ಚಿತ್ರದುರ್ಗ(ಅ.10): ರಸ್ತೆ ದಾಟುವಾಗ ಗಾಯಗೊಂಡು ಬಿದ್ದಿದ್ದ ನರಿಯನ್ನು ಶ್ರೀಗಳು ರಕ್ಷಿಸಿ ಉಪಚರಿಸಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಗಾಯಗೊಂಡಿದ್ದ ನರಿ ಶ್ರೀಗಳ ಉಪಚಾರದಿಂದ ಚೇತರಿಸಿಕೊಂಡಿದೆ.

ಚಿತ್ರದುರ್ಗದಿಂದ ಹೊಳಲ್ಕೆರೆ ಮಾರ್ಗವಾಗಿ ಸಂಚರಿಸುವ ರಸ್ತೆ ಮಧ್ಯದಲ್ಲಿ ಘಟನೆ ನಡೆದಿದೆ. ನರಿ ಒಂದು ಬದಿಯಿಂದ ಮತ್ತೊಂದು ಬದಿಗೆ ಸಾಗುವಾಗ ಲಾರಿ ಅಪಘಾತದಿಂದ ಮುಖಕ್ಕೆ ಗಾಯವಾಗಿ ಉಸಿರಾಟಕ್ಕೆ ತೊಂದರೆ ಪಡುತ್ತಿತ್ತು. ಇದನ್ನು ಕಂಡ ಕನಕಗುರುಪೀಠದ ಜಗದ್ಗುರು ನಿರಂಜನಾನಂದಪುರಿ ಸ್ವಾಮೀಜಿ ನೀರು ಕುಡಿಸಿ ಆರೈಕೆ ಮಾಡಿ ಮಾನವೀಯತೆ ಮೇರದರು.

ಹಿರಿಯೂರಿನ ಕುಂದಲಗುರ ಬ್ಯಾರೇಜ್ ಭರ್ತಿ: ರೈತರ ಮೊಗದಲ್ಲಿ ಸಂತಸ

ಈ ಸಂದರ್ಭದಲ್ಲಿ ಭೋವಿಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ , ಶಿವಮೊಗ್ಗದ ಬಸವ ಮರಳುಸಿದ್ಧ ಸ್ವಾಮೀಜಿ, ರಾಯಚೂರಿನ ಬಸವಪ್ರಸಾದ ಶರಣರು, ಕೊರಟಗೆರೆಯ ಮಹಾಲಿಂಗ ಸ್ವಾಮೀಜಿಯವರು ಸಾಕ್ಷಿಕರಿಸಿದರು.

‘6 ತಿಂಗಳಲ್ಲಿ ಯಡಿಯೂರಪ್ಪ ಸರ್ಕಾರ ಪತನದ ಭವಿಷ್ಯ’