"ನನ್ನ ಹುಟ್ಟುಹಬ್ಬ ಎಂದರೆ ಅದು ನನ್ನ 'ಟೋಟಲ್ ಫ್ಯಾಮಿಲಿ ಮತ್ತು ಫ್ರಂಡ್ಸ್. ನನ್ನ ಕುಟುಂಬ ಹಾಗೂ ಸ್ನೇಹಿತರ ಜೊತೆ ಕುಳಿತು ಸಂತೋಷವಾಗಿ ಊಟ ಮಾಡಬೇಕು"  ಇದು ಸನ್ನಿ ಲಿಯೋನ್ ಹೇಳಿದ ಮಾತುಗಳು. ಸೋಶಿಯಲ್ ಮೀಡಿಯಾ ಸಹ ಸನ್ನಿ ಜನ್ಮ ದಿನವನ್ನು ಸಖತ್ ಆಗಿಯೇ ಸೆಲಬರೇಟ್ ಮಾಡಿದೆ.

ಕೆನಡಾ ಮೂಲದ ಭಾರತೀಯೆ ಇಂದು ಭಾರತದವಳೆ ಆಗಿದ್ದಾಳೆ. ನಟಿ, ನೀಲಿ ಚಿತ್ರದ ನಟಿ, ಬಾಲಿವುಡ್ ತಾರೆ.. ಎಲ್ಲಕ್ಕಿಂತ  ಮಿಗಿಲಾಗಿ ಸನ್ನಿ ಒಬ್ಬಳು ಮಾನವೀಯ ಮೌಲ್ಯ ಇರುವ ವ್ಯಕ್ತಿ. ಅದೆಷ್ಟೋ ಅನಾಥ ಮಕ್ಕಳನ್ನು ಷೋಷಿಸುವ ಕೆಲಸ ಮಾಡುತ್ತಿರುವ ನಟಿ.

ಸನ್ನಿ ಬಗ್ಗೆ  ಗೊತ್ತಿರದ 10 ಸಂಗತಿಗಳು

1.  ಸನ್ನಿ ಲಿಯೋನ್ 2001ರಲ್ಲಿ ಅಮೆರಿಕದ ಪೆಂಟ್‍ಹೌಸ್ ಮ್ಯಾಗಜೀನ್‍ನ ಪೆಂಟ್‍ಹೌಸ್ ಪೆಟ್ ಆಫ್ ದಿ ಮಂತ್ ಆಗಿದ್ರು. 2003ರಲ್ಲಿ ಪೆಂಟ್‍ಹೌಸ್ ಪೆಟ್ ಆಫ್ ದಿ ಇಯರ್ ಆಗಿದ್ದರು.

2. ಸನ್ನಿ ನಿಜವಾದ ಹೆಸರು ಕರಣ್ ಜೀತ್ ಕೌರ್... ಸನ್ನಿ ಜೀವನಾಧಾರಿತ ಸಾಕ್ಷ್ಯ ಚಿತ್ರ ಸಹ ಇದೇ ಹೆಸರಿನಲ್ಲಿ ತಯಾರಾಗಿದೆ.

3. ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಗೆ ಒಳಗಾದವರಲ್ಲಿ ಸನ್ನಿ ನಂಬರ್ 1.

4.  ಅಮೀರ್ ಖಾನ್ ಅವರ ಕಟ್ಟಾ ಅಭಿಮಾನಿಯಾಗಿರುವ ಆಕೆ ಸೋಶಿಯಲ್ ಮೀಡಿಯಾದಲ್ಲಿ ಅವರನ್ನು ಫಾಲೋ ಮಾಡುತ್ತಿದ್ದಾರೆ.

ಸ್ವಿಮ್ ಮಾಡಿ ತಂಪಾಗಲು ಹೊರಟ ಸನ್ನಿಯ ಬಿಸಿ ಹೆಚ್ಚಿಸುವ ಪೋಸ್!

5. ಜೀರಲೆ ಅಂದರೆ ಸನ್ನಿ ಲಿಯೋನ್ ಗೆ ಸಿಕ್ಕಾಪಟ್ಟೆ ಭಯ

6.  ಲಸ್ಟ್ ಹೆಸರಿನ ಸುಗಂಧ ದೃವ್ಯ ಕಂಪನಿಯ ಒಡತಿಯೂ ಹೌದು.

7 .  ಅಡಲ್ಟ್ ಸ್ಟಾರ್ ಆಗುವ ಮುನ್ನ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು.

8. ದೆಹಲಿಯ ಬೀದಿ ಬದಿ ತಿಂಡಿಗಳು ಸನ್ನಿಗೆ ಬಹಳ ಇಷ್ಟ

9. 300ಕ್ಕೂ ಅಧಿಕ ಅನಾಥ ಮಕ್ಕಳಿರುವ ಮುಂಬೈನ ಶಾಲೆಯೊಂದರ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಕ್ಯಾನ್ಸರ್ ನಿವಾರಣೆಗೆ ಹಣ ಸಹಾಯ ಮಾಡುತ್ತಲೇ ಬಂದಿದ್ದಾರೆ.

10. ಸನ್ನಿ ಉತ್ತಮ ಫುಟ್ ಬಾಲ್ ಆಟಗಾರ್ತಿ. ಕ್ಯಾಲಿಫೋರ್ನಿಯಾದ ಪ್ರಮುಖ ಲೀಗ್ ನಲ್ಲಿಯೂ ಪಾಲ್ಗೊಂಡಿದ್ದರು.