ನಟಿ ಸಿಂಧು ಲೋಕನಾಥ್ ತಮ್ಮ ಫೇಸ್‌ಬುಕ್ ವಾಲ್‌ನಲ್ಲಿ ಒಂದಷ್ಟು ಫೋಟೋಸ್ ಪೋಸ್ಟ್ ಮಾಡಿದ್ದಾರೆ. ಅದು ಮಾಧ್ಯಮದವರಿಗೆ ಎಂದು ವಿಶೇಷವಾಗಿ ಹೇಳಿದ್ದಾರೆ.  ಈ ಫೋಟೋಗಳು ಮಾಧ್ಯಮದವರಿಗಾಗಿ. ನನಗೆ ಹುಷಾರಿಲ್ಲ ಎಂದು ಮಾಧ್ಯಮಗಳು ಹೇಳಿದ ಮೇಲೆ ತನಗೆ ಬಹಳಷ್ಟು ಜನ ಆರೋಗ್ಯ ವಿಚಾರಿಸಿ ಮೆಸೇಜ್ ಕಳುಹಿಸಿರುವುದಾಗಿ ಅವರು ಹೇಳಿದ್ದಾರೆ.

ಮಾಧ್ಯಮದವರೇ ನಿಮಗಾಗಿ ಕೆಲವು ಪ್ರಮುಖ ವಿಚಾರಗಳು ಎಂದು ಬರೆದಿರುವ ಅವರು, ನಾನು ಹೇರ್ ಕಟ್ ಮಾಡಿದರೆ ಅದರರ್ಥ ನಾನು ಹುಷಾರಿಲ್ಲ ಎಂದಲ್ಲ, ಹೇರ್ ಕಟ್ ಮಾಡಿದರೆ ನಾನು ಡಿಪ್ರೆಷನ್‌ನಲ್ಲಿದ್ದೇನೆಂದಲ್ಲ, ಹೇರ್ ಕಟ್ ಮಾಡಿಸಿದರೆ ಲಿಂಗ ಪಕ್ಷಪಾತಿ ಎಂದಲ್ಲ, ನಾನು ಹೊಸ ಸಟೈಲ್ ಟ್ರೈ ಮಾಡಿದೆ ಎಂದಷ್ಟೇ ಅರ್ಥ ಎಂದು ಬರೆದಿದ್ದಾರೆ.

ಕೊರೋನಾ ಭಯದಲ್ಲೂ ರೊಮ್ಯಾಂಟಿಕ್ ದೃಶ್ಯ ಮಾಡಲು ಸಿದ್ಧ: ರಚಿತಾ ರಾಮ್

ಬಹಳ ಬೇಗನೆ ಸೊಂಪಾಗಿ ಬೆಳೆಯುವ ನನ್ನ ತಲೆಗೂದಲನ್ನು ಕತ್ತರಿಸಿದ್ದಕ್ಕೇ ಇಷ್ಟೊಂದು ಸುದ್ದಿ ಮಾಡಿರುವುದು ನಿಜಕ್ಕೂ ಹಾಸ್ಯಾಸ್ಪದ. ನಿಮಗೆ ನನ್ನ ಪೋಸ್ಟ್ ಅರ್ಥವಾಗಿರದಿದ್ದರೆ ಇನ್ನೂ 10 ಸಲ ಓದಿ. ಆಗಲಾದರೂ ಅರ್ಥವಾಗನಹುದುದೇನೋ ಎಂದು ಹೇಳಿದ್ದಾರೆ.

ಕೆಲವರ ಫೋಟೋ ತೆಗೆದುಕೊಂಡು ಅವರು ಹುಷಾರಿಲ್ಲ, ಡಿಪ್ರೆಷನ್‌ನಲ್ಲಿದ್ದಾರೆ ಎನ್ನುತ್ತಾ ಅವರ ವೈಯಕ್ತಿಕ ವಿಚಾರ, ವೈವಾಹಿತ ಸಂಬಂಧಗಳನ್ನು ನೋಡಿ ನಿಮಗೆ ಬೇಕಾದಂತೆ ಬರೆದು ಸುದ್ದಿ ಮಾಡಿದರೆ ನಿಮಗೆ TRP ಹೆಚ್ಚಬಹುದು. ಆದರೆ ಅವರ ನಿಜ ಜೀವನದಲ್ಲಿ ಏನಾದರೂ ಕೆಟ್ಟದಾದರೆ ನೀವು ವೈಯಕ್ತಿಕವಾಗಿ ಹೊಣೆ ಹೊರುತ್ತೀರಾ..? ಎಂದು ಪ್ರಶ್ನಿಸಿದ್ದಾರೆ.

 

ಒಳ್ಳೆಯ ವಿಷಯ, ಸಿನಿಮಾ ಪ್ರಮೋಷನ್ ಮಾಡುವಾಗ ನಿಮಗೆ ನಿಮ್ಮ ಹೆಡ್‌ಗಳ ಅನುಮತಿ ಬೇಕು. ಆದರೆ ಈ ರೀತಿ ಅನತ್ಯ ಸುದ್ದಿಗಳನ್ನು ಮಾಡುವುದು ಫ್ರೀ ಆಫ್‌ ಕಾಸ್ಟ್ ಅಲ್ಲವೇ..

ಈ ಸಂಕಷ್ಟದ ಸಮಯದಲ್ಲಿ ಈ ರೀತಿ ಮಾಡುವುದನ್ನು ನಿಲ್ಲಿಸಿ. ಜನರನ್ನು ಅವರ ಬದುಕಿನ ಕೊನೆಯ ಹಂತಕ್ಕೆ ತಂದು ನಿಲ್ಲಿಸುವನ್ನು ನಿಲ್ಲಿಸಿ. ನಾನು ಇಷ್ಟಕ್ಕೇ ನಿಲ್ಲಿಸುತ್ತಿದ್ದೇನೆ. ನಿಮಗೆ ಬೇಕಾಬಿಟ್ಟಿ ಬರೆದುಹಾಕಬಹುದಾಗಿದ್ದರೆ, ನನಗೂ ಮಾತಾಡುವ ಸ್ವಾತಂತ್ರ್ಯವಿದೆ ಎಂದಿದ್ದಾರೆ. ನನ್ನ ಬಗ್ಗೆ ಕಾಳಜಿ ವಹಿಸಿ ನನ್ನ ಆರೋಗ್ಯ ವಿಚಾರಿಸಿದ ಎಲ್ಲರಿಗೂ ಥ್ಯಾಂಕ್ಯೂ.. ನಾನು ಚೆನ್ನಾಗಿದ್ದೇನೆ. ಎಂದು ಪೋಸ್ಟ್ ಮಾಡಿದ್ದಾರೆ.