ಮೈಸೂರು(ಅ.18) ನಗರದ ಲಕ್ಷ್ಮೇ ಚಿತ್ರಮಂದಿರಕ್ಕೆ ಟಾಕಿಂಗ್‌ ಸ್ಟಾರ್‌, ನಟ ಸೃಜನ್‌ ಲೋಕೇಶ್‌ ಅವರು ತಮ್ಮ ಅಭಿನಯನದ ಎಲ್ಲಿದ್ದೆ ಇಲ್ಲಿ ತನಕ ಚಲನಚಿತ್ರ ವೀಕ್ಷಿಸಲು ನಿರ್ದೇಶಕ ತೇಜಸ್ವಿ ಅವರೊಂದಿಗೆ ಆಗಮಿಸಿದಾಗ ಸೃಜನ್‌ ಅಭಿಮಾನಿಗಳ ಸಂಘದ ವತಿಯಿಂದ ಪಟಾಕಿ ಸಿಡಿ, ಸಂಭ್ರಮಾಚರಿಸಿದ್ದಾರೆ.

ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು ಸೃಜನ್‌ ಅವರನ್ನು ಸನ್ಮಾನಿಸಿ, ಆತ್ಮೀಯವಾಗಿ ಸ್ವಾಗತಿಸಿದರು. ನಂತರ ಪ್ರೇಕ್ಷಕರೊಂದಿಗೆ ಕುಳಿತು ಸಂಪೂರ್ಣವಾಗಿ ಚಲನಚಿತ್ರ ವೀಕ್ಷಿಸಿದ್ದಾರೆ.

ಅಭಿಮಾನಿಗಳೊಂದಿಗೆ ಚಿತ್ರ ವೀಕ್ಷಿಸಿದ ಸೃಜನ್‌ ಲೋಕೇಶ್‌

ನಂತರ ಅವರು ಮಾತನಾಡಿ, ಮೈಸೂರು ನಮಗೆ ಹೊಸದೇನು ಅಲ್ಲ, ಇದು ನಮ್ಮ ಊರು, ಪ್ರೇಕ್ಷಕರ ಜೊತೆ ನಮ್ಮ ಸಿನಿಮಾ ನೋಡಲು ಬಂದಿದ್ದೇನೆ. ನಮ್ಮ ಹೋಮ್‌ ಬ್ಯಾನ್‌ರಿಂದ ಮೂಡಿ ಬಂದಿರುವ ಪ್ರಥಮ ಚಿತ್ರವಾಗಿದ್ದು, ಉತ್ತಮ ಕೌಟುಂಬಿಕ ಚಲನಚಿತ್ರವಾಗಿದ್ದು, ಎಲ್ಲೆಡೆ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದಿದ್ದಾರೆ.

ಗೌರಿ ಲಂಕೇಶ್ ಹತ್ಯೆ; ಯಾರಿಗೂ ತಿಳಿಯದ ವಿಚಾರ BB ಮನೆಯಲ್ಲಿ ಬಯಲು

ಕಾರ್ಯಕ್ರಮದಲ್ಲಿ ಅಭಿಮಾನಿ ಬಳಗದ ಸದಸ್ಯರಾದ ಎನ್‌. ಸಂತೋಷ್‌ಕುಮಾರ್‌, ಡಾ. ಧರ್ಮೇಶ್‌, ಸಚ್ಚಿನ್‌ರಾಜ್‌, ಅನಿರುದ್ದ, ನಿರಂಜನ್‌, ರಕ್ಷಿತ್‌, ಅಭಿಷೇಕ್‌, ಅಕ್ಷಯ್‌, ಮದನ್‌, ಅಭಿಮಾನಿಗಳು ಇದ್ದರು.