ಮೈಸೂರು [ಅ.08]: ವಿಶ್ವವಿಖ್ಯಾತ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಈ ನಿಟ್ಟಿನಲ್ಲಿ ಅಂಬಾರಿ ಹೊತ್ತು ಸಾಗುವ ಆನೆ ಹಾಗೂ ಇತರೆ ಆನೆಗಳನ್ನು ತೂಕ ಮಾಡಲಾಗಿದೆ. 

ಆಡಳಿತ ಮಂಡಳಿ ಅರ್ಜುನ ಸೇರಿದಂತೆ ಜಂಬೂ ಸವಾರಿಯಲ್ಲಿ ಭಾಗವಹಿಸುವ ಎಲ್ಲಾ ಆನೆಗಳ ತೂಕವನ್ನು ಪರಿಶೀಲನೆ ಮಾಡಲಾಗಿದೆ.  

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಂಬಾರಿ ಹೊತ್ತು ಸಾಗುವ ಅರ್ಜುನನು ದಸರಾದ ಪ್ರಮುಖ ಆಕರ್ಷಣೆಯಾಗಿದ್ದು, ಅರ್ಜುನನ ತೂಕ 6040 ಕೆ.ಜಿ ಇದೆ.

ಇನ್ನು ಅರ್ಜುನನ ಜೊತೆ ಸಾಗುವ ವಿಜಯ - 2970 ಕೆ.ಜಿ ತೂಗುತ್ತಿದೆ.  ಈಶ್ವರನ ತೂಕ 4270 ಕೆ.ಜಿ ಇದ್ದು,  ಅಭಿಮನ್ಯು - 5420 ಕೆ.ಜಿ. ತೂಗುತ್ತಿದ್ದಾನೆ. ಇನ್ನು ಹೆಣ್ಣಾನೆ ಶನಾಯ ತೂಕ 4710 ಕೆ.ಜಿ ಇದೆ.