ರಾಮನಗರದ ಜಾನಪದ ಲೋಕದಲ್ಲಿ ಸಖತ್ ಸ್ಟೆಪ್‌ ಹಾಕಿದ ಸಚಿವ ಸಿ. ಟಿ. ರವಿ

ಜಾನಪದ ಲೋಕದಲ್ಲಿ ಸಾಂಸ್ಕೃತಿಕ ಕಲೆಗಳು ಅನಾವರಣಗೊಂಡಿತು| ಜಾನಪದ ಲೋಕದಲ್ಲಿ ಸಿರಿ ದಸರಾ ಪ್ರಯುಕ್ತ ರಾಜ್ಯ ವಿವಿಧ ಭಾಗಗಗಳಿಂದ 100 ಕ್ಕೂ ಜಾನಪದ ಕಲಾವಿದರು ಆಗಮಿಸಿದ್ದರು| ಲೋಕದ ವೀಕ್ಷಣೆಗೆಂದು ಆಗಮಿಸುವ ಪ್ರವಾಸಿಗರನ್ನು ಈ ವೇಳೆ ರಂಜಿಸಿದರು| ಹುಲಿವೇಷ, ಮಹಿಳಾ ತಮಟೆ, ಪಟ್ಟದ ಕುಣಿತ, ಪೂಜಾ ಕುಣಿತ, ನೀಲಗಾರರ ಪದ, ಗೊರವನ ಕುಣಿತ, ಡೊಳ್ಳುಕುಣಿತ, ಕಂಸಾಳೆ, ಚಿಲಿಪಿಲಿ ಗೊಂಬೆ ಕುಣಿತ, ಲಂಬಾಣಿ ಕುಣಿತ ಸೇರಿದಂತೆ ಜಾನಪದ ಗೀತೆಗಳುಜನರ ಗಮನ ಸೆಳೆ​ದವು| 

Minister CT Ravi Visited at Ramanagara's Janapada Loka

ರಾಮನಗರ(ಅ.10): ನಗರದ ಹೊರ​ವ​ಲ​ಯದ ಜಾನಪದ ಲೋಕದಲ್ಲಿ ಬುಧ​ವಾರ ಸಾಂಸ್ಕೃತಿಕ ಕಲೆಗಳು ಅನಾವರಣಗೊಂಡಿತು. ನಗರದ ಜಾನಪದ ಲೋಕದಲ್ಲಿ ಸಿರಿ ದಸರಾ ಪ್ರಯುಕ್ತ ರಾಜ್ಯ ವಿವಿಧ ಭಾಗಗಗಳಿಂದ 100 ಕ್ಕೂ ಜಾನಪದ ಕಲಾವಿದರು ಆಗಮಿಸಿದ್ದರು. ಲೋಕದ ವೀಕ್ಷಣೆಗೆಂದು ಆಗಮಿಸುವ ಪ್ರವಾಸಿಗರನ್ನು ಈ ವೇಳೆ ರಂಜಿಸಿದರು.

ಹುಲಿವೇಷ, ಮಹಿಳಾ ತಮಟೆ, ಪಟ್ಟದ ಕುಣಿತ, ಪೂಜಾ ಕುಣಿತ, ನೀಲಗಾರರ ಪದ, ಗೊರವನ ಕುಣಿತ, ಡೊಳ್ಳುಕುಣಿತ, ಕಂಸಾಳೆ, ಚಿಲಿಪಿಲಿ ಗೊಂಬೆ ಕುಣಿತ, ಲಂಬಾಣಿ ಕುಣಿತ ಸೇರಿದಂತೆ ಜಾನಪದ ಗೀತೆಗಳುಜನರ ಗಮನ ಸೆಳೆ​ದವು.

ಪೂರ್ಣ ಕುಂಭ ಸ್ವಾಗತ

ಅದರಲ್ಲೂ ಕನಕಪುರ ತಾಲೂಕಿನ ಲಂಬಾಣಿ ಕುಣಿತ ಹಾಗೂ ಚಾಮರಾಜನಗರ ಜಿಲ್ಲೆಯ ಗೊರವನ ಕುಣಿತ, ಹೊಸಕೋಟೆಯ ಮಹಿಳಾ ತಮಟೆ ಕುಣಿತ ಪ್ರವಾಸಿಗರನ್ನು ರಂಜಿಸಿದರೆ, ಸಿರಿ ದಸರಾ ಪ್ರಯುಕ್ತದ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಆಗಮಿಸಿದ ಸಚಿವ ಸಿ.ಟಿ. ರವಿ ಅವರನ್ನು ಜಿಲ್ಲಾ ಮಹಿಳಾ ಸಂಘಟನೆಯು ಪೂರ್ಣ ಕುಂಭ ಸ್ವಾಗತ ನೀಡಿ ಬರ ಮಾಡಿಕೊಂಡಿತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಜಾನಪದ ಲೋಕದ ಪ್ರಥಮ ದ್ವಾರದ ಒಂದು ಫರ್ಲಾಂಗ್‌ ರಸ್ತೆಯಲ್ಲಿ 20ಕ್ಕೂ ಹೆಚ್ಚು ಜಾನಪದ ಕಲಾ ತಂಡ ಹಾಗೂ 180 ಕ್ಕೂಹೆಚ್ಚು ಕಲಾವಿದರು ಸಾಲಾಗಿ ನಿಂತು ಪ್ರವಾಸಿಗರನ್ನು ಬರ ಮಾಡಿಕೊಂಡರು. ಬೆಂಗಳೂರು ಸೇರಿದಂತೆ ಇತರೆ ಕಡೆಗಳಿಂದ ಆಗಮಿಸಿದ ಪ್ರವಾಸಿಗರನ್ನು ಏಕ ರಸ್ತೆಯಲ್ಲಿದ್ದ ಅನೇಕ ಜಾನಪದ ತಂಡಗಳನ್ನು ಒಮ್ಮೆಲೆ ಕಂಡು ಮೂಕವಿಸ್ಮಿತರಾದರು.

ಹೆಜ್ಜೆ ಹಾಕಿದ ಸಚಿ​ವರು:

ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಜಾನಪದ ಲೋಕ ವೀಕ್ಷಣೆಗೆಂದು ಆಗಮಿಸಿದ್ದ ಮಕ್ಕಳೊಂದಿಗೆ ಪೀಪಿ ಊದುವ ಮೂಲಕ ತಮ್ಮ ಬಾಲ್ಯವನ್ನು ನೆನಪಿಸಿಕೊಂಡರು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಚಿವರು ಮಕ್ಕಳೆಡೆಗೆ ಧಾವಿಸಿದರು. ಇದನ್ನು ಕಂಡ ಸಣ್ಣ ಮಕ್ಕಳು ಸಚಿವರನ್ನು ಕಂಡು ಒಮ್ಮೆಲೆ ಪೀಪಿ ಊದಲು ಶುರು ಮಾಡಿದರು. ಇದನ್ನು ಕಂಡ ಸಚಿವ ರವಿ, ಮಕ್ಕಳ ಬಳಿಯಿದ್ದ ಪೀಪಿ ಪಡೆದು ತಾವು ಊದಿ, ಮಕ್ಕಳನ್ನು ಖುಷಿ ಪಡಿಸಿದರು. ಸಚಿವರ ಈ ನಡೆಗೆ ಎಲ್ಲರಿಂದಲೂ ಪ್ರಶಂಸೆ ವ್ಯಕ್ತವಾಯಿತು.

ಕಾರ್ಯಕ್ರಮಕ್ಕೆ ಆಗಮಿಸಿದ ಸಚಿವರು ಮುಕ್ಕಾಲು ತಾಸಿಗೂ ಅಧಿಕ ಜಾನಪದ ಲೋಕವನ್ನು ಸುತ್ತು ಹಾಕಿ, ಸ್ಥಳೀಯ ಇತಿಹಾಸದ ಕುರಿತು ಆಡಳಿತ ಮಂಡಳಿಯಿಂದ ಮಾಹಿತಿ ಪಡೆದುಕೊಂಡರು. ಚಾಮರಾಜನಗ​ರ ಜಿಲ್ಲೆಯಿಂದ ಆಗಮಿಸಿದ್ದ ಗೊರವರ ಕುಣಿತದ ಬಳಿ ತೆರೆಳಿದ ಸಚಿವರು, ಅವರ ಟೋಪಿ ಹಾಗೂ ಡಮರು ಪಡೆದು ಸ್ಟೆಪ್ ಹಾಕಿದರು. ಇದನ್ನು ಕಂಡ ತಂಡ ಇತರೆ ಸದಸ್ಯರು ಅವರೊಂದಿಗೆ ಫೋಟೋ ಸೆಷನ್‌ ಕೂಡ ನಡೆಸಿದರು.

ಈ ವೇಳೆ ಮಾತನಾಡಿದ ಸಚಿವ ಸಿ. ಟಿ. ರವಿ ಅವರು, ಸಣ್ಣ ಮಕ್ಕಳ ಬಾಲ್ಯವನ್ನು ಶಾಲೆಯ ಹೋಮ್‌ ವರ್ಕ್ ಮಾಡಿಸುವುದರಲ್ಲಿ ಕಳೆಯುವುತ್ತಿರುವುದು ಬೇಸರ ತರಿಸಿದೆ. ಸಣ್ಣ ಮಕ್ಕಳಿದ್ದಾಗ ನಾನೂ ಕೂಡ ಗೋಲಿ ಸೇರಿದಂತೆ ಇತರೆ ಕ್ರೀಡೆಗಳನ್ನು ಹಾಡುತ್ತಿದ್ದೆ. ಇಂದು ಮಕ್ಕಳೊಂದಿಗೆ ಸೇರಿದ್ದು ಖುಷಿ ನೀಡಿತು ಎಂದು ತಮ್ಮ ಸಂತಸವನ್ನು ಹಂಚಿಕೊಂಡರು. 
 

Latest Videos
Follow Us:
Download App:
  • android
  • ios