ಪ್ರೇಮದ ಆಹ್ಲಾದತೆ, ವಿರಹದ ವಿಷಾದ, ಸ್ನೇಹದ ಧೈರ್ಯ ಎಲ್ಲವನ್ನೂ ಸಶಕ್ತವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಈ ಸಿನಿಮಾದ ಕತೆಯಲ್ಲಿ ಧುತ್ತೆಂದು ಒಂದು ತಿರುವು ಎದುರಾಗುತ್ತದೆ. ಅಲ್ಲಿಂದ ಈ ಕತೆಯು ಮತ್ತೊಂದು ಹಾದಿ ಹೊರಳಿಕೊಳ್ಳುತ್ತದೇ. ಅದೇ ಈ ಚಿತ್ರದ ಪ್ಲಸ್ಸು.

ಆರ್.ಎಸ್.

ಸ್ನೇಹದ ಬಿಸುಪು, ಪ್ರೇಮದ ನವಿರುತನ ಹೊಂದಿರುವ ಸರಳ ಸುಂದರ ಸಿನಿಮಾ ಇದು. ಇಲ್ಲೊಬ್ಬ ಮಧ್ಯಮ ವರ್ಗದ ಹುಡುಗನಿದ್ದಾನೆ. ಎಲ್ಲರಂತೆ ಅವನಿಗೆ ಆಪ್ತ ಸ್ನೇಹವಿದೆ. ಜೊತೆಗೆ ಅವನಿಗೊಂದು ಪ್ರೀತಿ ಆಗುತ್ತದೆ. ಅಲ್ಲಿಗೆ ಕತೆ ಶುರುವಾಗುತ್ತದೆ. ಮುಂದಿನದು ತಾಕಲಾಟದ ದಾರಿ. ಏರುಪೇರಿನ ಹಾದಿ. ಯಾವುದೇ ಸಿನಿಮಾದಲ್ಲಿ, ಯಾವುದೇ ಕತೆಯಲ್ಲಿ ಭಾವಗಳನ್ನು ಸರಿಯಾಗಿ ದಾಟಿಸಿದ್ದಾರೆಯೇ ಎಂಬುದು ಬಹಳ ಮುಖ್ಯ. ಇಲ್ಲಿ ಕತೆ ಸರಳವಾಗಿದೆ. ಆದರೆ ಅದನ್ನು ಕಟ್ಟಿಕೊಟ್ಟಿರುವ ರೀತಿ ಸೊಗಸಾಗಿದೆ. 

ಪ್ರೇಮದ ಆಹ್ಲಾದತೆ, ವಿರಹದ ವಿಷಾದ, ಸ್ನೇಹದ ಧೈರ್ಯ ಎಲ್ಲವನ್ನೂ ಸಶಕ್ತವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಈ ಸಿನಿಮಾದ ಕತೆಯಲ್ಲಿ ಧುತ್ತೆಂದು ಒಂದು ತಿರುವು ಎದುರಾಗುತ್ತದೆ. ಅಲ್ಲಿಂದ ಈ ಕತೆಯು ಮತ್ತೊಂದು ಹಾದಿ ಹೊರಳಿಕೊಳ್ಳುತ್ತದೇ. ಅದೇ ಈ ಚಿತ್ರದ ಪ್ಲಸ್ಸು. ಸುನೀಲ್, ಖುಷಿ, ಪ್ರಿಯಾ ತಮ್ಮ ಪಾತ್ರಕ್ಕೆ ತಕ್ಕಂತೆ ಜೀವ ತುಂಬಿದ್ದಾರೆ. ಒಟ್ಟಾರೆ ಇದೊಂದು ಪ್ರೇಮದ ಹತ್ತಾರು ಅವಸ್ಥಾಂತರಗಳನ್ನು ಮತ್ತು ಸ್ನೇಹದ ಬೆಚ್ಚಗಿನ ಭಾವವನ್ನು ದಾಟಿಸಲು ಯತ್ನಿಸುವ ಉತ್ತಮ ಪ್ರಯತ್ನ.

ಒಲವಿನ ಪಯಣ
ನಿರ್ದೇಶನ:
ಕಿಶನ್ ಬಲ್ನಾಡ್
ತಾರಾಗಣ: ಸುನೀಲ್, ಖುಷಿ, ಪ್ರಿಯಾ ಹೆಗ್ಡೆ, ಪದ್ಮಜಾ ರಾವ್, ಬಲರಾಜವಾಡಿ

ಅನಿರೀಕ್ಷಿತ ಘಟನೆಗಳ ಕಥಾಹಂದರ: ನಿರ್ದೇಶಕ ಕಿಶನ್‌, ‘ಶ್ರೀಮಂತ ಹುಡುಗಿಯ ಪ್ರೇಮದಲ್ಲಿ ಬಿದ್ದ ಹುಡುಗನ ಬದುಕಿನ ಅನಿರೀಕ್ಷಿತ ಘಟನೆಗಳ ಕಥಾಹಂದರ ಹೊಂದಿರುವ ಸಿನಿಮಾವಿದು’ ಎಂದರು. ನಾಯಕ ಸುನೀಲ್‌, ‘ಆರಂಭದಲ್ಲಿ ನಾನು ನಿರ್ಮಾಪಕರ ಕಂಪನಿಯಲ್ಲೇ ಕೆಲಸ ಮಾಡುತ್ತಿದ್ದೆ. ಅವರು ಸಿನಿಮಾ ನಿರ್ಮಿಸಲು ಕಾಯುತ್ತಿದ್ದರು. ನಾನು ಮೊದಲು ಬೇಡ ಎಂದು ಸಲಹೆ ನೀಡಿದ್ದೆ. ಆದರೆ ಹಠಕ್ಕೆ ಬಿದ್ದಾಗ ನಿರ್ದೇಶಕ ಕಿಶನ್‌ರನ್ನು ಪರಿಚಯಿಸಿದೆ. ನಂತರ ನಾವೆಲ್ಲ ಅವರ ಜತೆ ಕೈಜೋಡಿಸಿದೆವು’ ಎಂದರು. ಖುಶಿ ಹಾಗೂ ಪ್ರಿಯಾ ಹೆಗ್ಡೆ ನಾಯಕಿಯರು. ನಾಗರಾಜ್ ಎಸ್. ಮುಳಗುಂದ ಕಥೆ ಬರೆದು ಚಿತ್ರ ನಿರ್ಮಿಸಿದ್ದಾರೆ.