ಮೈಸೂರಿನಲ್ಲಿ ಮೂರು ದಿನಗಳ ಕಾಲ ಛಾಯಾಚಿತ್ರ ಪ್ರದರ್ಶನವಿದ್ದು ದರ್ಶನ್ ಭೇಟಿ ಕೊಟ್ಟಿದ್ದಾರೆ. ದರ್ಶನ್ ತೆಗೆದ ವನ್ಯಜೀವಿಗಳ ಫೋಟೋವನ್ನು ಹರಾಜಿಗಿಡಲಾಗಿದೆ. ಒಂದು ಫೋಟೋಗೆ 2000 ರೂ ನಿಗದಿ ಮಾಡಲಾಗಿದೆ. 

ಮೈಸೂರು (ಮಾ.1): ಅರಮನೆ ನಗರಿಯಲ್ಲಿ ಮೂರು ದಿನಗಳ ಕಾಲ ಛಾಯಾಚಿತ್ರ ಪ್ರದರ್ಶನವಿದ್ದು ದರ್ಶನ್ ಭೇಟಿ ಕೊಟ್ಟಿದ್ದಾರೆ. ದರ್ಶನ್ ತೆಗೆದ ವನ್ಯಜೀವಿಗಳ ಫೋಟೋವನ್ನು ಹರಾಜಿಗಿಡಲಾಗಿದೆ. ಒಂದು ಫೋಟೋಗೆ 2000 ರೂ ನಿಗದಿ ಮಾಡಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಿಸ್ ಮಾಡದೇ ’ಯಜಮಾನ’ ನೋಡಲು ಇಲ್ಲಿದೆ ಕಾರಣ!

ವನ್ಯಜೀವಿ ಛಾಯಾಚಿತ್ರ ನನಗೆ ತಾಳ್ಮೆ ಕಲಿಸಿದೆ. ಇಲ್ಲಿ ಯಾವುದೇ ಹೀರೋಯಿಸಂ ಇಲ್ಲ. ಜನರು ವನ್ಯಜೀವಿ ಸಂರಕ್ಷಣೆಗೆ ನಿರಂತರ ಪ್ರಯತ್ನ ಮಾಡಬೇಕು. ತಮ್ಮ ಸುತ್ತಮುತ್ತಲ ಪರಿಸರ ಹಸಿರು ಮಾಡಿ ಎಂದು ಕರೆ ಕೊಟ್ಟಿದ್ದಾರೆ. 

ಸಿನಿಮಾ ಶೂಟಿಂಗ್ ಅಂದ್ರೆ ಎದ್ದು ಮುಖ ತೊಳೆದು ವರ್ಕೌಟ್ ಮಾಡಿಕೊಂಡು ಹೋಗುತ್ತೇನೆ. ಆದರೆ ಫೋಟೊಗ್ರಫಿ ಅಂದ್ರೆ ಹಲ್ಲು ಕೂಡ ಉಜ್ಜದೆ ತೆರಳುತ್ತೇನೆ ಎಂದು ವೈಲ್ಡ್ ಲೈಫ್ ಆಸಕ್ತಿ ಬಗ್ಗೆ ದರ್ಶನ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 

ಈ ಫೋಟೋಗ್ರಫಿಯಿಂದ ಬಂದ ಹಣವನ್ನು ವನ್ಯ ಜೀವಿಗಳ ಸಂರಕ್ಷಣೆಗೆ ಬಳಸುವುದಾಗಿ ದರ್ಶನ್ ಹೇಳಿದ್ದಾರೆ. 

"