'ಹಾಯ್ ಬೆಂಗಳೂರು' ಪತ್ರಿಕೆಯ ಸಂಪಾದಕ ರವಿ ಬೆಳಗೆರೆ ಬಿಗ್‌ಬಾಸ್ ಮನೆ ಪ್ರವೇಶಿಸುತ್ತಾರೆಂದು ಹರಿದಾಡುತ್ತಿದ್ದ ಮಾತುಗಳನ್ನು ಕೇಳಿಯೇ ವೀಕ್ಷಕರು ಕಂಗಾಲಾಗಿದ್ದರು. ಜತೆ ಜತೆಗೆ ಸಾಕಷ್ಟು ನಿರೀಕ್ಷೆಗಳೂ ಹುಟ್ಟುಕೊಂಡಿದ್ದು ಸುಳ್ಳಲ್ಲ. ನೇರ, ನಿಷ್ಠುರವಾದಿ ಪತ್ರಕರ್ತನೊಬ್ಬ ಬಿಗ್‌ಬಾಸ್‌ನಂಥ ಮನೆಯೊಳಗೆ ನುಗ್ಗಿದರೆ ಏನೇನಾಗಬಹುದೋ ಎಂಬ ಕುತೂಹಲವೂ ಸಹಜವಾಗಿಯೇ ಇದ್ದವು. 

40 ರಿಂದ 38, ತಮ್ಮ ಬಗ್ಗೆ ಯಾರಿಗೂ ಗೊತ್ತಿಲ್ಲದ ತಮ್ಮದೇ ರಹಸ್ಯ ಹೇಳಿದ ಬೆಳಗೆರೆ

ತಮ್ಮ ಸರಳ, ವಿಶಿಷ್ಟ ಬರಹಗಳಿಂದಲೇ ರವಿ ಬೆಳಗೆರೆ ಲಕ್ಷಾಂತರ ಅಭಿಮಾನ ವೃಂದವನ್ನು ಹೊಂದಿದವರು. ಅವರ ಸ್ನೇಹ ಸ್ವಭಾವ ಎಲ್ಲರೊಂದಿಗೆ ಹೊಂದಿಕೊಳ್ಳುವಂತೆ ಮಾಡುತ್ತದೆ. ಅಲ್ಲದೇ ಎಲ್ಲ ವಯಸ್ಸಿನ ಸ್ನೇಹಿತರೊಂದಿಗೂ ಹಂಚಿಕೊಳ್ಳುವಂಥ ಜ್ಞಾನ ಹಾಗೂ ಅನುಭವ ರವಿ ಬೆಳಗೆರೆ ಬಳಿ ಇರುವುದೂ ಅವರ ಪ್ಲಸ್ ಪಾಯಿಂಟ್.

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಸಾವು ಮಾಧ್ಯಮವನ್ನೇ ಬೆಚ್ಚಿ ಬೀಳಿಸಿತ್ತು. 'ಅವತ್ತು ತಂಗಿ ಚಪಾತಿ-ಪಲ್ಯ ಮಾಡಿಕೊಂಡು ಗೌರಿಗೆ ಕೊಟ್ಟಿರುತ್ತಾಳೆ.  ಆ ಟಿಫನ್ ಕ್ಯಾರಿಯರ್ ಎತ್ಕೊಂಡು ಮನೆ ಗೇಟ್‌ ತೆಗೆಯಲು ಗೌರಿ ಮುಂದೆ ಹೋಗುತ್ತಾಳೆ. ಆ ವೇಳೆ ಆಕೆ ಮೇಲೆ ಗುಂಡುಗಳು ಎರಗಿ ಬರುತ್ತವೆ. ಕೆಳಗೆ ಬಿದ್ದ ಗೌರಿ ಎದ್ದು ಓಡಲು ಯತ್ನಿಸುತ್ತಾಳೆ. ಮತ್ತೆ ಮೂರು ಗುಂಡು ಹಾರುತ್ತವೆ....,' ಎಂದು ಮುಂದುವರಿಸಿದರು. ಆದರೆ, ವೀಕ್ಷಕರಿಗೆ ಪೂರ್ತಿ ವಿವರಗಳನ್ನು ತೋರಿಸದೇ ಹೋದರೂ, ಗೌರ ಹತ್ಯೆ ಬಗ್ಗೆ ರವಿ ಗೊತ್ತಿಲ್ಲದ ಕೆಲವು ಸಂಗತಿಗಳನ್ನು ಬಿಬಿ ಮನೆಯಲ್ಲಿ ಬಾಯಿ ಬಿಟ್ಟಿದ್ದಾರೆಂಬುವುದು ಮಾತ್ರ ಸ್ಪಷ್ಟವಾಗುತ್ತದೆ. 

‘ಅಮ್ಮನ ಮಾನ ಕಾಪಾಡಲು ಸೀರೆ ಅಡ್ಡ ಹಿಡಿಯುತ್ತಿದ್ದೆ’

'ಸಿಸಿ ಟಿವಿಯಲ್ಲಿ ಗೌರಿಗೆ ಬುಲೆಟ್‌ ಹಾರಿಸಿದವ ವಿಡಿಯೋ ಸೆರೆ ಆದದ್ದು ಕೇವಲ 4 ಸೆಕೆಂಡ್‌ಗಳು ಮಾತ್ರ. ಈ ಸಣ್ಣ ತುಣುಕನ್ನು ಹಿಡಿದು ಬೆಂಗಳೂರು ಪೊಲೀಸರು 8 ತಿಂಗಳ ಕಾಲ ಸುತ್ತಿದ್ದಾರೆ. FIR ದಾಖಲಾದ ನಂತರ ಚಾರ್ಚ್ ಶೀಟ್ ಫೈಲ್ ಆಗುತ್ತದೆ. ಅದು 10,000 ಸಾವಿರ ಪೇಜ್ ಇರುತ್ತದೆ...' ಎಂದು ಎಳೆ ಎಳೆಯಾಗಿ ಹೇಳುವ ವಿಚಾರಗಳನ್ನು ಕೇಳಿದ ಬಿಗ್ ಬಾಸ್ ಸ್ಪರ್ಧಿಗಳು ಶಾಕ್‌ ಆಗುತ್ತಾರೆ. ರವಿ ಬೆಳಗೆರೆಯಿಂದ ತಿಳಿದುಕೊಳ್ಳಬೇಕಾದ ವಿಚಾರಗಳು ಸಾಕಷ್ಟಿವೆ ಎಂಬುವುದು ಇತರೆ ಸ್ಪರ್ಧಿಗಳ ಅರಿವಿಗೆ ಈಗಾಗಲೇ ಬಂದಿದೆ.