿ ಒಂದು ಕ್ಷಣ ಮಾಧ್ಯಮದವರೇ ಅವಕ್ಕಾಗಿ ಹೋಗಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸಲು ನನ್ನನ್ನು ಕೇಳಲು ಬಂದಿದ್ದವರು ಮಂಚ ಏರಬೇಕು ಎಂಬ ಬೇಡಿಕೆ ಇಟ್ಟಿದ್ದರು ಎಂಬ ಗಂಭೀರ ಆರೋಪ ಮಾಡಿದ್ದಾರೆ.