ಮುಜಫ್ಫರ್‌ನಗರ (ಜು.21): ಕಳ್ಳರು ಚಾಪೆ ಕೆಳಗೆ ನುಸುಳಿದರೆ, ಪೊಲೀಸರು ರಂಗೋಲಿ ಕೆಳಗೇ ನುಸುಳುತ್ತಾರೆ ಎಂಬ ಮಾತಿದೆ. ಆದರೆ, ಇಲ್ಲಿ ಕಳ್ಳರು ಪೊಲೀಸರಿಗೇ ಚಳ್ಳೇಹಣ್ಣು ತಿನ್ನಿಸಿದ್ದಾರೆ. ಉತ್ತರ ಪ್ರದೇಶದ ಮುಜಫ್ಫರ್‌ನಗರದ ತಿತಾವಿ ಪೊಲೀಸ್‌ ಠಾಣೆಯಲ್ಲಿ ಪೊಲೀಸರು 2017 ಮತ್ತು 2018ರಲ್ಲಿ 486 ಬಾಕ್ಸ್‌ ಮದ್ಯವನ್ನು ವಶಪಡಿಸಿಕೊಂಡಿದ್ದರು.

ಆದರೆ, ಭದ್ರ ಕೋಣೆಯಲ್ಲಿ ಇಟ್ಟಿದ್ದ ಮದ್ಯದ ಬಾಟಲಿಗಳು ಬುಧವಾರದಂದು ಕಳವಾಗಿವೆ. ಪೊಲೀಸ್‌ ಠಾಣೆಯಲ್ಲಿ ಇರುವುದರಿಂದ ಯಾರೂ ಅವುಗಳನ್ನು ಮುಟ್ಟುವುದಿಲ್ಲ ಎಂದು ಮೈ ಮರೆತಿದ್ದ ಪೊಲೀಸರು ಈಗ ಮೈ ಚಳಿ ಬಿಟ್ಟು ಕಳ್ಳರಿಗಾಗಿ ಹುಡುಕಾಟ ನಡೆಸಿದ್ದಾರೆ.

ಕುಡಿತವೊಂದು ರೋಗಿ, ಆದರೆ ಮದ್ದಿದೆ

ಅಂದಹಾಗೆ ಕಳೆದ ವರ್ಷ ಇದೇ ಪೊಲೀಸ್‌ ಠಾಣೆಯಲ್ಲಿ ಪಿಸ್ತೂಲ್‌ವೊಂದು ಕಳವಾಗಿತ್ತು. ಅಷ್ಟಾದರೂ ಇಲ್ಲಿನ ಪೊಲೀಸರು ಬುದ್ಧಿ ಕಲಿತಿಲ್ಲ.

ಮಾದಕ ವಸ್ತುಗಳ ಸ್ವರ್ಗವಾಗುತ್ತಿದೆಯೇ ಕರುನಾಡ?