ಚಿತ್ರದುರ್ಗದ ಜೆ.ಜೆ.ಹಟ್ಟಿ ಅಪ್ಪು ಬಳಗದಿಂದ ವಿಶಿಷ್ಟ ಕ್ರಿಕೆಟ್ ಪಂದ್ಯಾವಳಿ
ಅಭಿಮಾನಿಗಳ ಪಾಲಿನ ದೇವರು ಪುನೀತ್ ರಾಜ್‌ಕುಮಾರ್ ಅವರ ಮೊದಲನೇ ವರ್ಷದ ಪುಣ್ಯ ಸ್ಮರಣೆ ಪ್ರಯುಕ್ತ ಜೆ.ಜೆ ಹಟ್ಟಿ ಬಳಗದ ವತಿಯಿಂದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಆಟ ಶುರುವಾಗುವುದಕ್ಕೂ ಮುನ್ನ ಪವರ್ ಸ್ಟಾರ್‌ಗೆ ನಮನ ಸಲ್ಲಿಸುವ ಮೂಲಕ ಅದ್ದೂರಿ ಚಾಲನೆ ದೊರಕಿತು.
ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ (ಅ.29): ಅಭಿಮಾನಿಗಳ ಪಾಲಿನ ದೇವರು ಪುನೀತ್ ರಾಜ್‌ಕುಮಾರ್ ಅವರ ಮೊದಲನೇ ವರ್ಷದ ಪುಣ್ಯ ಸ್ಮರಣೆ ಪ್ರಯುಕ್ತ ಜೆ.ಜೆ ಹಟ್ಟಿ ಬಳಗದ ವತಿಯಿಂದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಆಟ ಶುರುವಾಗುವುದಕ್ಕೂ ಮುನ್ನ ಪವರ್ ಸ್ಟಾರ್‌ಗೆ ನಮನ ಸಲ್ಲಿಸುವ ಮೂಲಕ ಅದ್ದೂರಿ ಚಾಲನೆ ದೊರಕಿತು. ಅಷ್ಟಕ್ಕೂ ಆ ಕ್ರೀಡಾಂಗಣದಲ್ಲಿ ಏನೆಲ್ಲ ವಿಶೇಷತೆ ಇತ್ತು ಅನ್ನೋದ್ರ ಒಂದು ಝಲಕ್ ಇಲ್ಲಿದೆ ನೋಡಿ. ಹೀಗೆ ನಗುವಿನ ಒಡೆಯ ಪುನೀತ್ ರಾಜ್ ಕುಮಾರ್ ಅವರ ಬೃಹತ್ ಕಟೌಟ್ ನಿಲ್ಲಿಸಿ ಪೂಜೆ ಸಲ್ಲಿಸುವ ಮೂಲಕ ಭಕ್ತ ಪೂರ್ವಕ ನಮನ ಸಲ್ಲಿಸುತ್ತಲೇ ಕಣ್ಣೀರು ಹಾಕ್ತಿರೋ ಅಭಿಮಾನಿಗಳು.
ಮತ್ತೊಂದೆಡೆ ಕ್ರೀಡಾಂಗಣದ ಸುತ್ತ ಎಲ್ಲಿ ಕಣ್ಣಾಡಿಸಿದ್ರು ಅಪ್ಪು ನಟಿಸಿರುವ ಸಿನಿಮಾಗಳ ಕಟೌಟ್‌ಗಳ ಸುರಿಮಳೆ. ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಚಿತ್ರದುರ್ಗ. ಹೌದು! ಇಂದು ಕರುನಾಡಿನ ಪಾಲಿನ ನಗುವಿನ ಒಡೆಯ, ದೊಡ್ಮನೆ ಯುವರಾಜ ಪುನೀತ್ ನಮ್ಮನ್ನು ಅಗಲಿ ಇಂದಿಗೆ ಒಂದು ವರ್ಷ ಕಳೆಯಿತು. ಅವರ ಸ್ಮರಣಾರ್ಥ ಚಿತ್ರದುರ್ಗದ ಜೆ.ಜೆ ಹಟ್ಟಿ ಅಪ್ಪು ಅಭಿಮಾನಿಗಳ ಬಳಗದಿಂದ ವಿಶೇಷವಾಗಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ನಗರದ ಹಳೆ ಮಾದ್ಯಮಿಕ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಮಾಜಿ MLC ರಘು ಅಚಾರ್ ಮುಖ್ಯ ಅತಿಥಿಯಾಗಿ ಆಗಮಿಸಿ ಅಪ್ಪು ಪೋಟೋಗೆ ಪೂಜೆ ಸಲ್ಲಿಸುವ ಮೂಲಕ ಅದ್ದೂರಿ ಚಾಲನೆ ನೀಡಿದರು.
Chitradurga: ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಪರಮಶಿವಯ್ಯ ವಿರುದ್ದ ಜಿತೇಂದ್ರ ಕಿಡಿ
ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ಅವರು ಕರುನಾಡಿನ ನಗುವಿನ ಒಡೆಯನ ಅಗಲಿಕೆ ಅಭಿಮಾನಿಗಳಲ್ಲಿ ಇನ್ನೂ ಅಳಿಸಿಲ್ಲ ಅವರು ಎಂದಿಗೂ ಅಜರಾಮರ ಎಂದರು. ಇನ್ನೂ ಜೆ.ಜೆ ಹಟ್ಟಿ ಪವರ್ ಸ್ಟಾರ್ ಅಪ್ಪು ಯುವಕರ ಬಳಗದಿಂದ ವಿಶೇಷವಾಗಿ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಿದ್ದಾರೆ. ಕ್ರೀಡಾಂಗಣದ ತುಂಬೆಲ್ಲಾ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಭಾವಚಿತ್ರದ ಕಟೌಟ್ ಗಳನ್ನು ನಿರ್ಮಿಸಿ ಎಲ್ಲಿ ನೋಡಿದ್ರು ಅಪ್ಪುನೇ ಕಂಗೊಳಿಸುವ ರೀತಿ ಆಯೋಜಿಸಲಾಗಿದೆ. ಅದೇ ರೀತಿ ಕಾರ್ಯಕ್ರಮದ ಸ್ಟೇಜ್ ಮುಂಭಾಗ ಪುನೀತ್ ಬೃಹತ್ ಕಟೌಟ್ ನಿಲ್ಲಿಸಿ ಅವರಿಗಾಗಿಯೇ ಸ್ಮರಣೆ ಸಲ್ಲಿಸಲಾಯಿತು. ಇನ್ನೂ ಅಪ್ಪು ಪೋಟೋಗೆ ಪೂಜೆ ಸಲ್ಲಿಸುವ ವೇಳೆ ಕೆಲ ಅಭಿಮಾನಿಗಳು ಕಣ್ಣೀರು ಹಾಕುತ್ತಾ ತಮ್ಮ ದೇವರನ್ನು ಸ್ಮರಿಸಿದರು.
Gandhadagudi: ಚಿತ್ರದುರ್ಗದಲ್ಲಿ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್: ಪರದೆ ಮೇಲೆ ಅಪ್ಪು ನೋಡಿ ಅಭಿಮಾನಿಗಳ ಕಣ್ಣೀರು
ಅಪ್ಪು ನಮ್ಮನ್ನು ದೈಹಿಕವಾಗಿವಾಗಿ ಬಿಟ್ಟು ಹೋಗಿರಬಹುದು ಆದ್ರೆ ಸೂರ್ಯ ಚಂದ್ರ ಇರುವವರೆಗೂ ಮಾನಸಿಕವಾಗಿ ಅಪ್ಪು ನಮ್ಮಲ್ಲಿಯೇ ಇರ್ತಾರೆ ಎಂದರು. ಇನ್ನೂ ಈ ರೀತಿಯ ಟೂರ್ನಮೆಂಟ್ ಗಳನ್ನು ಯಾರು ಆಯೋಜನೆ ಮಾಡಿರಲಿಲ್ಲ ಜೆ.ಜೆ ಹಟ್ಟಿ ಅಭಿಮಾನಿಗಳ ಬಳಗಕ್ಕೆ ಸಲಾಂ ಎಂದ್ರು ಕ್ರೀಡಾಭಿಮಾನಿಗಳು. ಅದೇನೆ ಇರ್ಲಿ ಅಪ್ಪು ಅಗಲಿ ಒಂದು ವರ್ಷ ಕಳೆದ್ರು ಕೂಡ ಅವರ ಮೇಲಿನ ಪ್ರೀತಿ ಅಭಿಮಾನ ಮಾತ್ರ ಯಾವ ಫ್ಯಾನ್ಸ್ ನಲ್ಲಿಯೂ ಕಡಿಮೆ ಆಗಿಲ್ಲ ಅಂದ್ರೆ ತಪ್ಪಾಗಲಿಕ್ಕಿಲ್ಲ. ಹಾಗಾಗಿಯೇ ಒಂದಲ್ಲ ಒಂದು ರೀತಿಯಲ್ಲಿ ಕ್ರೀಡಾಭಿಮಾನಿಗಳು ಅಪ್ಪು ಹೆಸರಿನಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಸುವ ಮೂಲಕ ಪುನೀತ್ ಅವರನ್ನು ನೆನಪು ಮಾಡಿಕೊಳ್ತಿದ್ದಾರೆ ಇದು ಹೀಗೆ ಸದಾ ಮುಂದುವರೆಯಲಿ ಎಂಬುದು ಪ್ರತಿಯೊಬ್ಬ ಅಪ್ಪು ಅಭಿಮಾನಿಯ ಆಶಯ.