ಮೈಸೂರು(ನ.09): ಅಯೋಧ್ಯೆ ತೀರ್ಪು ಹಿನ್ನೆಲೆಯಲ್ಲಿ ರಾಜ್ಯಾಂದ್ಯಂತ ಬಿಗಿ ಭದ್ರತೆಗೆ ವ್ಯವಸ್ಥೆ ಮಾಡಲಾಗಿದ್ದು, ಮೈಸೂರಿನಲ್ಲಿ 3,500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ನಗರದ ಎಲ್ಲಾ ದೇವಸ್ಥಾನಗಳು, ಮಸೀದಿಗಳು, ಪ್ರಾರ್ಥನಾ ಮಂದಿರಗಳು ಸೇರಿದಂತೆ ಪೂಜಾ ಸ್ಥಳಗಳಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ.

ಅಯೋಧ್ಯೆ ತೀರ್ಪು ಹಿನ್ನೆಲೆ ಮೈಸೂರಿನಲ್ಲಿ ಭದ್ರತೆಗಾಗಿ 3,500ಕ್ಕೂ ಅಧಿಕ ಪೊಲೀಸರ ನಿಯೋಜಿಸಲಾಗಿದೆ. ನಗರದೆಲ್ಲೆಡೆ ಪೊಲೀಸರ ಕಟ್ಟೆಚ್ಚರ ವಹಿಸಿದ್ದು, ದೇವಸ್ಥಾನ, ಮಸೀದಿ, ಪ್ರಾರ್ಥನಾ ಮಂದಿರಗಳು ಸೇರಿ ಪೂಜಾ ಸ್ಥಳಗಳಲ್ಲಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ.

ಅಯೋಧ್ಯೆ ತೀರ್ಪು: ಕೋಲಾರದ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಹದ್ದಿನ ಕಣ್ಣು..!

ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ವಿಜಯೋತ್ಸವ ಹಾಗೂ ಪ್ರತಿಭಟನೆ ನಡೆಸುವುದನ್ನೂ ಕಟ್ಟು ನಿಟ್ಟಾಗಿ ನಿಷೇಧಿಸಲಾಗಿದೆ. ರಾತ್ರಿಯಿಂದಲೇ ಲಾಡ್ಜ್‌ಗಳು, ಹೋಟೆಲ್‌ಗಳಲ್ಲಿ ತಪಾಸಣೆ ನಡೆಸಲಾಗಿದೆ.

ಪೊಲೀಸರ ರಜೆಗಳು ರದ್ದು:

12 ಜಾಗಗಳಲ್ಲಿ ಚೆಕ್‌ಪೋಸ್ಟ್‌, 4 ಕೆ.ಎಸ್‌.ಆರ್‌.ಪಿ ತುಕಡಿಗಳು, 18 ಸಿಎಆರ್ ತುಕಡಿಗಳು ಹಾಗೂ ಅಶ್ವಾರೋಹಿದಳ ಸನ್ನದ್ಧವಾಗಿದ್ದು, 18 ಭಯೋತ್ಪಾದನಾ ನಿಗ್ರಹದ ಪ್ರತ್ಯೇಕ ತಂಡವನ್ನೂ ನಿಯೋಜಿಸಲಾಗಿದೆ. ಈದ್‌ ಮಿಲಾದ್ ಆಚರಣೆ ಹೊರತುಪಡಿಸಿ ಉಳಿದ ಯಾವುದೇ ವಿಧವಾದ ಮೆರವಣಿಗೆ ನಡೆಸುವುದು ನಿಷೇಧ ಮಾಡಲಾಗಿದೆ. ಪೊಲೀಸರ ಎಲ್ಲ ರಜೆಗಳನ್ನೂ ರದ್ದುಪಡಿಸಲಾಗಿದೆ.

ಮಂಗಳೂರು: ಅಯೋಧ್ಯೆ ತೀರ್ಪು ಹಿನ್ನೆಲೆ ಧಾರ್ಮಿಕ ಕೇಂದ್ರಗಳ ಸುತ್ತ ಬಿಗಿ ಭದ್ರತೆ.