Asianet Suvarna News Asianet Suvarna News

Maaraya Film Review: ಫೇಸ್‌ಬುಕ್‌ ಅವಾಂತರ ಜೀವಕ್ಕೆ ಗಂಡಾಂತರ

ಸೋಷಿಯಲ್‌ ಮೀಡಿಯಾಗಳಿಲ್ಲದ ನಾವಿಲ್ಲ ಅನ್ನೋ ಕಾಲಘಟ್ಟದಲ್ಲಿ ಫೇಸ್‌ಬುಕ್‌ ದುಷ್ಪರಿಣಾಮಗಳೇನು ಅನ್ನೋದನ್ನು ಉದಾಹರಣೆಯೊಂದಿಗೆ ವಿವರಿಸುವ ಚಿತ್ರ ಮಾರಾಯ. ಕುಮಾರ್‌ ಎಂಬ ಯುವಕನಿಗೆ ಫೇಸ್‌ಬುಕ್‌ ಖಯಾಲಿ.

Vinaya Prasad Kumar Bigg boss Diwakar Maaraya kannada film review vcs
Author
Bengaluru, First Published Jul 23, 2022, 10:49 AM IST

ಸಾಕ್ಷಿ ಆರ್‌

ಸೋಷಿಯಲ್‌ ಮೀಡಿಯಾಗಳಿಲ್ಲದ ನಾವಿಲ್ಲ ಅನ್ನೋ ಕಾಲಘಟ್ಟದಲ್ಲಿ ಫೇಸ್‌ಬುಕ್‌ ದುಷ್ಪರಿಣಾಮಗಳೇನು ಅನ್ನೋದನ್ನು ಉದಾಹರಣೆಯೊಂದಿಗೆ ವಿವರಿಸುವ ಚಿತ್ರ ಮಾರಾಯ. ಕುಮಾರ್‌ ಎಂಬ ಯುವಕನಿಗೆ ಫೇಸ್‌ಬುಕ್‌ ಖಯಾಲಿ. ಅದರಲ್ಲಿ ಹುಡುಗಿಯರ ಫೋಟೋ ನೋಡಿ ಅವರಿಗೆ ಫ್ರೆಂಡ್‌ ರಿಕ್ವೆಸ್ಟ್‌ ಕಳಿಸೋದು, ಅವರಿಗೆ ಮೆಸೇಜ್‌ ಮಾಡುವುದು, ಕಾಂಟಾಕ್ಟ್ ನಂಬರ್‌ ತಗೊಳ್ಳೋದು, ಮೀಟ್‌ ಮಾಡೋದು, ಡೇಟ್‌ ಮಾಡೋದು ಹೀಗೆ. ಆರಂಭದಲ್ಲಿ ಮಜಾ ಅಂತ ಶುರುವಾಗೋ ಈ ಅಭ್ಯಾಸ ಒಂದು ಹಂತದಲ್ಲಿ ಹುಡುಗಿಯರ ಬದುಕಿನ ಜೊತೆ ಆಟವಾಡುವ ಮಟ್ಟಿಗೆ ಮುಂದುವರಿಯುತ್ತದೆ. ಇದರಿಂದ ಪ್ರಾಣಕ್ಕೇ ಅಪಾಯ ತಂದುಕೊಳ್ಳುವ ಕುಮಾರ್‌ ಹೇಗೋ ಬಚಾವ್‌ ಆಗ್ತಾನೆ. ಸೆಕೆಂಡ್‌ ಹಾಫ್‌ನಲ್ಲಿ ವಿಧಿಯೇ ಅವನನ್ನು ಆಟವಾಡಿಸಲು ಶುರುಮಾಡುತ್ತೆ. ಪರಿಣಾಮ ಏನಾಗುತ್ತೆ ಅನ್ನೋದನ್ನೂ ನಾವು ಊಹಿಸಬಹುದು.

ತಾರಾಗಣ: ಕುಮಾರ್‌ ದೇವ್‌, ದಿವಾಕರ್‌, ಶ್ರೇಯಾ, ಡಿಂಗ್ರಿ ನಾಗರಾಜ್‌, ನಂದನ್‌

ನಿರ್ದೇಶನ: ಉದಯ್‌ ಪ್ರೇಮ್‌

ಕುಮಾರ್‌ ದೇವ್‌ ತನ್ನದೇ ಹೆಸರಿನ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಮೂವರು ನಾಯಕಿಯರು, ಬಿಗ್‌ಬಾಸ್‌ ಖ್ಯಾತಿಯ ದಿವಾಕರ್‌ ನಟನೆ ಚೆನ್ನಾಗಿದೆ. ಇದು ಸಾಮಾಜಿಕ ಸಂದೇಶ ಸಾರಲೆಂದು ಮಾಡಿರುವ ಚಿತ್ರ. ಆ ಉದ್ದೇಶ ಈಡೇರಿದೆ. ಹೆಚ್ಚೇನನ್ನೂ ನಿರೀಕ್ಷಿಸುವಂತಿಲ್ಲ.

Oh My Love Film Review: 

ಅಸಂಖ್ಯಾತ ತಿರುವುಗಳ ಮಾಮೂಲು ಕಾಲೇಜ್‌ ಕಾರಿಡಾರ್‌ ಸಿನಿಮಾ ‘ಓ ಮೈ ಲವ್‌’. ನಿರ್ದೇಶಕ ಸ್ಮೈಲ್‌ ಶ್ರೀನು ಪ್ರೀತಿಗೂ ಪ್ರೇಮಕ್ಕೂ ಗಂಟು ಹಾಕಿದ್ದಾರೆ. ಅದಕ್ಕೆ ಫ್ಯಾಮಿಲಿ ಸೆಂಟಿಮೆಂಟು ಮೆತ್ತಿದ್ದಾರೆ. ಇವನ್ನೆಲ್ಲ ಕಾಪಾಡಿರುವುದು ಛಾಯಾಗ್ರಹಣ, ಮೇಕಿಂಗ್‌, ಅಕ್ಷಿತ್‌ ಶಶಿಕುಮಾರ್‌ ಅವರ ಆ್ಯಕ್ಷನ್‌ ಹಾಗೂ ಡ್ಯಾನ್ಸ್‌ . ಒಳ್ಳೆಯ ಕತೆ, ಸೂಕ್ತ ನಿರ್ದೇಶಕ ಸಿಕ್ಕರೆ ಅಕ್ಷಿತ್‌ಗೆ ಭವ್ಯ ಭವಿಷ್ಯವಿದೆ.

ಇಬ್ಬರು ಸ್ನೇಹಿತರು, ಒಬ್ಬ ಫ್ಲರ್ಚ್‌. ಸ್ನೇಹಿತನ ಮಗಳ ಕಾಪಾಡಲು ಹೋಗಿ ವಿಲನ್‌ ಕಣ್ಣಿಗೆ ಬೀಳುತ್ತಾನೆ. ಒಂದು ಕಡೆ ಯುದ್ಧ ಮತ್ತೊಂದು ಕಡೆ ಪ್ರೇಮ- ಹೀಗೆ ಎರಡೆರಡು ಚಕ್ರವ್ಯೂಹದೊಳಗೆ ಸುತ್ತುವ ಹೀರೋ ಪ್ರೀತಿಯನ್ನು ದಕ್ಕಿಸಿಕೊಳ್ಳುತ್ತಾನೆಯೇ ಎಂಬುದು ಚಿತ್ರದ ಕತೆ.

Follow Us:
Download App:
  • android
  • ios