ಮಂಗಳೂರು(ನ.09): ಇಂದು ಸುಪ್ರೀಂ ಕೋರ್ಟ್‌ನಿಂದ ಮಹತ್ವದ ಅಯೋಧ್ಯೆ ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದಲ್ಲಿ ಜಿಲ್ಲೆಯಾದ್ಯಂತ ಬಿಗು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ದಕ್ಷಿಣ ಕನ್ನಡ ಪೊಲೀಸ್ ಮತ್ತು ಮಂಗಳೂರು ಕಮಿಷನರೇಟ್ ನಲ್ಲಿ ಭಾರೀ ಭದ್ರತೆ ಒದಗಿಸಲಾಗಿದ್ದು, ಜಿಲ್ಲೆಯ ಎಲ್ಲಾ ಪೊಲೀಸ್ ಸಿಬ್ಬಂದಿಗೂ ಭದ್ರತಾ ಕಾರ್ಯಕ್ಕೆ ಹಾಜರಾಗಲು ಸೂಚನೆ ನೀಡಲಾಗಿದೆ.

1500 ಪೊಲೀಸರ ನಿಯೋಜನೆ:

ಜಿಲ್ಲಾ ಪೊಲೀಸ್ ಮತ್ತು ಕಮಿಷನರೇಟ್ ವ್ಯಾಪ್ತಿಯ 1,500 ಸಾವಿರಕ್ಕೂ ಅಧಿಕ ಪೊಲೀಸರು ಭದ್ರತೆಗೆ ನಿಯೋಜಿಸಲಾಗಿದ್ದು, ಅಗತ್ಯ ಬಿದ್ದರೆ ಸೂಕ್ಷ್ಮ ಪ್ರದೇಶಗಳಲ್ಲಿ ನಿಷೇಧಾಜ್ಞೆ ವಿಧಿಸಲು ಚಿಂತನೆ ನಡೆಸಲಾಗಿದೆ. ಎಸ್ಪಿ ಮತ್ತು ಕಮಿಷನರ್ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಭಾರೀ ಬಂದೋಬಸ್ತ್‌ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ದ.ಕ ಜಿಲ್ಲೆಯ ಶಾಲಾ-ಕಾಲೇಜುಗಳಿಗೂ ರಜೆ ಘೋಷಣೆ ಮಾಡಲಾಗಿದ್ದು. 24 ಗಂಟೆಗಳ ಕಾಲ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಸ್ಪೆಷಲ್ ಫೋರ್ಸ್:

ಪ್ಯಾರಾಮಿಲಿಟರಿ ಫೋರ್ಸ್ ಸೇರಿದಂತೆ ವಿವಿಧ ವಿಶೇಷ ಫೋರ್ಸ್‌ಗಳನ್ನು ನಿಯೋಜಿಸಲಾಗಿದ್ದು, ಶಸ್ತ್ರಾಸ್ತ್ರಗಳನ್ನು ವಾಹನಕ್ಕೆ ತುಂಬಿಸಿಕೊಂಡು ಪೊಲೀಸರು ಕರ್ತವ್ಯಕ್ಕೆ ಹೊರಡುತ್ತಿರುವ ದೃಶ್ಯ ಮಂಗಳೂರಿನಲ್ಲಿ ಕಂಡು ಬಂದಿದೆ. ಕಮಿಷನರ್ ಕಚೇರಿಯಿಂದ ದ.ಕ ಮತ್ತು ಮಂಗಳೂರು ಸೇರಿ ನಿಯೋಜಿತ ಸ್ಥಳಗಳಿಗೆ ಪೊಲೀಸರು ಹೊರಟಿದ್ದಾರೆ. KSRTC ಬಸ್ ಮತ್ತು ಪೊಲೀಸ್ ವಾಹನಗಳಲ್ಲಿಯೂ ಪೊಲೀಸ್ ಪಡೆ ನಿಯೋಜಿತ ಸ್ಥಳಗಳಿಗೆ ಹೊರಟಿದೆ.

ಬರಲಿದೆ ಅಯೋಧ್ಯೆ ಆದೇಶ: ಸ್ವಪಕ್ಷೀಯರಿಗೆ ಮೋದಿ ಕೊಟ್ಟ ಸಂದೇಶ?

ಸುಪ್ರೀಂ ಕೋರ್ಟ್ ನಲ್ಲಿ ಅಯೋಧ್ಯೆ ತೀರ್ಪು ಹಿನ್ನೆಲೆ ಉಡುಪಿ ಜಿಲ್ಲೆ ಸಹಜವಾಗಿದ್ದು, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಆಯಾಯ ಠಾಣಾ ವ್ಯಾಪ್ತಿಯಲ್ಲಿ ಸಾಮಾನ್ಯ ಭದ್ರತಾ ವ್ಯವಸ್ಥೆ ಮಾಡಲಾಗಿದ್ದು, ಹೆಚ್ಚುವರಿಯಾಗಿ ನಾಲ್ಕು ಕೆಎಸ್ ಆರ್ ಪಿ ತುಕುಡಿ ನಿಯೋಜಿಸಲಾಗಿದೆ. ಡಿಎಆರ್ ನ ಎಂಟು ತುಕುಡಿ ನಿಯೋಜಿಸಿದ್ದು, ಆಯಕಟ್ಟಿನ ಸ್ಥಳಗಳಲ್ಲಿ, ಧಾರ್ಮಿಕ ಕೇಂದ್ರಗಳ ಆವರಣದಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

ರಾಮ ಜನ್ಮಭೂಮಿಯಲ್ಲಿ ಭಾರಿ ಕಟ್ಟೆಚ್ಚರ; ಸಂಭ್ರಮಾಚರಣೆ ನಿಷೇಧ

ಸಾಮಾಜಿಕ ಜಾಲತಾಣಗಳ ಮೂಲಕ ವದಂತಿ ಹಬ್ಬಿಸದಂತೆ ಸೂಚನೆ ನೀಡಲಾಗಿದ್ದು, ತೀರ್ಪಿನ ಮುನ್ನ ಅಥವಾ ನಂತರ ಸಾರ್ಜನಿಕರು ಶಾಂತಿ ಸುವ್ಯವಸ್ಥೆ ಕಾಪಾಡಬೇಕೆಂದು ಜಿಲ್ಲಾಧಿಕಾರಿ ಜಿ ಜಗದೀಶ್ ಸೂಚನೆ ನೀಡಿದ್ದಾರೆ. ಶಾಂತಿ ಕದಡುವ ಕಾರ್ಯಕ್ಕೆ ಕೈ ಹಾಕಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಶಾಂತಿ ,ಗಲಭೆ ಸೃಷ್ಟಿ ಸಿದಲ್ಲಿ ,ಸೃಷ್ಟಿಸುವ ಪ್ರಯತ್ನ ನಡೆಸುವುದಕ್ಕೆ ಮುಂದಾದರೂ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಕೊಡಗು: ಜಿಲ್ಲೆಯಾದ್ಯಂತ ನಿಷೇಧಾಜ್ಞೆ, ಮದ್ಯ ಮಾರಾಟವಿಲ್ಲ