ಮೈಸೂರು(ಮಾ.06): ಸಾಂಸ್ಕೃತಿಕ ನಗರಿ ಮೈಸೂರು ಈ ಬಾರಿ ದೇಶದ ಮೂರನೇ ಸ್ವಚ್ಛ ನಗರ ಎಂಬ ಗೌರವಕ್ಕೆ ಪಾತ್ರವಾಗಿದೆ. ಈ ಹಿಂದೆ ಸತತ ಎರಡು ಬಾರಿ ದೇಶದ ನಂ.1 ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಮೈಸೂರು ಪಾತ್ರವಾಗಿತ್ತು.

 ಇಂದು ದೆಹಲಿಯಲ್ಲಿ ನಡೆದ ಸ್ವಚ್ಛ ಸರ್ವೇಕ್ಷಣೆ - 2019 ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ, ಇಂದೋರ್ ನಗರವನ್ನು ದೇಶದ ನಂ1 ಸ್ವಚ್ಛ ನಗರ ಎಂದು ಘೋಷಿಸಲಾಯಿತು.  ಇಂಧೋರ್ ಸತತ ಮೂರನೇ ಬಾರಿ ಮೊದಲ ಸ್ಥಾನ ಪಡೆದುಕೊಂಡಿದೆ.

ಇನ್ನು ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಅಂಬಿಕಾಪೂರ್ ಎರಡನೇ ಸ್ಥಾನದಲ್ಲಿದ್ದು, ಮೈಸೂರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. 2015 ಮತ್ತು 2016ರಲ್ಲಿ ಸತತ ಎರಡು ಬಾರಿ ಮೊದಲ ಸ್ಥಾನ ಪಡೆದಿದ್ದ ಮೈಸೂರು ಕಳೆದ ವರ್ಷ ಐದನೇ ಸ್ಥಾನಕ್ಕೆ ಕುಸಿದಿತ್ತು. 


ಅದರಂತೆ ಭಾರತದ ಟಾಪ್ 10 ಸ್ವಚ್ಛ ನಗರಿಗಳ ಪಟ್ಟಿಯತ್ತ ಗಮನಹರಿಸುವುದಾದರೆ..
1. ಇಂದೋರ್
2. ಅಂಬಿಕಾಪುರ್
3. ಮೈಸೂರು
4. ಉಜ್ಜೈನಿ
5. ನವದೆಹಲಿ
6. ಅಹಮದಾಬಾದ್
7. ನವಿ ಮುಂಬೈ
8. ತಿರುಪತಿ
9. ರಾಜ್ ಕೋಟ್
10. ದೇವಾಸ್