ಮೈಸೂರಿನಲ್ಲಿ ಆನೆ ಮಾನವ ಸಂಘರ್ಷಕ್ಕೆ ಮಹಿಳೆ ಬಲಿ

  • ಆನೆ ಹಾವಳಿಗೆ ಶಾಶ್ವತ ಪರಿಹಾರಕ್ಕೆ ಗ್ರಾಮಸ್ಥರ ಆಗ್ರಹ
  • ಹಸು ಮೇಯಿಸುತ್ತಿದ್ದ ಮಹಿಳೆ, ಹಸು ಆನೆ ದಾಳಿಗೆ ಬಲಿ
  • ಹುಣಸೂರು ತಾಲೂಕಿನ ಅದ್ವಾಳ ಗ್ರಾಮದ ಬಳಿ ಘಟನೆ
wild Elephant killed woman in Mysore akb

ಮಧು.ಎಂ.ಚಿನಕುರಳಿ
ಮೈಸೂರು : ಸಾಂಸ್ಕೃತಿಕ ರಾಜಧಾನಿ ಮೈಸೂರು (Mysore) ಜಿಲ್ಲೆಯಲ್ಲಿ ಆನೆ ಮಾನವ ಸಂಘರ್ಷದಲ್ಲಿ ಮಹಿಳೆಯ ಬಲಿಯಾಗಿದೆ. ಹುಣಸೂರು (Hunasur) ತಾಲೂಕಿನಲ್ಲಿ ಆನೆಗಳ ಉಪಟಳಕ್ಕೆ ರೈತರು ಹೈರಾಣಾಗಿದ್ದು, ರಕ್ಷಣೆಗೆ ಹಲವು ಕಸರತ್ತು ನಡೆಸಿದ್ದಾರೆ. ತಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕಳೆದರಡು ದಿನಗಳಿಂದ ಮೇವು ಅರಸಿ ಬರುತ್ತಿರುವ ಕಾಡಾನೆಗಳ (Wild Elephant) ಉಪಟಳ ಮೇರೆ ಮೀರಿದೆ. ಕಾಡಿನಿಂದ ನಾಡಿಗೆ ಬಂದಿರುವ ಎರಡು ಆನೆಗಳು ದಿಕ್ಕಾಪಾಲಾಗಿ ಗ್ರಾಮದಲ್ಲಿ ಓಡಾಡುತ್ತಿವೆ. ಒಂದೆಡೆ ಆನೆಯನ್ನು ಕಾಡಿಗೆ ವಾಪಸ್ಸು ಕಳುಹಿಸಲು ಅರಣ್ಯ‌ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದೆ. ಇದರ ಬೆನ್ನಲ್ಲೇ ಹುಣಸೂರು ತಾಲೂಕು ಹರಳಳ್ಳಿ ಗ್ರಾಮದ  ಪುಟ್ಟಲಕ್ಷ್ಮಮ್ಮ (55) (Puttalaksmamma) ಆನೆ ದಾಳಿಗೆ ಅಸುನೀಗಿದ್ದಾರೆ. ಹಸು ಮೇಯಿಸುವಾಗ ಆನೆ ದಾಳಿ ನಡೆದಿದ್ದು ಹುಣಸೂರು ತಾಲೂಕಿನ ಅದ್ವಾಳ ಗ್ರಾಮದ ಕೆರೆ ಬಳಿ ಹಸು ಮೇಯಿಸುತ್ತಿದ್ದಾಗ ದಾಳಿ ನಡೆದಿದೆ.

ಬೇಲಿ ದಾಟಲು ಮರಿಗೆ ಸಹಾಯ ಮಾಡುತ್ತಿರುವ ಆನೆಗಳ ಹಿಂಡು: ವಿಡಿಯೋ ವೈರಲ್

ಎರಡು ದಿನಗಳಿಂದಲೂ ಕಾಡಾನೆಗಳು ಹುಣಸೂರು ತಾಲೂಕಿನ ನಾಗರಹೊಳೆ ಅಭಯಾರಣ್ಯ (Nagarahole Wild Sanctuary) ಗಡಿ ಗ್ರಾಮಗಳಲ್ಲಿ ದಾಂದಲೆ ನಡೆಸಿದ್ದವು. ಕಾಡಿನಿಂದ ನಾಡಿಗೆ ದಾಳಿಯಿಟ್ಟಿದ್ದ ಆನೆಗಳನ್ನು ವಾಪಸ್ ಕಾಡಿಗೆ ಕಳುಹಿಸಲು ಕಾರ್ಯಾಚರಣೆ ನಡೆಸಿದ್ದರು. ಇಂದು ಮಧ್ಯಾಹ್ನ ಅದ್ವಾಳ ಗ್ರಾಮದ ಕೆರೆ ಬಳಿ ಕಾಣಿಸಿಕೊಂಡ ಆನೆಗಳನ್ನು ಗ್ರಾಮಸ್ಥರೇ ಸೇರಿ ದೂರ ಕಳುಹಿಸುವ ಪ್ರಯತ್ನ ಮಾಡಿದ್ದರು. ರಸ್ತೆಯಲ್ಲಿದ್ದ ಆನೆಗಳನ್ನು ಗ್ರಾಮದ ಯುವಕರು ಓಡಿಸುವ ಯತ್ನ ಮಾಡಿದ್ದರು. ಈ ವೇಳೆ ಕೆರೆಯ ಮತ್ತೊಂದು ದಡದಲ್ಲಿ ಪುಟ್ಟ ಲಕ್ಷ್ಮಮ್ಮ ಹಾಗೂ ಕಾಳೆಗೌಡ (Kalegowda) ಹಸು ಮೇಯಿಸುತ್ತಿದ್ದರು. ಗಾಬರಿಯಿಂದ ಓಡುತ್ತಿದ್ದ ಆನೆಯು ಲಕ್ಷ್ಮಮ್ಮ ಅವರನ್ನು ಸೊಂಡಲಿನಿಂದ ಜೋರಾಗಿ ನೂಕಿ ಮುಂದೆ ಸಾಗಿತ್ತು.

ಹಾಸನದ ಅನ್ನಭಾಗ್ಯ ಅಕ್ಕಿ ಮೇಲೆ ಆನೆ ಕಣ್ಣು!
 

ಆನೆಯು ಸೊಂಡಿಲಿನಿಂದ ಎಸೆದ ಪರಿಣಾಮ ಆಕೆಯ ಬಲಗಾಲು ಮತ್ತು ಕೈ ಮೂಳೆಗಳು ಮುರಿದಿತ್ತು. ಆನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಪುಟ್ಟ ಲಕ್ಷ್ಮಮ್ಮ ಅವರನ್ನು ಹುಣಸೂರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರು ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ದುರಾದೃಷ್ಟವಶಾತ್ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯದಲ್ಲೇ ಲಕ್ಷ್ಮಮ್ಮ ಅಸುನೀಗಿದ್ದಾರೆ.

ಮತ್ತೊಂದೆಡೆ ಕೆರೆಯ ಪಕ್ಕದಲ್ಲೇ ಹಸು ಮೇಯುತ್ತಿದ್ದ ಹರಳಹಳ್ಳಿ (Haralahalli) ಕಾಳೇಗೌಡ ರವರಿಗೆ ಸೇರಿದ ಇಲಾತಿ ಹಸುವು ಆನೆ ಒದ್ದ ರಭಸಕ್ಕೆ ಸ್ಥಳದಲ್ಲೇ ಅಸುನೀಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವೀರನಹೊಸಹಳ್ಳಿ ವಲಯರಣ್ಯಾಧಿಕಾರಿ ನಮನ್ ನಾರಾಯಣ ನಾಯಕ (Naman Narayan Nayaka) ಮತ್ತು ಸಿಬ್ಬಂದಿ ವರ್ಗ ಆನೆಗಳನ್ನು ಕಾಡಿಗೆ ಓಡಿಸಲು ಪ್ರಯತ್ನಿಸಿದಾಗ ಅಕ್ಕ ಪಕ್ಕದ ಗ್ರಾಮದ ಜನರು ಗುಂಪು ಹೆಚ್ಚಾಗಿದ್ದರಿಂದ ತೊಡಕಾಗಿದೆ. ರಾತ್ರಿ ತನಕ ಕಾದು ರಾತ್ರಿ ಕಾಡಿಗೆ ಆನೆಗಳನ್ನು ಓಡಿಸುತ್ತೇವೆ ಎಂದಿದ್ದಾರೆ.

ನಾಗರಹೊಳೆ ಅಭಯಾರಣ್ಯದ ಗಡಿಯಿಂದ ಆನೆಗಳು ನಾಡಿಗೆ ಬರದಂತೆ ರೈಲ್ವೆ ಬ್ಯಾರಿಕೇಡ್ ಹಾಕಲಾಗಿದೆ. ಆದರೆ ಆನೆಗಳು ರೈಲ್ವೆ ಬ್ಯಾರಿಕೇಡ್ ಅನ್ನು ದಾಟಿ  ಎಲ್ಲಿಂದ ಬರುತ್ತಿವೆ ಎಂಬುದು ಪ್ರಶ್ನೆಯಾಗಿದೆ. ಹೊಸಪೆಂಜಹಳ್ಳಿ, ಹಳೇಪೆಂಜಹಳ್ಳಿ, ಗುರುಪುರ ಈ ಭಾಗದಲ್ಲಿ ಆನೆಗಳು ಬಾಳೆ ತೆಂಗಿನ ಗಿಡಗಳನ್ನು ತಿಂದು ತುಳಿದು ಹಾಕಿವೆ. ಹಾಗಾಗಿ ತಕ್ಷಣ ರಾತ್ರಿ ಸಮಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳು ಆಚೆ ದಾಟದಂತೆ ಎಚ್ಚರ ವಹಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Latest Videos
Follow Us:
Download App:
  • android
  • ios