ಮಿಸ್ ಮಾಡದೇ ’ಯಜಮಾನ’ ನೋಡಲು ಇಲ್ಲಿದೆ ಕಾರಣ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರದ ಬಗ್ಗೆ ಇರುವ ಕುತೂಹಲಕ್ಕೆ ತೆರೆ ಬಿದ್ದಿದೆ. ಇಂದು ಯಜಮಾನ ಚಿತ್ರ ಬಿಡುಗಡೆಯಾಗಿದ್ದು ಸಿಕ್ಕಾಪಟ್ಟೆ ರೆಸ್ಪಾನ್ಸ್ ಸಿಕ್ಕಿದೆ.  ಹೇಗಿದೆ ’ಯಜಮಾನ’? ಇಲ್ಲಿದೆ ಚಿತ್ರ ವಿಮರ್ಶೆ. 
 

Challenging star Darshan movie Yajamana film review here

ಬೆಂಗಳೂರು (ಮಾ. 01): ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರದ ಬಗ್ಗೆ ಇರುವ ಕುತೂಹಲಕ್ಕೆ ತೆರೆ ಬಿದ್ದಿದೆ. ಇಂದು ಯಜಮಾನ ಚಿತ್ರ ಬಿಡುಗಡೆಯಾಗಿದ್ದು ಸಿಕ್ಕಾಪಟ್ಟೆ ರೆಸ್ಪಾನ್ಸ್ ಸಿಕ್ಕಿದೆ. 

ಬೆಂಗಳೂರು ಚಿತ್ರೋತ್ಸವ: ಮೂಕಜ್ಜಿಯ ಕನಸು, ಕೆಜಿಎಫ್‌ಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ

ಯಜಮಾನದಲ್ಲಿ ದರ್ಶನ್ ಹಳ್ಳಿಯೊಂದರಲ್ಲಿ ಎಣ್ಣೆ ವ್ಯಾಪಾರಿಯಾಗಿ ಕೆಲಸ ಮಾಡುತ್ತಿರುತ್ತಾನೆ. ಅಲ್ಲಿಗೆ ಇನ್ನೊಬ್ಬ ಬ್ಯುಸಿನೆಸ್ ಮ್ಯಾನ್ ದರ್ಶನ್ ಹಳ್ಳಿಗೆ ಬಂದು ಅದನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಕಲಬೆರಕೆ ಎಣ್ಣೆ ತಯಾರಿಸಿ ಮಾರಾಟ ಮಾಡುತ್ತಿರುತ್ತಾನೆ. ಹಳ್ಳಿಯವರೆಲ್ಲಾ ಅವನ ಆಮೀಷಕ್ಕೆ ಒಳಗಾಗಿ ಬೆಂಬಲಿಸುತ್ತಾರೆ. ದರ್ಶನ್ ಮಾತ್ರ ಬೆಂಬಲಿಸುವುದಿಲ್ಲ. ಅವನಿಗೆ ಅವಮಾನ ಮಾಡುತ್ತಾನೆ. ಅಲ್ಲಿಂದಲೇ ಇಬ್ಬರಿಗೂ ಫೈಟಿಂಗ್ ಶುರುವಾಗುತ್ತಾನೆ. 

ನಟ ರಾಕೇಶ್ ಕುಟುಂಬಕ್ಕೆ ಶ್ರುತಿನಾಯ್ಡು ₹1 ಲಕ್ಷ ನೆರವು!

ಹಳ್ಳಿಯವರು ಬ್ಯುಸಿನೆಸ್ ಮ್ಯಾನ್ ಪರ ಇರುವುದರಿಂದ ಬ್ಯುಸಿನೆಸ್ ಲಾಸ್ ಆಗುತ್ತದೆ. ಬ್ಯುಸಿನೆಸ್ ಗಾಗಿ ಮುಂಬೈಗೆ ಬರುತ್ತಾನೆ. ನಂತರ ದೊಡ್ಡದಾಗಿ ಬೆಳೆಯುತ್ತಾನೆ. ಬ್ಯುಸಿನೆಸ್ ಮ್ಯಾನ್ ಕುತಂತ್ರವನ್ನು ಹೇಗೆ ಬಯಲಿಗೆಡುವುತ್ತಾನೆ ಎಂಬುದೇ ಟ್ವಿಸ್ಟ್! 

ಬಾಹುಬಲಿ ಎದುರು ಕೆಜಿಎಫ್ ಪರ ಬ್ಯಾಟಿಂಗ್ ಮಾಡಿದ ದರ್ಶನ್

ಟೀಸರ್ ನಲ್ಲಿ ಸಿಕ್ಕಾಪಟ್ಟೆ ಹೈಪ್ ಕೊಟ್ಟಿರುವ ನಂದಿ ಏನು ಎಂದು ತಿಳಿದುಕೊಳ್ಳಲು ಚಿತ್ರವನ್ನೇ ನೋಡಬೇಕು. 

ನಟಿ ರಶ್ಮಿಕಾ ಹಾಗೂ ತಾನ್ಯಾ ಹೋಪ್ ಅದ್ಭುತವಾಗಿ ನಟಿಸಿದ್ದಾರೆ. ರಶ್ಮಿಕಾ ಹಳ್ಳಿ ಹುಡುಗಿಯಾಗಿ ಮುದ್ಮುದ್ದಾಗಿ ಕಾಣಿಸಿದರೆ ತಾನ್ಯಾ ಹೋಪ್ ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದಾರೆ. ಬ್ಯುಸಿನೆಸ್ ಕುತಂತ್ರ ಬಯಲಿಗೆಳೆಯಲು ಸಹಾಯ ಮಾಡುತ್ತಾಳೆ. 

ಸಾಧು ಕೋಕಿಲಾ ಕಾಮಿಡಿ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತದೆ. ಸಿನಿಮಾ ಎಲ್ಲಿಯೂ ಸೀರಿಯಸ್ ಆಗಿ ಹೋಗುವುದಿಲ್ಲ. ಪ್ರೇಕ್ಷಕನಿಗೆ ಎಲ್ಲಿಯೂ ಬೋರ್ ಹೊಡೆಸುವುದಿಲ್ಲ.  ’ಬಸಣ್ಣಿ ಬಾ... ಹಾಡಿಗೆ ಪ್ರೇಕ್ಷಕ ಫುಲ್ ಫಿದಾ! ಎಲ್ಲರ ಬಾಯಲ್ಲೂ ಅದೇ ಹಾಡು..  ಬಸಣ್ಣಿ ಬಾ ... ಬಾ ಅಂತಿದಾನೆ ಪ್ರೇಕ್ಷಕ.  ಯಜಮಾನ ಫ್ಯಾಮಿಲಿ ಎಂಟರ್ಟೇನ್ಮೆಂಟ್ ಚಿತ್ರ ಎನ್ನುವುದರಲ್ಲಿ ಅನುಮಾನವೇ ಇಲ್ಲ.  

Latest Videos
Follow Us:
Download App:
  • android
  • ios