ಕೊರೋನಾ ವೈರಸ್‌ ಆರ್ಭಟ ಮತ್ತೆ ಹೆಚ್ಚಾಗಿದೆ. ಎರಡನೇ ಅಲೆಯಲ್ಲಿ ಅನೇಕ ಸಿನಿಮಾ ತಾರೆಯರಿಗೆ ಸೋಂಕು ತಗುಲುತ್ತಿದೆ. ಬಾಲಿವುಡ್‌ ಮಂದಿಯನ್ನು ಬಿಡದೇ ಕಾಡುತ್ತಿರುವ ಸೋಂಕು ಈಗ ಸೌತ್ ಸುಂದರಿ ನಿವೇತಾ ಥಾಮಸ್‌ ಹಾಗೂ ನಿರ್ಮಾಪಕ ಅಲ್ಲು ಅರವಿಂದ್‌ಗೆ ಆವರಿಸಿಕೊಂಡಿದೆ.

ಮಾಸ್ಕ್ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದ್ದ ನಟ ಅಕ್ಷಯ್ ಕುಮಾರ್‌ಗೆ ಕೊರೋನಾ ಪಾಸಿಟಿವ್ 

'ನನಗೆ ಕೊರೋನಾ ಪಾಸಿಟಿವ್ ಎಂದು ತಿಳಿದು ಬಂದಿದೆ. ಐಸೋಲೇಟ್ ಆಗಿದ್ದೀನಿ. ವೈದ್ಯರು ನೀಡಿರುವ ಔಷಧಿಗಳನ್ನು ತೆಗೆದುಕೊಳ್ಳುತ್ತಿರುವೆ. ಶೀಘ್ರದಲ್ಲಿಯೇ ಚೇತರಿಸಿಕೊಳ್ಳುತ್ತೇನೆ. ದಯವಿಟ್ಟು ನೀವೆಲ್ಲರೂ ಆರೋಗ್ಯ ಕಾಪಾಡಿಕೊಳ್ಳಿ. ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ, ಗುಂಪಿನಿಂದ ದೂರವಿರಿ,' ಎಂದು ನಿವೇತಾ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಕೊರೋನಾ ಲಸಿಕೆ ಪಡೆದುಕೊಂಡಿದ್ದರೂ, ಕೊರೋನಾ ಸೋಂಕು ತಗುಲಿದೆ. ಕುಟುಂಬಕ್ಕೆ ವೈದ್ಯರು ನೀಡಿರುವ ಮಾಹಿತಿ ಪ್ರಕಾರ ಲಸಿಕೆ ನಮ್ಮ ದೇಹದಲ್ಲಿ ವರ್ಕ್ ಆಗಲು ಕೊಂಚ ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ಸೋಂಕು ತಾಗಿದೆ ಎಂದಿದ್ದಾರೆ. ಸಣ್ಣ ಪುಟ್ಟ ಲಕ್ಷಣಗಳು ಕಂಡು ಬಂದಿರುವ ಕಾರಣ ಮನೆಯಲ್ಲಿಯೇ ಐಸೋಲೇಟ್ ಆಗಿದ್ದಾರೆ. 

ನವಜೋಡಿ ಆದಿತ್ಯ-ಶ್ವೇತಾಗೆ ಕೊರೋನಾ ಪಾಸಿಟಿವ್ 

ಅಂದ ಹಾಗೆ ನಿವೇತಾ ಅಭಿನಯಿಸಿರುವ 'ವಕೀಲ್ ಸಾಬ್' ಚಿತ್ರಕ್ಕೆ ಅಲ್ಲು ಅರವಿಂದ್ ಬಂಡವಾಳ ಹಾಕಿದ್ದಾರೆ. ನಿರ್ಮಾಪಕ ಹಾಗೂ ನಟಿಗೆ ಸೋಂಕು ತಗುಲಿರುವ ಕಾರಣ ಇಡೀ ತಂಡ ಕೊರೋನಾ ಟೆಸ್ಟ್ ಮಾಡಿಸಿಕೊಳ್ಳುವ ಸಾಧ್ಯತೆಗಳಿವೆ.