ಮುಂಬೈ[ಆ.26]: ನಟ ಸಂಜಯ್ ದತ್ ರಾಜಕೀಯ ಪ್ರವೇಶಿಸಲು ಸಜ್ಜಾಗಿದ್ದಾರೆ. ಸೆ.25ರಂದು ರಾಷ್ಟ್ರೀಯ ಸಮಾಜ್ ಪ್ರಕಾಶ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಪಕ್ಷದ ಸ್ಥಾಪಕ ಮಹಾದೇವ್ ಜಂಕರ್ ಹೇಳಿದ್ದಾರೆ.

ಕೆಜಿಎಫ್‌ 2: ಮೈಸೂರಿಗೆ ‘ಖಳನಾಯಕ್’; ಹೊಟೇಲ್‌ಗೆ ಬಿಗಿ ಭದ್ರತೆ

ಆರ್‌ಎಸ್‌ಪಿಯು ಮಹಾರಾಷ್ಟ್ರದಲ್ಲಿ ಆಡಳಿತರೂಢ ಬಿಜೆಪಿಯ ಮಿತ್ರಪಕ್ಷವಾಗಿದೆ. 2009ರಲ್ಲಿ ಸಮಾಜವಾದಿ ಪಕ್ಷದಿಂದ ಲೋಕಸಭೆಯ ಚುನಾವಣೆಯಲ್ಲಿ ಸ್ಪರ್ಧಿಸಲು ದತ್ ಬಯಸಿದ್ದರು. ಆದರೆ, ಶಸ್ತ್ರಾಸ್ತ್ರ ಕಾಯ್ದೆ ಅಡಿ ನಾಮಪತ್ರ ಅಸಿಂಧುಗೊಂಡಿತ್ತು.

ಸಂಜಯ್ ದತ್ತ್ ತಂದೆ ಸುನೀಲ್ ದತ್ ಕೂಡಾ ಚಿತ್ರರಂಗದ ಜೊತೆ ರಾಜಕೀಯ ರಂಗದಲ್ಲೂ ಅದೃಷ್ಟ ಪರೀಕ್ಷಿಸಿ ಯಶಸ್ವಿಯಾದವರು. ಸಂಸದರಾಗಿ, ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಸಂಜಯ್ ದತ್ ಸಹೋದರಿ ಪ್ರಿಯಾ ದತ್ ಕೂಡಾ ಮುಂಬೈಯಿಂದ ಸಂಸದರಾಗಿದ್ದರು.