ಚಿತ್ರನಟ ಸೃಜನ್‌ ಲೋಕೇಶ್‌ ಮಂಡ್ಯದಲ್ಲಿ ಮಹಾವೀರ ಚಿತ್ರಮಂದಿರದಲ್ಲಿ ಅಭಿಮಾನಿಗಳೊಂದಿಗೆ ಸಿನಿಮಾ ವೀಕ್ಷಿಸಿದ್ದಾರೆ. ಚಿತ್ರ ತಂಡ ಚಿತ್ರಮಂದಿರಕ್ಕೆ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಸೃಜನ್‌ ಲೋಕೇಶ್‌ ಅವರನ್ನು ಅಭಿನಂದಿಸಿ ಜೈಕಾರ ಕೂಗಿದ್ಧಾರೆ. ನಂತರ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ಮಂಡ್ಯ(ಅ.16): ಎಲ್ಲಿದ್ದೆ ಇಲ್ಲಿತನಕ ಚಲನಚಿತ್ರ ಪ್ರದರ್ಶನಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಗರದ ಮಹಾವೀರ ಚಿತ್ರಮಂದಿರಕ್ಕೆ ಚಿತ್ರನಟ ಸೃಜನ್‌ ಲೋಕೇಶ್‌, ನಿರ್ದೇಶಕ ತೇಜಸ್ವಿ ಹಾಗೂ ತಂಡ ಭೇಟಿ ನೀಡಿ ಅಭಿಮಾನಿಗಳೊಂದಿಗೆ ಕೆಲಕಾಲ ಚಿತ್ರ ವೀಕ್ಷಣೆ ಮಾಡಿದ್ದಾರೆ.

ಚಿತ್ರ ತಂಡ ಚಿತ್ರಮಂದಿರಕ್ಕೆ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಸೃಜನ್‌ ಲೋಕೇಶ್‌ ಅವರನ್ನು ಅಭಿನಂದಿಸಿ ಜೈಕಾರ ಕೂಗಿದರು. ನಂತರ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು. ಚಿತ್ರಮಂದಿರದ ಸಿಬ್ಬಂದಿಗೆ ಬಟ್ಟೆವಿತರಿಸಲಾಯಿತು.

ಹಿಂದೆಂದೂ ನೋಡಿರದ ಇಲ್ಲಿಯವರೆಗೆ ಕೇಳಿರದ ಡಿಫರೆಂಟ್ ದರ್ಶನ್

ಸುದ್ದಿಗಾರರೊಂದಿಗೆ ಮಾತನಾಡಿದ ಚಿತ್ರನಟ ಸೃಜನ್‌ ಲೋಕೇಶ್‌, ಚಿತ್ರಕ್ಕೆ ಉತ್ತಮ ರೆಸ್ಪಾಸ್ಸ್‌ ದೊರೆತಿದೆ. ಜನರು ಸಿನಿಮಾ ನೋಡಿ ಬಹಳ ಸಂತೋಷಪಟ್ಟಿದ್ದಾರೆ. ನಮ್ಮ ಸಿನಿಮಾದ ಬಗ್ಗೆ ನಾವು ಮಾತನಾಡಬಾರದು. ಜನರು ಮಾತನಾಡಬೇಕು ಎಂದು ಹೇಳಿದ್ದಾರೆ.

ಚಿತ್ರದ ಚಿತ್ರೀಕರಣವನ್ನು ಬೆಂಗಳೂರು, ಕಾಶ್ಮೀರ, ಮಲೇಷಿಯಾ ಇನ್ನಿತರೆ ಕಡೆಗಳಲ್ಲಿ ಮಾಡಲಾಗಿದೆ. ರಾಜ್ಯದಲ್ಲಿ 120 ಕೇಂದ್ರಗಳಲ್ಲಿ ಬಿಡುಗಡೆಯಾಗಿದೆ. ಮುಂದಿನ ವಾರ ಮತ್ತಷ್ಟುಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿದೆ ಎಂದು ತಿಳಿಸಿದರು. ಈ ವೇಳೆ ಸೃಜನ್‌ ಲೋಕೇಶ್‌ ಅಭಿಮಾನಿಗಳ ಸಂಘದ ಶ್ರೀನಿವಾಸ್‌, ಶಿವಣ್ಣ, ಸೋಮ, ಮಹದೇವು, ರವಿ, ಶ್ರೀಕಾಂತ್‌ ಇತರರಿದ್ದರು.

ಮೈಸೂರು ದಸರಾದಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ಗಳ ಡ್ಯಾನ್ಸ್ ಮೋಡಿ