ಮುಂಬೈ[ಸೆ. 04]  ಒಂದು ಕಪ್ ಕಾಫಿ ಮತ್ತು ಕ್ಯಾಪೆಚಿನೋಗೆ ಕಪಿಲ್ ಶರ್ಮಾ ಶೋನ ಪ್ರಮುಖ ಕಲಾವಿದ ಕಿಕು ಶ್ರದ್ಧಾ ಬರೋಬ್ಬರಿ 78650 ರೂ. ನೀಡಿದ್ದಾರೆ. ಅರೇ ಇದೇನಿದು ಅಂದ್ರಾ ಇದು ಭಾರತದಲ್ಲಿ ಅಲ್ಲ. ರಜಾ ದಿನವನ್ನು ಬಾಲಿಯಲ್ಲಿ ಕಳೆಯುತ್ತಿರುವ ಹಾಸ್ಯ ಕಲಾವಿದ ಕಿಕು ಶ್ರದ್ಧಾ ತಮ್ಮ ಸೋಶಿಯಲ್ ಮ ಈಡಿಯಾ ಮುಖೇನ ಬಹಳ ಮಜವಾದ ಒಂದು ವಿಚಾರ ಹಂಚಿಕೊಂಡಿದ್ದಾರೆ.

ದರ್ಶನ್ ರಾಬರ್ಟ್‌ಗೆ ಒಲಿದ ಕನ್ನಡತಿ

ನಾನು ಈ ಬಿಲ್  ಹಂಚಿಕೊಳ್ಳುತ್ತಿದ್ದೇನೆ.. ಆದರೆ ದೂರು ಕೊಡಲು ಹೋಗುವುದಿಲ್ಲ ಎಂದು ಕಿಕು ಹೇಳಿದ್ದಾರೆ. ಜತೆಗೆ ಅದಕ್ಕೆ ಕಾರಣವನ್ನು ನೀಡಿದ್ದಾರೆ. ಇಂಡೋನೇಶೀಯಾದ ರೂಪಾಯಿಗಳಲ್ಲಿ  78650 ಆಗಿದೆ. ಇದನ್ನು ಭಾರತದ ರೂಪಾಯಿಗಳಲ್ಲಿ ಲೆಕ್ಕ  ಹಾಕಿದರೆ ಒಂದು 400 ರೂ ಆಸುಪಾಸಿನಲ್ಲಿ ಬಂದು ನಿಲ್ಲಬಹುದು. 

ಕೆಲವು ತಿಂಗಳುಗಳಹಿಂದೆ ನಟ ರಾಹುಲ್ ಬಾಸ್ ಪಂಚತಾರಾ ಹೊಟೇಲ್ ವೊಂದರಲ್ಲಿ 2 ಬಾಳೆಹಣ್ಣಿಗೆ 442 ರೂ. ನೀಡಿದ್ದು ಸುದ್ದಿಯಾಗಿತ್ತು. ಆದರೆ ರಾಹುಲ್ ಪ್ರಕರಣ ಭಾರತದ್ದು..ಇದು ಬಾಲಿಯದ್ದು..