ಉಡುಪಿಯ ಕಾಲೇಜಿನಲ್ಲಿ ವಿದ್ಯಾರ್ಥಿನಿಯರೇ ಲೇಡಿಸ್​ ಟಾಯ್ಲೆಟ್​ನಲ್ಲಿ ಮೊಬೈಲ್​ ಇಟ್ಟು ಹಿಂದೂ ವಿದ್ಯಾರ್ಥಿನಿಯ ವಿಡಿಯೋ ಚಿತ್ರೀಕರಣ ಮಾಡಿರುವ ಕುರಿತು ನಟಿ ಅನಿತಾ ಭಟ್​ ಅನುಭವ ಹಂಚಿಕೊಂಡಿದ್ದಾರೆ. 

ಲೇಡೀಸ್​ ಟಾಯ್ಲೆಟ್​ನಲ್ಲಿ ಯುವತಿಯರೇ ಸೀಕ್ರೇಟ್​ ಆಗಿ ಮೊಬೈಲ್​ (Mobile) ಇಟ್ಟು, ಹಿಂದೂ ಹುಡುಗಿಯರ ವಿಡಿಯೋ ಚಿತ್ರೀಕರಿಸಿರುವ ಭಯಾನಕ ಘಟನೆ ಉಡುಪಿಯಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಈ ಘಟನೆ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಟಾಯ್ಲೆಟ್​ನಲ್ಲಿ ಮೊಬೈಲ್​ ಫೋನ್​ ಇಟ್ಟು ಹಿಂದೂ ಯುವತಿಯರು ಅಲ್ಲಿಗೆ ಹೋದಾಗ ಅದರ ವಿಡಿಯೋ ಮಾಡಿ ನಂತರ ಅದನ್ನು ತಮ್ಮ ಸ್ನೇಹಿತರಿಗೆ ಕಳುಹಿಸಲಾಗುತ್ತಿದ್ದ ಆತಂಕಕಾರಿ ಘಟನೆ ಇದಾಗಿದೆ. ಉಡುಪಿಯ ನೇತ್ರಜ್ಯೋತಿ ಕಾಲೇಜಿನಲ್ಲಿ ಈ ಘಟನೆ ನಡೆದಿರುವ ವರದಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಇದಾಗಲೇ, ಶಬನಾಜ್, ಅಲ್ಫಿಯಾ ಮತ್ತು ಆಲಿಮಾತುಲ್ ಎನ್ನುವ ವಿದ್ಯಾರ್ಥಿನಿಯರ ವಿರುದ್ಧ ಕ್ರಮ ತೆಗೆದುಕೊಂಡಿರುವುದಾಗಿ ತಿಳಿದುಬಂದಿದೆ. ಪ್ರಕರಣ ಸಂಬಂಧ ಕಾಲೇಜಿನಲ್ಲಿ ದೊಡ್ಡ ಗಲಾಟೆ ನಡೆದ ಕಾರಣ, ಆಡಳಿತ ಮಂಡಳಿ ಆ ಮೂವರು ವಿದ್ಯಾರ್ಥಿನಿಯರ ವಿರುದ್ಧ ಕ್ರಮ ತೆಗೆದುಕೊಂಡಿದೆ. ಮೂವರನ್ನು ಕಾಲೇಜಿನಿಂದ ಅಮಾನತು‌ ಮಾಡಿ ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ಈ ಘಟನೆ ಸಂಚಲನ ಸೃಷ್ಟಿಸಿದ್ದು, ಹಿಂದೂ ಸಂಘಟನೆಗಳು ಕಾಲೇಜಿಗೆ ತೆರಳಿ ಈ ಪ್ರಕರಣದ ಬಗ್ಗೆ ಸೂಕ್ತ ಕ್ರಮಕ್ಕೆ ಆಗ್ರಹಿಸಿರುವುದಾಗಿ ತಿಳಿದುಬಂದಿದೆ.

ಈಗ ಇದೇ ವಿಚಾರವಾಗಿ ಟಗರು (Tagaru), ಸೈಕೋ ಚಿತ್ರದ ಖ್ಯಾತ ಸ್ಯಾಂಡಲ್​ವುಡ್​ ನಟಿ ಅನಿತಾ ಭಟ್ ಟ್ವೀಟ್ ಮಾಡಿದ್ದಾರೆ. ತಮಗೂ ಇದೇ ರೀತಿಯ ಅನುಭವ ಆಗಿತ್ತು ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ. ಉಡುಪಿಯಲ್ಲಿ ನಡೆದಿರುವ ಘಟನೆಯ ಕುರಿತು ಅಕ್ಷಯ್​ ಎನ್ನುವವರು ಮಾಡಿರುವ ಟ್ವೀಟ್​ ಅನ್ನು ತಾವು ಶೇರ್​ ಮಾಡಿಕೊಂಡಿರುವ ನಟಿ ಅನಿತಾ, (Anita Bhat) ತಮಗೂ ಇಂಥ ಭಯಾನಕ ಅನುಭವ ಆಗಿದ್ದ ಬಗ್ಗೆ ಹೇಳಿಕೊಂಡಿದ್ದಾರೆ. 'ನಾನು ಹೈಸ್ಕೂಲಿನಲ್ಲಿದ್ದಾಗ ಇಂತಹ ಅವಮಾನ ಎದುರಿಸಿದ್ದೆ. ಥೇಟ್​ ಇದೇ ರೀತಿಯದ್ದು ಅಲ್ಲ. ಆದರೆ 'ಕೇರಳ ಸ್ಟೋರಿ' ಸಿನಿಮಾದಲ್ಲಿ ತೋರಿಸಿದಂತೆ ಅದು ಲವ್ ಜಿಹಾದ್ ರೀತಿಯದ್ದಾಗಿತ್ತು. ನಾನು ಖಂಡಿತವಾಗಿಯೂ ಆ ಕಥೆಯನ್ನು ಶೀಘ್ರದಲ್ಲೇ ಹಂಚಿಕೊಳ್ಳುತ್ತೇನೆ' ಎಂದು ಬರೆದುಕೊಂಡಿದ್ದಾರೆ. ನಟಿಯ ಈ ಹೇಳಿಕೆ ಸಕತ್​ ಸದ್ದು ಮಾಡುತ್ತಿದೆ. ದಿ ಕೇರಳ ಸ್ಟೋರಿ ಚಿತ್ರ ಬಿಡುಗಡೆಯಾದ ಬಳಿಕ, ಈ ಚಿತ್ರದಲ್ಲಿ ತೋರಿಸಿರುವುದೆಲ್ಲಾ ಸುಳ್ಳು ಎಂದು ಒಂದು ವರ್ಗ ವಾದಿಸಿತ್ತು. ಅದರ ಮಧ್ಯೆಯೇ ತಾವು ಅನುಭವಿಸಿದ್ದ ಕರಾಳ ದಿನಗಳ ಬಗ್ಗೆ ಮಾಧ್ಯಮಗಳ ಮುಂದೆ ಬಂದು ಕೆಲ ಮಹಿಳೆಯರು ಹೇಳಿದ್ದರು. ತಮ್ಮ ಬ್ರೇನ್​ವಾಷ್​ ಮಾಡಿ ಹೇಗೆ ಲವ್​ ಜಿಹಾದ್​ಗೆ ತಮ್ಮನ್ನು ಒಳಪಡಿಸಲಾಗಿತ್ತು, ನಂತರ ಹೇಗೆಲ್ಲಾ ದೌರ್ಜನ್ಯ ಎಸಗಲಾಗಿತ್ತು ಎಂಬ ಬಗ್ಗೆ ಮಾತನಾಡಿದ್ದಾರೆ. ಇದರ ಆತಂಕದ ನಡುವೆಯೇ ಇದೀಗ ಖುದ್ದು ವಿದ್ಯಾರ್ಥಿನಿಯರಿಂದಲೇ ನಡೆದಿರುವ ಈ ಘಟನೆ ಹಾಗೂ ನಟಿ ತಮಗಾಗಿರುವ ಅನುಭವ ಹಂಚಿಕೊಂಡಿದ್ದರಿಂದ ಜನರು ಭಯಭೀತರಾಗುವಂತಾಗಿದೆ. 

ಹಲವರ ನಿದ್ದೆಗೆಡಿಸಲು 'ಕೇರಳ ಸ್ಟೋರಿ' ತಂಡದ ಮತ್ತೊಂದು ಸತ್ಯಾಧಾರಿತ ಸಿನಿಮಾ ರೆಡಿ!

ನಟಿ ತಮ್ಮ ಅನುಭವ ಶೇರ್​ (Share) ಮಾಡಿದ ಮೇಲೆ ಅದಕ್ಕೆ ಥಹರೇವಾರಿ ಕಮೆಂಟ್​ಗಳು ಬರುತ್ತಿವೆ. ಹೀಗೆ ಲವ್​ ಜಿಹಾದ್​ ಮಾಡಿದವರಿಗೆ ತಲಾ ಐದು ಲಕ್ಷ ರೂಪಾಯಿ ಬಹುಮಾನ ನೀಡಲಾಗುತ್ತದೆ. ಅದಕ್ಕಾಗಿಯೇ ಇಂಥ ಕೃತ್ಯಗಳು ನಡೆಯುತ್ತಿವೆ ಎಂದು ಕೆಲ ನೆಟ್ಟಿಗರು ಹೇಳಿದ್ದಾರೆ. ಇನ್ನು ಕೆಲವರು ಇವೆಲ್ಲಾ ಕಟ್ಟುಕಥೆ, ವಿನಾಕಾರಣ ಸುಳ್ಳು ಕಥೆ ಹೆಣೆಯುತ್ತಿದ್ದೀರಿ ಎಂದೂ ಬರೆದಿದ್ದಾರೆ. ಹೀಗಾದರೆ ನಮ್ಮ ಹೆಣ್ಣುಮಕ್ಕಳಿಗೆ ಎಲ್ಲಿ ರಕ್ಷಣೆ ಎಂದು ಕೆಲವರು ಪ್ರಶ್ನಿಸಿದರೆ, ಕಾಲೇಜಿಗೆ ಕಳುಹಿಸಲು ನಮಗೆ ಭಯವಾಗುತ್ತಿದೆ ಎನ್ನುತ್ತಿದ್ದಾರೆ ಇನ್ನು ಕೆಲವರು. 

ಅಂದಹಾಗೆ ನಟಿ ಅನಿತಾ ಭಟ್​, 'ಸೈಕೊ' (Psycho) ಸಿನಿಮಾ ಮೂಲಕ 2008ರಲ್ಲಿ ಸ್ಯಾಂಡಲ್‌ವುಡ್ ಪ್ರವೇಶಿಸಿದರು. ಬಳಿಕ 15ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮ್ಮದೇ ಅನಿತಾ ಭಟ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ 'ಇಂದಿರಾ' ಚಿತ್ರವನ್ನು ನಿರ್ಮಿಸಿದ್ದಾರೆ. ಟ್ವಿಟರ್​ನಲ್ಲಿ ಸಕತ್​ ಆ್ಯಕ್ಟೀವ್​ ಅಗಿರುವ ನಟಿ, ಧರ್ಮದ ಕುರಿತಾದ ಸಾಕಷ್ಟು ವಿಷಯಗಳನ್ನುಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ಇದಕ್ಕೆ ಪರ-ವಿರೋಧದ ಚರ್ಚೆಯೂ ನಡೆಯುತ್ತದೆ. ಇದೀಗ ಅವರು ಹಾಕಿರುವ ಈ ಟ್ವೀಟ್​ ಸಕತ್​ ಸದ್ದು ಮಾಡುತ್ತಿದೆ. 

Sara Ali Khan: ಅಮರನಾಥ ಯಾತ್ರೆಯಲ್ಲಿ ಹರ್​ ಹರ್​ ಮಹಾದೇವ್ ಎಂದ ಸೈಫ್​ ಪುತ್ರಿ; ಧರ್ಮದ ಕುರಿತು ಚರ್ಚೆ ಶುರು!

Scroll to load tweet…