ಆಕಾಶವಾಣಿಯ ರವೀಂದ್ರಕುಮಾರ್‌ ಇನ್ನಿಲ್ಲ

‘ನನಗೆ ಗಂಟಲು ಸರಿಯಿಲ್ಲ, ಆದರೂ ಕವನ ಓದುತ್ತೇನೆ... ನನ್ನ ಕವನದ ಶೀರ್ಷಿಕೆ ಜೊತೆಗಷ್ಟುಜೀವನ’ ಎಂದು ಮೊನ್ನೆಯಷ್ಟೇ ಕವನ ವಾಚಿಸಿದ್ದ ಬೆಂಗಳೂರು ಆಕಾಶವಾಣಿ ಕೇಂದ್ರದ ನಿಲಯ ನಿರ್ದೇಶಕ ಜಿ.ಕೆ. ರವೀಂದ್ರಕುಮಾರ್‌ ಬುಧವಾರ ಇಹಲೋಕ ತ್ಯಜಿಸಿದ್ದಾರೆ.

Bangalore akshavani director GK Ravindra Kumar

ಮೈಸೂರು(ಅ.10): ‘ನನಗೆ ಗಂಟಲು ಸರಿಯಿಲ್ಲ, ಆದರೂ ಕವನ ಓದುತ್ತೇನೆ... ನನ್ನ ಕವನದ ಶೀರ್ಷಿಕೆ ಜೊತೆಗಷ್ಟುಜೀವನ’ ಎಂದು ಮೊನ್ನೆಯಷ್ಟೇ ಕವನ ವಾಚಿಸಿದ್ದ ಬೆಂಗಳೂರು ಆಕಾಶವಾಣಿ ಕೇಂದ್ರದ ನಿಲಯ ನಿರ್ದೇಶಕ ಜಿ.ಕೆ. ರವೀಂದ್ರಕುಮಾರ್‌ ಬುಧವಾರ ಇಹಲೋಕ ತ್ಯಜಿಸಿದ್ದಾರೆ.

ಬಹುಷಃ ಅವರ ಕೊನೆಯ ಕವನವೂ ಅದೇ ಆಗಿತ್ತೇನೋ. ಜೊತೆಗಷ್ಟುಜೀವನ ಕವನದ ಆರಂಭದ ಸಾಲುಗಳಾದ ‘ಕೈಯಿಂದ ಚಿಮ್ಮಿದ ಚೆಂಡಿಗೆ ಗೊತ್ತಿಲ್ಲ, ಮುಂದಿನ ಕ್ಷಣ ತಾನು ಎಲ್ಲಿ ಹೇಗೆ ಎಂದು...’ ಎಂಬುದಾಗಿ ಆರಂಭವಾಗಿ ‘ಜೊತೆಗಷ್ಟುಆಯಸ್ಸು’ ಸಾಲಿನಿಂದ ಮುಕ್ತಾಯವಾಗುತ್ತದೆ.

ಅಪಘಾತಕ್ಕೊಳಗಾದ ನರಿಗೆ ಶ್ರೀಗಳ ಉಪಚಾರ

ಕಳೆದ ಬುಧವಾರವಷ್ಟೇ (ಅ.2) ಮೈಸೂರಿಗೆ ಆಗಮಿಸಿ ತನ್ನ ಸಮಕಾಲೀನರ ಜತೆ ಒಂದಷ್ಟುಸಮಯ ಕಳೆದು ದಸರಾ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ಆಕಾಶವಾಣಿ ಕಾರ್ಯಕ್ರಮ ನಡೆಸುವಾಗ ಕೇಳಿದ್ದ ಕಂಠ ಅದಾಗಿರಲಿಲ್ಲ. ಅದಕ್ಕಂತಲೆ ಆರಂಭದಲ್ಲಿ ನನ್ನ ಕಂಠ ಸರಿಯಿಲ್ಲ ಎಂದು ಕವನ ಓದಿದ್ದರು. ಅವರ ಕವನದ ಸಾಲುಗಳು ಸ್ಮೃತಿಪಟಲಕ್ಕೆ ಇಳಿಯುವ ಮೊದಲು ರವೀಂದ್ರಕುಮಾರ್‌ ಇಹಲೋಕ ತ್ಯಜಿಸಿದ್ದಾರೆ.

ಜಿ.ಕೆ. ರವೀಂದ್ರಕುಮಾರ್‌(58) ಬುಧವಾರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಮೃತರಿಗೆ ಪತ್ನಿ, ಒಬ್ಬ ಪುತ್ರ ಇದ್ದಾರೆ. ಕಳೆದ 30 ವರ್ಷಗಳಿಂದ ವಿವಿಧ ಅಕಾಶವಾಣಿ ಕೇಂದ್ರಗಳಲ್ಲಿ ಹಲವು ಹುದ್ದೆಗಳನ್ನು ಅಲಂಕರಿಸಿದ್ದರು.

ರಾಮನಗರದ ಜಾನಪದ ಲೋಕದಲ್ಲಿ ಸಖತ್ ಸ್ಟೆಪ್‌ ಹಾಕಿದ ಸಚಿವ ಸಿ. ಟಿ. ರವಿ

ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ರವೀಂದ್ರಕುಮಾರ್‌, ‘ಸಿಕಾಡ’ ಎಂಬ ಪ್ರಸಿದ್ಧ ಕವನ ಸಂಕಲನ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ಕಸಾಪ ದತ್ತಿನಿಧಿ ಪುರಸ್ಕಾರಕ್ಕೆ ಪಾತ್ರರಾಗಿದ್ದರು. ವಿಮರ್ಶೆ, ಲಲಿತ ಪ್ರಬಂಧ, ಅಂಕಣ ಬರೆಯುತ್ತಿದ್ದರು. ಸೃಜನಶೀಲ ರೂಪಕಗಳಿಗಾಗಿ 4 ವರ್ಷ ಆಕಾಶವಾಣಿ ರಾಷ್ಟ್ರೀಯ ಪ್ರಶಸ್ತಿ, 8 ಬಾರಿ ರಾಜ್ಯ ಬಾನುಲಿ ಪ್ರಶಸ್ತಿಗೆ ಪಾತ್ರರಾಗಿದ್ದರು. 2011 ರಲ್ಲಿ ವಾರಾಣಸಿಯಲ್ಲಿ ನಡೆದ ಆಕಾಶವಾಣಿ ಸರ್ವಭಾಷಾ ಕವಿ ಸಮ್ಮೇಳನದಲ್ಲಿ ಅವರು ಕನ್ನಡವನ್ನು ಪ್ರತಿನಿಧಿಸಿದ್ದರು. ಹಲವಾರು ಕವಿತೆಗಳು ಇಂಗ್ಲಿಷ್‌ ಭಾಷೆಗೆ ಅನುವಾದಗೊಂಡಿವೆ.

Latest Videos
Follow Us:
Download App:
  • android
  • ios