ಮುಂಬೈ (ಆ. 27): ನಟ ಸಂಜಯ್ ದತ್ ರಾಜಕೀಯ ಪ್ರವೇಶಿಸಲು ಸಜ್ಜಾಗಿದ್ದಾರೆ. ಸೆ.25 ರಂದು ರಾಷ್ಟ್ರೀಯ ಸಮಾಜ್ ಪ್ರಕಾಶ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಪಕ್ಷದ ಸ್ಥಾಪಕ ಮಹಾದೇವ್ ಜಂಕರ್ ಹೇಳಿರುವ ಹೇಳಿಕೆಗೆ ಸಂಜಯ್ ದತ್ ಪ್ರತಿಕ್ರಿಯೆ ನೀಡಿದ್ದಾರೆ.

ಬಾಲಿವುಡ್ ನಟ ಸಂಜಯ್ ದತ್‌ ರಾಜಕೀಯಕ್ಕೆ!

" ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರುತ್ತಿಲ್ಲ. ಸೇರುವ ಆಲೋಚನೆಯೂ ಇಲ್ಲ. ಜಂಕರ್ ನನ್ನ ಆತ್ಮೀಯ ಸ್ನೇಹಿತ. ಅವರ ಮುಂದಿನ ರಾಜಕೀಯ ಭವಿಷ್ಯ ಚೆನ್ನಾಗಿರಲಿ ಎಂದು ಹಾರೈಸುತ್ತೇನೆ" ಎಂದು ಸಂಜಯ್ ದತ್ ಅಧಿಕೃತವಾಗಿ ತಿಳಿಸಿದ್ದಾರೆ. 

ಸಂಜಯ್ ದತ್ತ್ ತಂದೆ ಸುನೀಲ್ ದತ್ ಕೂಡಾ ಚಿತ್ರರಂಗದ ಜೊತೆ ರಾಜಕೀಯ ರಂಗದಲ್ಲೂ ಅದೃಷ್ಟ ಪರೀಕ್ಷಿಸಿ ಯಶಸ್ವಿಯಾದವರು. ಸಂಸದರಾಗಿ, ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಸಂಜಯ್ ದತ್ ಸಹೋದರಿ ಪ್ರಿಯಾ ದತ್ ಕೂಡಾ ಮುಂಬೈಯಿಂದ ಸಂಸದರಾಗಿದ್ದರು.