ಮೈಸೂರು(ನ.15): ಸಿದ್ದರಾಮಯ್ಯ ಹಾಗೂ ಹೆಚ್‌. ಡಿ. ಕುಮಾರಸ್ವಾಮಿ ಅವರು ಎಷ್ಟಾದರೂ ಮುಗಿಬೀಳಲಿ. ನಮ್ಮನ್ನು ಜನ ಗೆಲ್ಲಿಸುತ್ತಾರೆ ಎಂದು ಹುಣಸೂರು ಬಿಜೆಪಿ ಅಭ್ಯರ್ಥಿ ಎ. ಎಚ್. ವಿಶ್ವನಾಥ್ ಹೇಳಿದ್ದಾರೆ.

ಮೈಸೂರಿನಲ್ಲಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಅವರು ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ. ನಂತರ ಮಾತನಾಡಿ, 5 ದಿನಗಳ ಹಿಂದೆ ಚಾಮುಂಡಿ ಬೆಟ್ಟಕ್ಕೆ ಬಂದಾಗ ಮನದಲ್ಲಿ‌‌ ಖಿನ್ನತೆ ಇತ್ತು. ಯಾರೋ ವ್ಯಕ್ತಿ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ನಾಡಿ ಮನಸು ನೋವಾಗಿತ್ತು. ಆದರೂ ಅವತ್ತು ನನಗೆ ನೈತಿಕವಾಗಿ ಗೆಲುವಾಗಿತ್ತು ಎನ್ನುವ ಮೂಲಕ ಪರೋಕ್ಷವಾಗಿ ಸಾರಾ.ಮಹೇಶ್‌ಗೆ ಟಾಂಗ್ ಕೊಟ್ಟಿದ್ದಾರೆ.

15 ಅಭ್ಯರ್ಥಿಗಳ ಗೆಲುವಿಗೆ ಪ್ರಾರ್ಥನೆ:

ಅಂದು ಆರೋಪ ಮಾಡಿದ್ದವರು ಗುಡಿ ಬಿಟ್ಟು ಹೊರಗೆ ಬಂದಿರಲಿಲ್ಲ. ಇಂದು ನನ್ನ ಮನಸ್ಸು ನೆಮ್ಮದಿಯಾಗಿ ಚಾಮುಂಡಿ ತಾಯಿ ಮುಂದೆ ನಿಂತಿದ್ದೇನೆ. ಎಲ್ಲಾ 15 ಜನ ಬಿಜೆಪಿ ಅಭ್ಯರ್ಥಿಗಳ ಗೆಲುವಿಗಾಗಿ ದೇವಿ ಮುಂದೆ ಕೇಳಿಕೊಂಡಿದ್ದೇನೆ ಎಂದಿದ್ದಾರೆ.

ರಾಜ್ಯದಲ್ಲಿದ್ದ ರಾಕ್ಷಸ ರಾಜಕಾರಣ ಮೆಟ್ಟಿ ರಾಜೀನಾಮೆ ಕೊಟ್ಟಿದ್ದು

ನಾನು ರಾಜ್ಯದಲ್ಲಿದ್ದ ರಾಕ್ಷಸ ರಾಜಕಾರಣ ಮೆಟ್ಟಿ ರಾಜೀನಾಮೆ ಕೊಟ್ಟೆ. ಚುನಾವಣೆಯಲ್ಲಿ ಸಿದ್ದರಾಮಯ್ಯ ಕುಮಾರಸ್ವಾಮಿ ಇಬ್ಬರೂ ಮುಗಿಬೀಳಲಿ‌ ಬಿಡಿ. ನಾನು ಬಿಜೆಪಿ ಅಭ್ಯರ್ಥಿ, ಪಕ್ಷದಿಂದ ಸ್ಪರ್ಧೆ ಮಾಡುತ್ತೇನೆ. ಬಿಜೆಪಿ ಪಕ್ಷ ಸ್ಟ್ಯಾಟರ್ಜಿ ಮಾಡುತ್ತದೆ. ಜನ ನಮ್ಮನ್ನು ಗೆಲ್ಲಿಸುತ್ತಾರೆ. ಉಪ ಚುನಾವಣೆಯ ಬಲೆಯನ್ನು ಜನರು ಬಿಡಿಸುತ್ತಾರೆ. ನನ್ನ ಅಭಿವೃದ್ಧಿ ಕಾರ್ಯ ಗಮನಿಸಿ ಕ್ಷೇತ್ರದ ಜನ ಗೆಲ್ಲಿಸುತ್ತಾರೆ ಎಂದು ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಹೆಚ್.ವಿಶ್ವನಾಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘15 ಕ್ಷೇತ್ರದಲ್ಲಿ ಗೆಲುವು ಖಚಿತ : ನನ್ನ ಮಗನ ಟಿಕೆಟ್ ಬಗ್ಗೆ ಯೋಚಿಸಿಲ್ಲ’

ಅಂತಿಮವಾಗಿ ಜನ ನ್ಯಾಯ ಕೊಡಲಿದ್ದಾರೆ:

ಸ್ಪೀಕರ್‌ ರಮೇಶ್ ಕುಮಾರ್‌ ಅವರನ್ನು ಸಿದ್ದರಾಮಯ್ಯ ಕುಮಾರಸ್ವಾಮಿ ಇಬ್ಬರು‌ಸೇರು ರೈಲು ಹತ್ತಿಸಿದ್ದಾರೆ. ನಮ್ಮ 17 ಜನರನ್ನ ಅನರ್ಹ ಮಾಡಿಸಿದರು. ಸಂವಿಧಾನ ವಿರೋಧಿಯಾಗಿ, ಕಾನೂನು ಬಾಹಿರವಾಗಿ ನಮ್ಮನ್ನು ಅನರ್ಹ ಮಾಡಿದ್ರು. ಅದರ ವಿರುದ್ಧ ನಾವು ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದೆವು. ಸುಪ್ರೀಂ ನಮ್ಮ ಪರ ನ್ಯಾಯ ನೀಡಿ, ಚುನಾವಣೆಗೆ ನಿಲ್ಲಲು ಅವಕಾಶ ನೀಡಿದೆ. ಯಾವ ಸಿದ್ದರಾಮಯ್ಯ, ಯಾವ ಕುಮಾರಸ್ವಾಮಿ, ಯಾವ ರಮೇಶ್ ಕುಮಾರ್ ನಮ್ಮನ್ನು ಮೂಲೆಗುಂಪು ಮಾಡಲು ಮುಂದಾಗಿದ್ದರೋ ಅದನ್ನು ತಳ್ಳಿ ಹಾಕಿ ಸುಪ್ರೀಂ ನ್ಯಾಯ ಕೊಟ್ಟಿದೆ. ಅಂತಿಮವಾಗಿ ಜನ ನಮಗೆ ನ್ಯಾಯ ಕೊಡುತ್ತಾರೆ ಎಂದಿದ್ದಾರೆ.